ಬೆಳಾಲು ರಾಮಕೃಷ್ಣ ಭಟ್ ರವರಿಗೆ  ಅನಿತಾ ಕೌಲ್ ನೆನಪಿನ  ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ

0

ಬೆಳ್ತಂಗಡಿ: ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ವತಿಯಿಂದ, ಜನಸ್ನೇಹಿ ಐ ಎ ಎಸ್ ಅಧಿಕಾರಿ ಅನಿತಾ ಕೌಲ್ ನೆನಪಿನಲ್ಲಿ ಪ್ರತೀ ವರ್ಷ ನೀಡುತ್ತಿರುವ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ದ ಕ ಜಿಲ್ಲೆಯಿಂದ, ಇಬ್ಬರು ಶಿಕ್ಷಕರನ್ನು ಆಯ್ಕೆ ಮಾಡಲಾಗಿದ್ದು, ಇದರಲ್ಲಿ  ಬೆಳ್ತಂಗಡಿ ತಾಲೂಕಿನ ಬೆಳಾಲು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ರಾಮಕೃಷ್ಣ ಭಟ್ ಚೊಕ್ಕಾಡಿಯವರು ಆಯ್ಕೆ ಆಗಿರುತ್ತಾರೆ.

ಶೈಕ್ಷಣಿಕವಾಗಿ ಮತ್ತು ಸಮುದಾಯಕ್ಕೆ ನೀಡಿದ ವಿಶೇಷ ಕೊಡುಗೆ ಮತ್ತು ಸೇವೆಯನ್ನು ಪರಿಗಣಿಸಿ ಈ ಪುರಸ್ಕಾರಕ್ಕೆ ಇವರ ಆಯ್ಕೆಯಾಗಿರುವುದಾಗಿ  ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here