






ಬೆಳ್ತಂಗಡಿ : ಜಿಲ್ಲೆಯ ಇತಿಹಾಸ ಪ್ರಸಿದ್ಧವಾದ ವೇಣೂರು ಪೆರ್ಮುಡ ಹೊನಲು ಬೆಳಕಿನ 30 ನೇ ವರ್ಷದ ಸೂರ್ಯ -ಚಂದ್ರ ಜೋಡುಕರೆ ಬಯಲು ಕಂಬಳ ಡಿ. 3 ರಂದು ನಡೆಯಲಿದೆ ಎಂದು ಕಂಬಳ ಸಮಿತಿಯ ಅಧ್ಯಕ್ಷ ಲ. ನಿತೀಶ್ ಕೋಟ್ಯಾನ್ ಮತ್ತು ಕಾರ್ಯಧ್ಯಕ್ಷ ಶೇಖರ ಕುಕ್ಕೆಡಿ ಹೇಳಿದರು. ಅವರು ನ.30 ರಂದು ಬೆಳ್ತಂಗಡಿ ಪತ್ರಿಕಾ ಭವನದಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.


ಈ ವರ್ಷ ವಿಶೇಷವಾಗಿ 30ನೇ ವರ್ಷದ ಕಂಬಳವಾಗಿದ್ದು ಕಂಬಳದ ಎಲ್ಲಾ ಪೂರ್ವ ತಯಾರಿ ಸಂಪೂರ್ಣ ಮುಗಿದಿರುತ್ತದೆ. ಈ ವರ್ಷ 200 ಜೊತೆ ಕೋಣಗಳು ಭಾಗವಹಿಸುವ ನಿರೀಕ್ಷೆ ಇದ್ದರು ನಿಗದಿಯಂತೆ 24 ಗಂಟೆಯೊಳಗೆ ಮುಗಿಸಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಕಂಬಳವನ್ನು ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ. ಪದ್ಮ ಪ್ರಸಾದ್ ಅಜಿಲರು ಉದ್ಘಾಟನೆ ಮಾಡಲಿದ್ದಾರೆ.ಸಂಜೆ ನಡೆಯುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಮಿತಿಯ ಗೌರವ ಅಧ್ಯಕ್ಷ ಮಾಜಿ ಶಾಸಕ ವಸಂತ ಬಂಗೇರ ವಹಿಸಲಿದ್ದಾರೆ, ಕಾರ್ಯಕ್ರಮದಲ್ಲಿ ವಿವಿಧ ಜನಪ್ರತಿನಿದಿನಗಳು, ಗಣ್ಯರು, ಪ್ರಮುಖರು ಭಾಗವಹಿಸಲಿದ್ದಾರೆ ಎಂದರು





ಕರ್ನಾಟಕ ಸರಕಾರದ ಮಾಜಿ ಮುಖ್ಯ ಮಂತ್ರಿ ವಿಧಾನ ಸಭಾ ವಿರೋಧ ಪಕ್ಷದ ನಾಯಕರು ಸಿದ್ದರಾಮಯ್ಯರವರು ಡಿ.4 ರಂದು ಬೆಳಿಗ್ಗೆ ಆಗಮಿಸಲಿದ್ದಾರೆ.
ಪತ್ರಿಕಾ ಗೋಷ್ಠಿಯಲ್ಲಿ ಸಮಿತಿಯ ಉಪಾಧ್ಯಕ್ಷ ಸ್ಟಿವನ್ ಮೋನಿಸ್, ಸಲಹೆಗಾರ ಪದ್ಮನಾಭ ಸಾಲಿಯಾನ್ ಮಾಲಾಡಿ, ಸದಸ್ಯರಾದ ದಯಾನಂದ ದೇವಾಡಿಗ, ಜಯಂತ ಕೋಟ್ಯಾನ್ ಕುಕ್ಕೆಡಿ ಉಪಸ್ಥಿತರಿದ್ದರು.






