HomePage_Banner
HomePage_Banner
HomePage_Banner

ಕಡಬದಲ್ಲಿ ಪುತ್ತೂರು ತಿರುಮಲ ಹೋಂಡಾ ಸಂಸ್ಥೆಯ 2ನೇ 3S ಶೋರೂಂ ಶುಭಾರಂಭ

Puttur_Advt_NewsUnder_1
Puttur_Advt_NewsUnder_1

ಸುಸಜ್ಜಿತ 3 ಎಸ್ ಶೋರೂಮ್

ಕಡಬದಲ್ಲಿ ಕಳೆದ 4 ವರ್ಷಗಳ ಹಿಂದೆ ತಿರುಮಲ ಹೋಂಡಾ ಸಂಸ್ಥೆಯು ಪಾದಾರ್ಪಣೆ ಮಾಡಿತ್ತು. ಇದೀಗ ಕಡಬ ತಾಲೂಕು ಕಛೇರಿ ಎದುರುಗಡೆ ತಿರುಮಲ ಹೋಂಡಾದ ಸುಸಜ್ಜಿತವಾದ 3 ಎಸ್ ( ಸೇಲ್ಸ್, ಸರ್ವೀಸ್, ಸ್ಪೇರ್‍ಸ್) ಶೋರೂಮ್ ಆರಂಭವಾಗಿದೆ. ಗ್ರಾಹಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಎಲ್ಲಾ ವಿಧದ ಸರ್ವೀಸ್ ವ್ಯವಸ್ಥೆಗಳು ಇಲ್ಲಿವೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ 9108471373ಗೆ ಸಂಪರ್ಕಿಸಬಹುದು.

ಪುತ್ತೂರು: ಕಳೆದ 12 ವರ್ಷಗಳಿಂದ ಪುತ್ತೂರಿನಲ್ಲಿ ಜನಮೆಚ್ಚುಗೆ ಪಡೆದುಕೊಂಡಿರುವ ಹೋಂಡಾ ಮೋಟಾರ್ ಸೈಕಲ್, ಸ್ಕೂಟರ್ ಇಂಡಿಯಾ ಪ್ರೈ ಲಿ.ನ ಅಧಿಕೃತ ಮಾರಾಟ ಸಂಸ್ಥೆಯಾಗಿರುವ ತಿರುಮಲ ಹೋಂಡಾದ 2 ನೇ ಸುಸಜ್ಜಿತ 3 ಎಸ್ ಶೋರೂಮ್ ಜೂ.18 ರಂದು ಕಡಬದಲ್ಲಿ ಶುಭಾರಂಭಗೊಂಡಿತು. ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಅಂಗಾರರವರು ದೀಪ ಬೆಳಗಿಸುವ ಮೂಲಕ ಶೋರೂಮ್ ಅನ್ನು ಉದ್ಘಾಟಿಸಿ ಶುಭ ಹಾರೈಸಿದರು. ಸೇಲ್ಸ್ ಪ್ರಾಂತೀಯ ಮ್ಯಾನೇಜರ್ ವಿಕ್ರಂ ಸಿಂಗ್‌ರವರು ರಿಬ್ಬನ್ ತುಂಡರಿಸಿ ಸಂಸ್ಥೆಗೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಸೇಲ್ಸ್ ಏರಿಯಾ ಇನ್‌ಚಾರ್ಜ್ ಕಾರ್ತಿಕ್ ಆನಂದನ್, ಜಿಲ್ಲಾ ಪಂಚಾಯತ್ ಸದಸ್ಯ ಕೃಷ್ಣ ಶೆಟ್ಟಿ ಕಡಬ, ತಾಪಂ ಸದಸ್ಯೆ ಪುಲಸ್ಯ ರೈ, ಕಡಬ ಗ್ರಾಪಂ ಸದಸ್ಯರುಗಳಾದ ಸಿ.ಜೆ ಸೈಮನ್, ಹನೀಫ್ ಕೆ.ಎಂ, ಎಪಿಎಂಸಿ ನಿರ್ದೇಶಕ ಮೇದಪ್ಪ ಗೌಡ ಡೆಪ್ಪುಣಿ ಮತ್ತಿತರರು ಆಗಮಿಸಿ ಶುಭ ಹಾರೈಸಿದರು.

ತಿರುಮಲ ಹೋಂಡಾ ಸಂಸ್ಥೆಯ ಮಾಲಕರಾದ ಕೃಷ್ಣ ಕಿಶೋರ್ ಎನ್.ಟಿ, ಅಖಿಲೇಶ್, ಅರುಣಾ ಕೃಷ್ಣ ಕಿಶೋರ್, ಕೀರ್ತಿ ಅಖಿಲೇಶ್‌ರವರುಗಳು ಅತಿಥಿಗಳನ್ನು ಹೂಗುಚ್ಛ ನೀಡಿ ಸ್ವಾಗತಿಸಿ, ಸತ್ಕರಿಸಿದರು. ತಿರುಮಲ ಹೋಂಡಾ ಸಂಸ್ಥೆಯ ಸೇಲ್ಸ್ ಮ್ಯಾನೇಜರ್ ಕಾರ್ತಿಕ್ ರೈ, ಸಂಸ್ಥೆಯ ವಿವಿಧ ಶಾಖೆಗಳ ಸೇಲ್ಸ್, ಸರ್ವಿಸ್ ವಿಭಾಗದ ವ್ಯವಸ್ಥಾಪಕರು, ಸಿಬ್ಬಂದಿ ಬಳಗದವರು ಸಹಕರಿಸಿದ್ದರು.

                                                         

ನೂತನವಾಗಿ ಅಸ್ತಿತ್ವಕ್ಕೆ
ಬಂದಿರುವ ಕಡಬ ತಾಲೂಕಿಗೆ ಹೋಂಡಾದ ಅತ್ಯಾಧುನಿಕ ಶೋರೂಮ್ ಬಂದಿರುವುದು ಹೋಂಡಾ ದ್ವಿಚಕ್ರ ವಾಹನ ಚಾಲಕ, ಮಾಲಕರಿಗೆ ಹಾಗೂ ಕಡಬದ ಜನತೆಗೆ ಸಂತಸದ ಸಂಗತಿಯಾಗಿದೆ. ಇದು ತಾಲೂಕಿನ ಅಭಿವೃದ್ಧಿಗೆ ಪೂರಕವಾಗಿದೆ. ಗ್ರಾಹಕರಿಗೆ ಪರಿಪೂರ್ಣವಾದ ಸೇವೆಯನ್ನು ಸಂಸ್ಥೆ ನೀಡುವ ಮೂಲಕ ಇನ್ನಷ್ಟು ಅಭಿವೃದ್ಧಿ ಹೊಂದಲಿ ಎಂದು ಶುಭ ಹಾರೈಸುತ್ತೇನೆ.– ಎಸ್. ಅಂಗಾರ, ಶಾಸಕರು ಸುಳ್ಯ

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.