ನಾವರ: ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿ ಸಮಿತಿ ರಚನೆ; ಅಧ್ಯಕ್ಷರಾಗಿ ರವಿರಾಜ ಕೆಲ್ಲ, ಕಾರ್ಯದರ್ಶಿಯಾಗಿ ವಿಜಯ್ ಕುಮಾರ್ ಜೈನ್

0

ನಾವರ : ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ನಾವರ ಇಲ್ಲಿ ನೂತನ ಅಭಿವೃದ್ಧಿ ಸಮಿತಿಯನ್ನು ನ.27 ರಂದು ರಚಿಸಲಾಯಿತು.

ನೂತನ ಅಧ್ಯಕ್ಷರಾಗಿ ರವಿರಾಜ ಕೆಲ್ಲ ಧರ್ಮಸ್ಥಳ, ಕಾರ್ಯದರ್ಶಿಯಾಗಿ ವಿಜಯ ಕುಮಾರ್ ಜೈನ್ ನಾವರ, ಉಪಾಧ್ಯಕ್ಷರಾಗಿ ನಿತ್ಯಾನಂದ ಯನ್ ಯೋಗಕ್ಷೇಮ ಹಾಗೂ ಉಪಾಧ್ಯಕ್ಷರಾಗಿ ಲಕ್ಷ್ಮಣ ಕುಲಾಲ್ ನಾವರ ಇವರನ್ನು ಆಯ್ಕೆ ಮಾಡಲಾಯಿತು.

ಸಭೆಯ ಅಧ್ಯಕ್ಷತೆಯನ್ನು ನಾವರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಪಿ.ಹೆಚ್.ಪ್ರಕಾಶ್ ಶೆಟ್ಟಿ ವಹಿಸಿದ್ದರು.

ಈ ಸಂದರ್ಭದಲ್ಲಿ ಮೊಕ್ತೇಸರರಾದ ರವಿ ಪೂಜಾರಿ, ಗಿರಿಜಾ, ಮಲ್ಲಿಕ ದೇವಾಡಿಗ ,ಪ್ರಧಾನ ಅರ್ಚಕರಾದ ನಾರಾಯಣ ರಾವ್ ,ಉಪಸ್ಥಿತರಿದ್ದರು.

ಪ್ರಮುಖರಾದ ವೀರೇಂದ್ರ ಕುಮಾರ್, ರಾಜಪಾದೆ, ಶೇಖರ ಪೂಜಾರಿ ಅಲೆಕ್ಕಿ, ಪ್ರಗತಿ ಬಂಧು ಒಕ್ಕೂಟದ ಅಧ್ಯಕ್ಷರಾದ ದೇಜಪ್ಪ ದೇವಾಡಿಗ , ಪ್ರಶಾಂತ ಹಿಮರಡ್ಡ, ರಾಜೂ ಸಾಲ್ಯಾನ್ ಬಿರ್ಮೆಕ್ಯಾರು, ಸೇವಾ ಪ್ರತಿನಿಧಿ ಪುಷ್ಪಾವತಿ ,ದಿನೇಶ್ ಗೋಳಿಕಟ್ಟೆ ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.

ವಿಜಯ ಕುಮಾರ್ ಜೈನ್ ಧನ್ಯವಾದ ಸಲ್ಲಿಸಿದರು.

LEAVE A REPLY

Please enter your comment!
Please enter your name here