ಮಡಂತ್ಯಾರು: ಮಾನವೀಯ ಸಂಘದ ಉದ್ಘಾಟನಾ ಸಮಾರಂಭ

0

ಮಡಂತ್ಯಾರು : ಸೇಕ್ರೆಡ್ ಹಾರ್ಟ್ ಕಾಲೇಜ್, ಮಡಂತ್ಯಾರು ಇಲ್ಲಿನ ಮಾನವೀಯ ಸಂಘದ ಉದ್ಘಾಟನಾ ಸಮಾರಂಭವನ್ನು ನ. 30  ರಂದು ಕಾಲೇಜಿನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಪ್ರಾಂಶುಪಾಲ ಡಾ.ಜೋಸೆಫ್ ಎನ್.ಎಂ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪ್ರೊ.ರಾಜನ್ ವಿ.ಎನ್ ಭಾಗವಹಿಸಿದ್ದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಇಡೀ ಜಗತ್ತಿನಲ್ಲಿ ಪರಮಾಣು ಅತ್ಯಂತ ಬಲಿಷ್ಠವಾದದು ಆದರೆ, ಅದಕ್ಕಿಂತಲೂ ಬಲಿಷ್ಠವಾದುದು ಯುವಶಕ್ತಿ. ಇಂತಹ ಯುವ ಸಮೂಹ ಮನಸ್ಸು ಮಾಡಿದರೆ ಏನನ್ನು ಬೇಕಾದರೂ ಸಾಧಿಸಬಹುದು ಎಂದು ಹೇಳಿ ಇಂತಹ ಮಾನವೀಯ ಸಂಘಗಳ ಮೂಲಕ ವಿದ್ಯಾರ್ಥಿ ಸಮೂಹಕ್ಕೆ ಅನುಕೂಲವಾಗುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ.ಅರುಣ್ ಜಾನ್ಸನ್ ಬ್ರಾಂಕೋ ಸ್ವಾಗತಿಸಿದರು. ಮೋಕ್ಷಿತ್ ಧನ್ಯವಾದ ಸಮರ್ಪಿಸಿದರು. ಮರಿಯಾ ಜೋಸೆಫ್ ಮತ್ತು ನಿಖಿತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here