ವರ್ಷದೊಳಗಡೆ ಕಡಬದಲ್ಲಿ ಮಿನಿ ವಿಧಾನಸೌಧ ಕಾಮಗಾರಿ ಪೂರ್ಣ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಐವನ್ ಡಿಸೋಜ ಪತ್ರಿಕಾಗೋಷ್ಠಿ

ಕಂದಾಯ, ಸರ್ವೆ ಇಲಾಖೆ ಜನಪರವಾಗಿ ಕೆಲಸ ಮಾಡಿದರೆ, ಜನರ ಅರ್ಧ ಸಮಸ್ಯೆ ಪರಿಹಾರ: ಸಭೆಯ ಮಧ್ಯದಲ್ಲಿ ಐವನ್ ಡಿಸೋಜ ಅವರು ಅಧಿಕಾರಿಗಳ ಬಗ್ಗೆ ಉಲ್ಲೇಖಿಸಿ ಮಾತನಾಡಿ, ಕಂದಾಯ ಇಲಾಖೆ ಹಾಗೂ ಸರ್ವೆ ಇಲಾಖೆಯವರು ಜನಪರವಾಗಿ ಕೆಲಸ ಮಾಡಿದರೆ ಜನರ ಅರ್ಧ ಸಮಸ್ಯೆಯೇ ಸರಿಯಾಗುತ್ತದೆ, ಸಾರ್ವಜನಿಕರನ್ನು ಕಂದಾಯ ಇಲಾಖೆಗೆ ವೃಥಾ ಅಲೆದಾಡಿಸಬಾರದು, ಕಂದಾಯ ಅಧಿಕಾರಿಗಳು ಜನರ ಬಳಿಗೆ ಹೋಗಿ ಸ್ಪಂದಿಸುವ ಗುಣ ಬೆಳೆಸಿಕೊಳ್ಳಬೇಕು ಎಂದು ಸೂಚಿಸಿದರು.

ಕಡಬ ತಾಲೂಕು ಅನುಷ್ಟಾನದ ಹಿನ್ನೆಲೆಯಲ್ಲಿ ಉದ್ದೇಶಿತ ಮಿನಿ ವಿಧಾನ ಸೌಧದ ಕಾಮಗಾರಿಯನ್ನು ವರ್ಷದೊಳಗಡೆ ಪೂರ್ಣಗೊಳಿಸಿ ಎಲ್ಲಾ ಇಲಾಖೆಗಳು ಒಂದೇ ಸೂರಿನಡಿ ಬರುವಂತೆ ನೋಡಿಕೊಳ್ಳಲಾಗುವುದು ಎಂದು ರಾಜ್ಯ ಕಂದಾಯ ಸಚಿವರ ಸಂಸದೀಯ ಕಾರ್ಯದರ್ಶಿ ಐವನ್ ಡಿಸೋಜಾ ಹೇಳಿದರು.

ಅವರು ಜೂ.19ರಂದು ಕಡಬದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಜಿಲ್ಲೆಯಲ್ಲಿ ಘೋಷಣೆಯಾಗಿರುವ ನೂತನ ತಾಲೂಕುಗಳ ಅನುಷ್ಠಾನದ ದೃಷ್ಠಿಯಲ್ಲಿ ನಾನು ಖದ್ದಾಗಿ ಮುತುವರ್ಜಿವಹಿಸುತ್ತಿದ್ದೇನೆ. ಕಡಬದಲ್ಲಿ ಆದಷ್ಟು ಬೇಗ ತಾಲೂಕು ಅನುಷ್ಟಾನಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ. ಕಡಬದಲ್ಲಿ ಮಿನಿ ವಿಧಾನ ಸೌಧ ನಿರ್ಮಾಣ ಮಾಡಲು ಸರಕಾರ ಹತ್ತು ಕೂಟಿ ರೂ ಮಂಜೂರು ಮಾಡಿದೆ. ಅದರಲ್ಲಿ ಈಗಾಗಲೇ ಎರಡು ಕೋಟಿ ರೂ ಬಿಡುಗಡೆಗೊಂಡಿದೆ, ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಕರ್ನಾಟಕ ಗೃಹ ನಿರ್ಮಾಣ ಮಂಡಳಿಗೆ ಗುತ್ತಿಗೆ ನೀಡಲಾಗಿದೆ. ಕಾಮಗಾರಿಯನ್ನು ಇನ್ನೆರಡು ತಿಂಗಳಲ್ಲಿ ಪ್ರಾರಂಭಿಸಲಾಗುವುದು, ಒಂದು ವರ್ಷದೊಳಗೆ ಕಾಮಗಾರಿ ಮುಗಿಸಿ ಲೋಕಾರ್ಪಣೆ ಮಾಡಲಾಗುವುದು ಎಂದರು. ಕೊಳೆ ರೋಗ ಪರಿಹಾರಕ್ಕಾಗಿ ಜಿಲ್ಲೆಯಲ್ಲಿ 49,631 ರೈತರಿಗೆ 49,24,495 ಮಂಜೂರಾಗಿದೆ, ಕಡಬದಲ್ಲೇ 8429 ಜನರಿಗೆ 7,46,24824 ರೂ ಖಾತೆಗಳಿಗೆ ಜಮೆಯಾಗಿದೆ. ರೈತರ ಸಾಲ ಮನ್ನಾ ಮಾಡಿರುವ ಸರಕಾರ ಈಗಾಗಲೇ ಋಣ ಪತ್ರವನ್ನು ರೈತರಿಗೆ ಕಳುಹಿಸಿಕೊಟ್ಟಿದೆ, ಸಾಲ ಮನ್ನಾ ವಿಚಾರದಲ್ಲಿ ಸಹಕಾರಿ ಸಂಘಗಳು ರೈತರಿಗೆ ಸಮರ್ಪಕ ಮಾಹಿತಿ ನೀಡುತ್ತಿಲ್ಲ, ಇದು ಸರಕಾರಕ್ಕೆ ಹಿನ್ನೆಡೆಯಾಗುತ್ತಿದೆ, ಈ ಹಿನ್ನೆಲೆಯಲ್ಲಿ ರೈತರಿಗೆ ಸರಕಾರ ನೇರವಾಗಿ ಋಣಪತ್ರ ನೀಡುತ್ತಿದೆ. ಸರಕಾರ ಕಂದಾಯ ಇಲಾಖೆಯಲ್ಲಿ ಸರಕಾರದ ಕೆಲಸ ಕಾರ್ಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ. ಅದರಲ್ಲೂ ಪುತ್ತೂರು ತಾಲೂಕಿನಲ್ಲಿ ಸಹಾಯಕ ಆಯುಕ್ತ ಕೃಷ್ಣಮೂರ್ತಿಯವರ ನೇತೃತ್ವದಲ್ಲಿ ಕಂದಾಯ ಇಲಾಖಾ ಕೆಲಸ ಕಾರ್ಯಗಳು ಅಚ್ಚುಕಟ್ಟಾಗಿ ನಡೆಯುತ್ತಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಐವನ್ ಡಿಸೋಜಾ, ಕಡಬದಲ್ಲಿ ವಿವಿಧ ಇಲಾಖೆಗಳನ್ನು ಶೀಘ್ರ ಅನುಷ್ಠಾನ ಮಾಡಲು, ತಾಲೂಕು ಮಟ್ಟದ ಕಛೇರಿಗಳನ್ನು ತೆರೆಯಲು ಕ್ರಮ ಕೈಗೊಳ್ಳಲಾಗುವುದು, ಅದರಲ್ಲೂ ಉಪನೊಂದಾವಣೆ ಕಛೇರಿಯನ್ನು ತೆರೆಯಲು ಲಭ್ಯ ಕಟ್ಟಡದಲ್ಲಿ ಪ್ರಾರಂಭಿಸಲು ಕ್ರಮ ಜರಗಿಸಲಾಗುವುದು, ಸಿಬ್ಬಂದಿಗಳ ಕೊರತೆಯನ್ನು ಮನಗಂಡು ಆದ್ಯತೆ ನೆಲೆಯಲ್ಲಿ ನೇಮಕಾತಿಗೆ ಸರಕಾರ ಮುಂದಾಗಲಿದೆ ಎಂದರು. ಅಕ್ರಮ ಸಕ್ರಮದಲ್ಲಿ ಕಡಬ ತಾಲೂಕಿನಲ್ಲಿ 13533 ಅರ್ಜಿಗಳ ಬಂದಿವೆ, 21748 ಎಕ್ರೆ ಭೂಮಿಯ ಹಕ್ಕುಪತ್ರ ವಿತರಣೆ ಮಾಡಲು ಹೋಬಳಿ ಮಟ್ಟದ ಅಕ್ರಮ-ಸಕ್ರಮ ಸಮಿತಿ ರಚಿಸಲಾಗುವುದು ಎಂದು ಐವನ್ ಹೇಳಿದರು. ಸರಕಾರ ಇಷ್ಟೊಂದು ಉತ್ತಮ ಕೆಲಸ ಮಾಡಿದರೂ ವಿರೋಧ ಪಕ್ಷದವರು ಸರಕಾರ ಕೆಲಸ ಮಾಡುತ್ತಿಲ್ಲ ಎಂದು ವೃಥಾ ಆರೋಪ ಮಾಡುತ್ತಿದ್ದಾರೆ.ಅವರು ರಾಜ್ಯ ಸರಕಾರದ ಮೇಲೆ ಆರೋಪ ಮಾಡುವುದನ್ನು ಬಿಟ್ಟು ಕೇಂದ್ರದ ಅನುದಾನ ಸಮರ್ಪಕವಾಗಿ ನೀಡದಿರುವುರ ಬಗ್ಗೆ ಧ್ವನಿ ಎತ್ತಲಿ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಪುತ್ತೂರು ಸಹಾಯಕ ಆಯುಕ್ತ ಎಚ್.ಕೆ.ಕೃಷ್ಣ ಮೂರ್ತಿ, ಜಿಲ್ಲಾ ಪಂಚಾಯತಿ ಸದಸ್ಯ ಪಿ.ಪಿ.ವರ್ಗೀಸ್, ತಾಲೂಕು ಪಂಚಾಯತಿ ಸದಸ್ಯರಾದ ಗಣೇಶ್ ಕೈಕುರೆ, ಕೆ.ಟಿ.ವಲ್ಸಮ್ಮ, ಶುಭದಾ ಎಸ್ ರೈ. ಕಡಬ ತಹಶಿಲ್ದಾರ್ ಜೋನ್ ಪ್ರಕಾಶ್ ರೋಡ್ರಿಗಸ್ ಮತ್ತಿತರರು ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಕಡಬ ತಹಸೀಲ್ದಾರ್ ಕಛೇರಿಗೆ ಭೇಟಿ ನೀಡಿ ಬಳಿಕ ಐವನ್ ಡಿಸೋಜ ಅವರು ಅಧಿಕಾರಿಗಳ ಸಭೆ ಮತ್ತು ಸಾರ್ವಜನಿಕ ಅಹವಾಲು ಸ್ವೀಕರಿಸಿದರು.

ಅಕ್ರಮ ಸಕ್ರಮ ಭೂಮಿ ಪರಾಭಾರೆಗೆ ಸರಕಾರಕ್ಕೆ ಶಿಫಾರಸ್ಸು
ಅಕ್ರಮ ಸಕ್ರಮ ಮಂಜೂರತಿದಾರರು ತಮ್ಮ ಅವಧಿ ಮುಗಿದಂತೆ ವಿವಿಧ ಸಮಸ್ಯೆಗಳಿಗೆ, ಹಣಕಾಸಿನ ತೊಂದರೆಗೆ , ೧೫ವರ್ಷ ಕಳೆದು ಭೂಮಿ ಪರಾಬಾರೆಗೆ ಅವಕಾಶವಿದ್ದು ಪ್ರಸುತ್ತ ಸರಕಾರ ೨೫ ವರ್ಷ ಕಳೆದರು ಸರಕಾರದ ಅನುಮತಿ ಪಡೆಯಬೇಕೆಂದು ಸುತ್ತೋಲೆ ಹೊರಡಿಸಿದ್ದರಿಂದ ಜನಸಾಮಾನ್ಯರಿಗೆ ತೊಂದರೆ ಬಗ್ಗೆ ಸರಕಾರಕ್ಕೆ ಶಿಫಾರಸ್ಸು ಮಾಡಲಾಗುವುದು ಜನಸಾಮಾನ್ಯರಿಗೆ ಯಾವುದೇ ತೊಂದರೆ ಆಗದಂತೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. -ಐವನ್ ಡಿ ಸೋಜ ಸಂಸದೀಯ ಕಾರ್ಯದರ್ಶಿ ಕಂದಾಯ ಇಲಾಖೆ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.