ಅಳದಂಗಡಿ: ಶ್ರೀ ಗೆಜ್ಜೆಗಿರಿ ಕ್ಷೇತ್ರ ಮಹಾತ್ಮೆ ಪ್ರಸಂಗ ಲೋಕಾರ್ಪಣೆ

0

ಅಳದಂಗಡಿ : ಶ್ರೀ ಕ್ಷೇತ್ರ ಗೆಜ್ಜೆಗಿರಿ ಶ್ರೀ ಆದಿ ಧೂಮಾವತಿ ,ದೇಯಿ ಬೈದೆತಿ ಅಮ್ಮನರ ಬೆಳಕಿನಗೆಜ್ಜೆ ಸೇವೆಯ ಶ್ರೀ ಗೆಜ್ಜೆಗಿರಿ ಯಕ್ಷಗಾನ ಮೇಳದ ಪ್ರಥಮ ಐದು ದಿನಗಳ ಯಕ್ಷಗಾನ ಬಯಲಾಟ ವನ್ನು ರಕ್ಷಿತ್ ಶಿವರಾಂ ಗೌರವ ಅಧ್ಯಕ್ಷತೆಯ ಯಕ್ಷ ಬಳಗ ಬೆಳ್ತಂಗಡಿ ಬಳಗದ ನೇತೃತ್ವದಲ್ಲಿ ಅಳದಂಗಡಿಯಲ್ಲಿ ನ.27ರಂದು ಉದ್ಘಾಟನೆಗೊಂಡಿತು.

ಶ್ರೀ ಗೆಜ್ಜೆಗಿರಿ ಕ್ಷೇತ್ರ ಮಹಾತ್ಮೆ ಪ್ರಸಂಗವನ್ನು ಸಮಿತಿಯ ಗೌರವ ಅಧ್ಯಕ್ಷರಾದ ರಕ್ಷಿತ್ ಶಿವರಾಂ ರವರು ಕಥಾ ಪುಸ್ತಕವನ್ನು ಯಕ್ಷ ಬೊಳ್ಳಿ ದಿನೇಶ್ ರೈ ಕಡಬ ರವರಿಗೆ ಹಸ್ತಾಂತರ ಮಾಡುವ ಮೂಲಕ ಬಿಡುಗಡೆಗೊಳಿಸಿ , ಉದ್ಘಾಟಿಸಿದರು. ಪ್ರಥಮ ಪ್ರದರ್ಶನದಲ್ಲೇ ನೆರೆದಿದ್ದ ಬ್ರಹತ್ ಸಂಖ್ಯೆಯ ಅಭಿಮಾನಿಗಳ ಸಮ್ಮಖದಲ್ಲಿ ಪ್ರದರ್ಶನಗೊಂಡು ಆಪಾರ ಜನಮೆಚ್ಚುಗೆಗೆ ಪಾತ್ರವಾಯಿತು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ರಕ್ಷಿತ್ ಶಿವರಾಂ ರವರು ತುಳುನಾಡಿನ ಮಣ್ಣಿನ ಮೂಲ ಜನಪದ ಯಕ್ಷಗಾನವನ್ನು ಉಳಿಸಿ ಬೆಳೆಸುವ ಜವಬ್ದಾರಿ ನಮ್ಮ ಮೇಲಿದೆ. ಈ ನಿಟ್ಟಿನಲ್ಲಿ ನೂತನವಾಗಿ ತಿರುಗಾಟ ಆರಂಭಿಸಿದ ಗೆಜ್ಜೆಗಿರಿ ಯಕ್ಷಗಾನ ಮಂಡಳಿಯನ್ನು ಬೆಂಬಲಿಸುವ ನಿಟ್ಟಿನಲ್ಲಿ ಐದು ದಿನಗಳ ಕಾಲ ಯಕ್ಷಗಾನ ಬಯಲಾಟ ನಡೆಸುವ ಮೂಲಕ ಬೆಂಬಲಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇತರ ಮೇಳಗಳ ಯಕ್ಷಗಾನ ಬಯಲಾಟವನ್ನು ಗ್ರಾಮ ಗ್ರಾಮಗಳಲ್ಲಿ ನಡೆಸುವ ಉದ್ದೇಶ ಯಕ್ಷ ಬಳಗ ಬೆಳ್ತಂಗಡಿ ಮಾಡಲಿದೆ ಎಂದರು.

ಈ ಸಂದರ್ಭದಲ್ಲಿ ಅಳದಂಗಡಿ ಅರಮನೆಯ ಶ್ರೀ ಡಾ. ಪದ್ಮಪ್ರಸಾದ್ ಅಜಿಲ , ಶ್ರೀ ಕ್ಷೇತ್ರ ಗೆಜ್ಜೆಗಿರಿ ಸಮಿತಿಯ ಅಧ್ಯಕ್ಷರಾದ ಪಿತಾಂಬರ ಹೇರಾಜೆ, ಯಕ್ಷ ಬಳಗ ಬೆಳ್ತಂಗಡಿ ಅಧ್ಯಕ್ಷ ಸಂತೋಷ್ ಗೌಡ ವಳಂಬ್ರ ,ಕಾರ್ಯದರ್ಶಿ ನಿತ್ಯಾನಂದ ನಾವರ , ಕೋಶಾಧಿಕಾರಿ ಶೇಖರ್ ಕುಕ್ಕೇಡಿ , ಅಳದಂಗಡಿ ವಲಯ ಸಮಿತಿಯ ಅಧ್ಯಕ್ಷರಾದ ಸುಭಾಷ್ ಚಂದ್ರ ರೈ, ಗೌರವ ಸಲಹೆಗಾರರಾದ ನಾಗಕುಮಾರ್ ಜೈನ್ ಕೋಶಾದಿಕಾರಿ ಚಂದ್ರಶೇಖರ್ ಅಳದಂಗಡಿ,ಗೌರವಾಧ್ಯಕ್ಷ ಸಂಜೀವ ಪೂಜಾರಿ ಕೊಡಂಗೆ , ಶ್ರೀ ನಾರಾಯಣ ಗುರುಸ್ವಾಮಿ ಸೇವಾ ಸಂಘದ ಅಧ್ಯಕ್ಷ ಚಿದಾನಂದ ಪೂಜಾರಿ ಎಲ್ದಕ್ಕ , ಪ್ರಗತಿಪರ ಕೃಷಿಕ ಗಂಗಾಧರ ಮಿತ್ತಮಾರ್ , ಜನಜಾಗೃತಿ ವೇದಿಕೆಯ ಸ್ಥಾಪಕಧ್ಯಕ್ಷ ವಸಂತ ಸಾಲಿಯಾನ್ ಕಾಪಿನಡ್ಕ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಯಕ್ಷಗಾನ ಹಿರಿಯ , ಕಿರಿಯ ಕಲಾವಿದರು ಸೇರಿದಂತೆ ಕಲಾ ಪೋಷಕರನ್ನು ಸನ್ಮಾನಿಸಲಾಯಿತು.

LEAVE A REPLY

Please enter your comment!
Please enter your name here