ಮುಗ್ಗ ಗುತ್ತು ಹಿರಿಯರಾದ ಕೆ. ಜಿ. ಬಂಗೇರರ 101 ನೇ ಹುಟ್ಟುಹಬ್ಬ ಆಚರಣೆ

0

ಬೆಳ್ತಂಗಡಿ : ಮುಗ್ಗ ಗುತ್ತು ಕುಟುಂಬದ ಹಿರಿಯರು 101 ನೇ ವರ್ಷಕ್ಕೆ ಪಾದಾರ್ಪಣೆ ಗೈಯುತ್ತಿರುವ ಕೆ. ಜಿ. ಬಂಗೇರರ ಹುಟ್ಟುಹಬ್ಬ ಆಚರಣೆ ನ.26 ರಂದು ಬೆಳ್ತಂಗಡಿ ಶ್ರೀ ನಾರಾಯಣ ಗುರು ವಾಣಿಜ್ಯ ಸಂಕೀರ್ಣದ ಸಭಾ ಭವನದಲ್ಲಿ ಶ್ರೀ ಕೆ. ಜಿ. ಬಂಗೇರ ಶತಮಾನೋತ್ಸವ ಆಚರಣಾ ಸಮಿತಿ ವತಿಯಿಂದ ಜರುಗಿತು.

ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ (ರಿ ) ಬೆಳ್ತಂಗಡಿ, ಮುಗ್ಗ ಗುತ್ತು ಕುಟುಂಬಸ್ಥರ ಟ್ರಸ್ಟ್ (ರಿ )ಬೆಳ್ತಂಗಡಿ, ಶ್ರೀ ಗುರುದೇವ ವಿವಿದೋದ್ದೇಶ ಸಹಕಾರ ಸಂಘ (ನಿ ) ಬೆಳ್ತಂಗಡಿ,ಶ್ರೀ ಗುರುದೇವ ಎಜುಕೇಷನಲ್ ಟ್ರಸ್ಟ್ (ರಿ )ಬೆಳ್ತಂಗಡಿ,ಇವರ ಜಂಟಿ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಿತ್ತು . ಕೆ. ಜಿ. ಬಂಗೇರ ಮತ್ತು ವೀರಮ್ಮ ದಂಪತಿ ದೀಪ ಬೆಳಗಿಸಿ ಉದ್ಘಾಟಿಸಿದರು.

ಬಳಿಕ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿದರು. ಇದೇ ಸಂದರ್ಭದಲ್ಲಿ ಮುಗ್ಗ ಗುತ್ತು ಕೆ. ಜಿ. ಬಂಗೇರರರ ನೂರೊಂದು ನೆನಪು ಸಂಭ್ರಮ ಪುಸ್ತಕವನ್ನು ಹಿರಿಯ ವಕೀಲರು ನೇಮಿರಾಜ ಶೆಟ್ಟಿ ಬಿಡುಗಡೆ ಗೊಳಿಸಿ ಶುಭ ಹಾರೈಸಿದರು.

ಶತಮಾನೋತ್ಸವ ಆಚರಣಾ ಸಮಿತಿಯ ಕಾರ್ಯಧ್ಯಕ್ಷ ರಾಗಿ ಮುಗ್ಗ ಗುತ್ತು ಕುಟುಂಬಸ್ಥರ ಟ್ರಸ್ಟ್ ನ ಆಡಳಿತ ಮೊಕ್ತೇಸರ ಮಾಜಿ ಶಾಸಕ ಕೆ. ವಸಂತ ಬಂಗೇರ, ಅಧ್ಯಕ್ಷರಾಗಿ ಶ್ರೀ ಗುರುದೇವ ವಿವಿದೊದ್ದೆಶ ಸಹಕಾರ ಸಂಘದ ಅಧ್ಯಕ್ಷರು ಎನ್. ಪದ್ಮನಾಭ ಮಾನಿಂಜ, ಗೌರವ ಅಧ್ಯಕ್ಷರಾಗಿ ವಿಧಾನ ಪರಿಷತ್ ಶಾಸಕ ಕೆ. ಹರೀಶ್ ಕುಮಾರ್, ಸಂಚಾಲಕರಾಗಿ ಚರಣ್ ಕೆ., ಗುಣಕರ ಅಗ್ನಡಿ, ಕಾರ್ಯದರ್ಶಿ ಗಳಾಗಿ ಭಗೀರಥ ಜಿ., ಮತ್ತು ಡಾ. ರಾಜಾರಾಮ್ ಕೆ. ಬಿ., ಕೋಶಧಿಕಾರಿಯಾಗಿ ಜಯವಿಕ್ರಮ್ ಕಲ್ಲಾಪು, ಸಮಿತಿ ಸದಸ್ಯರು, ಕುಟುಂಬಸ್ಥರು, ಹಿತೈಷಿಗಳು, ಗುರುದೇವ ಕಾಲೇಜು ವಿದ್ಯಾರ್ಥಿಗಳು,ಗುರುನಾರಾಯಣ ಸ್ವಾಮಿ ಸಂಘದ ಪದಾಧಿಕಾರಿಗಳು, ನಿರ್ದೇಶಕರು, ಗುರುದೇವ ವಿವಿದೊದ್ದೆಶ ಸಹಕಾರ ಸಂಘದ ಸಿಬ್ಬಂದಿಗಳು ಉಪಸ್ಥಿತರಿದ್ದರು.

ವಿವಿಧ ಸಂಘಟನೆಗಳಿಂದ ಹಿತೈಷಿಗಳಿಂದ ಕುಟುಂಬಸ್ಥರಿಂದ ಗೌರರ್ಪಣೆ ನಡೆಯಿತು.

LEAVE A REPLY

Please enter your comment!
Please enter your name here