ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಹಿಳಾ ಐಟಿಐಯಲ್ಲಿ ಮೃದು ಕೌಶಲ್ಯ ತರಬೇತಿ ಕಾರ್ಯಕ್ರಮ

0


ಉಜಿರೆ : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಹಿಳಾ ಐಟಿಐ ಯಲ್ಲಿ ನ.28 ರಂದು ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಗೂ ಶ್ರೀ ಧ.ಮಂ ಮಹಿಳಾ ಐಟಿಐ ಜಂಟಿ ಆಶ್ರಯದಲ್ಲಿ ನಾಂದಿ ಫೌಂಡೇಶನ್ ಸಹಯೋಗದೊಂದಿಗೆ ಒಂದು ವಾರಗಳ ಕಾಲ ಮೃದು ಕೌಶಲ್ಯ ತರಬೇತಿ ಕಾರ್ಯಕ್ರಮವು ನಡೆಯಿತು.

ಈ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಉಜಿರೆ ರುಡ್ ಸೆಟ್ ಸಂಸ್ಥೆಯ ನಿರ್ದೇಶಕರಾದ  ಸುರೇಶ್ ಎಂ ರವರು ಮಾತನಾಡಿ ನಿರುದ್ಯೋಗ ನಿವಾರಣೆ ಸ್ವ ಉದ್ಯೋಗದ ಪರಿಕಲ್ಪನೆಯಾಗಿದ್ದು ಹಿಂಜರಿಕೆ ಬೇಡ ಪ್ರಯತ್ನದಿಂದ ಎಲ್ಲವನ್ನು ಸಾಧಿಸಬಹುದು ಆಗ ಯಶಸ್ಸು ತನ್ನಿಂದ ತಾನಾಗಿ ಲಭಿಸುವುದು ಸಾಧ್ಯವಾದಷ್ಟು ಸಮಾಜಕ್ಕೆ ಒಳ್ಳೆಯದನ್ನು ಮಾಡಿ ಸರಳತೆ ಉತ್ತಮ ಆದರ್ಶ ಜೀವನದ ಒಂದು ಭಾಗವಾಗಿರಬೇಕೆಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ಕಾರ್ಯಕ್ರಮದ ಇನ್ನೋರ್ವ ಅತಿಥಿ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಮಂಗಳೂರು ಇಲ್ಲಿನ ಜಿಲ್ಲಾ ಸಂಯೋಜಕರಾದ ರೋಹಿತ್ ಕೆಆರ್ ಇವರು ಮಾತನಾಡಿ ಸರ್ಕಾರಿ ಇಂದ ಮಹಿಳೆಯರಿಗೆ ಸಿಗುವ ಸೌಲಭ್ಯ ಅದನ್ನು ಪಡೆಯಲು ಅನುಸರಿಸಬೇಕಾದ ವಿಧಾನಗಳು ಕೌಶಲ್ಯ ದೊಂದಿಗೆ ಜೀವನ ನಿರ್ವಹಣೆ, ಉದ್ಯೋಗ ನಿರ್ವಹಣೆ ಹಾಗೂ ಸಾಮಾಜಿಕ ಹಾಗೂ ಆರ್ಥಿಕ ನಿರ್ವಹಣೆ ಕುರಿತು ಸಲಹೆ ನೀಡಿದರು. ವೇದಿಕೆಯಲ್ಲಿ ಸಂಸ್ಥೆಯ ಪ್ರಾಂಶುಪಾಲ ವಿ ಪ್ರಕಾಶ್ ಕಾಮತ್ ಹಾಗೂ ನಾಂದಿ ಫೌಂಡೇಶನ್ ನ ತರಬೇತುದಾರರು ಆದ ಶ್ರೀ ಸುಧೀರ್ ಎಂ ಇವರು ಉಪಸ್ಥಿತರಿದ್ದರು.

ಕುಮಾರಿ ಭಾಗ್ಯಲಕ್ಷ್ಮಿ ಕಾರ್ಯಕ್ರಮ ನಿರ್ವಹಣೆ ಮಾಡಿ ಎಲ್ಲರಿಗೂ ಧನ್ಯವಾದಗಳನ್ನು ಹೇಳಿದರು.

LEAVE A REPLY

Please enter your comment!
Please enter your name here