








ನಾರಾವಿ : ನಾರಾವಿ ಸಂತ ಅಂತೋನಿ ಪದವಿ ಕಾಲೇಜಿನ ಸಭಾಂಗಣದಲ್ಲಿ ಸಂತ ಪಾವ್ಲರ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವದ ಪ್ರಯುಕ್ತ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಆಸ್ಪತ್ರೆ ಹಾಗೂ ರಾಷ್ಟ್ರೀಯ ಸೇವಾ ಯೋಜನಾ ಘಟಕ ಇವರ ಸಹಯೋಗದಲ್ಲಿ ರಕ್ತದಾನ ಶಿಬಿರ ನಡೆಯಿತು. ಉದ್ಘಾಟನಾ ಸಮಾರಂಭದಲ್ಲಿ ಉಪಸ್ಥಿತರಿದ್ದ ಕಾಲೇಜಿನ ಪ್ರಾಂಶುಪಾಲರಾದ ವಂದನೀಯ ಫಾದರ್ ಆಲ್ವಿನ್ ಸೆರಾವೊ ಇವರು ರಕ್ತದಾನದ ಮಹತ್ವವನ್ನು ತಿಳಿಸಿ ಶುಭ ಹಾರೈಸಿದರು.





ವೇದಿಕೆಯಲ್ಲಿ ಮುಖ್ಯ ಶಿಕ್ಷಕಿಯಾದ ಸೋಫಿಯಾ ಫೆರ್ನಾಂಡಿಸ್, ಫಾದರ್ ಮುಲ್ಲರ್ ಮೆಡಿಕಲ್ ಆಸ್ಪತ್ರೆಯ ವೈದ್ಯಾಧಿಕಾರಿ ಡಾ| ಶಾರನ್, ಎನ್. ಎಸ್. ಎಸ್. ಘಟಕದ ಯೋಜನಾಧಿಕಾರಿ ದಿನೇಶ್ ಬಿ. ಕೆ., ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷರಾದ ಶ್ರೀ ವಿನ್ಸೆಂಟ್ ರೊಡ್ರಿಗಸ್ ಉಪಸ್ಥಿತರಿದ್ದರು.
ಯೋಜನಾಧಿಕಾರಿಗಳಾದ ದಿನೇಶ್ ಬಿ. ಕೆ. ಸ್ವಾಗತಿಸಿ, ಉಪನ್ಯಾಸಕರಾದ ಅವಿನಾಶ್ ಲೋಬೊ ಕಾಐಕ್ರಮ ನಿರೂಪಿಸಿದರು. ನಾರಾವಿ ಪರಿಸರದ ಸುಮಾರು ೭೩ ಮಂದಿ ರಕ್ತದಾನ ಮಾಡಿದರು.


 
            