ಅರಂತೋಡು: ಸ್ಪೊರ್ಟ್ಸ್ ಕ್ಲಬ್ ನೋಂದಣಿಗೆ ತಗಲುವ ವೆಚ್ಚವನ್ನು ನೀಡಿದ ಕೆಪಿಸಿಸಿ ಸದಸ್ಯ ನಂದಕುಮಾರ್

0

 

ಅರಂತೋಡು ಅರ್ಟ್ಸ್ ಎಂಡ್ ಸ್ಪೊರ್ಟ್ಸ್ ಕ್ಲಬ್ (ರಿ) ಸದಸ್ಯರು ಕೆಪಿಸಿಸಿ ಸದಸ್ಯ ಹೆಚ್ ಎಂ.ನಂದಕುಮಾರ್ ರವರನ್ನು ಭೇಟಿ ಮಾಡಿ ಸನ್ಮಾನಿಸಲಾಯಿತು.

 

ಅವರು ಸುಳ್ಯ ದಿಂದ ಮಡಿಕೇರಿ ತೆರಳುವ ಸಂದರ್ಭದಲ್ಲಿ ಅರಂತೋಡಿಗೆ ಆಗಮಿಸಿದ ಸಂದರ್ಭದಲ್ಲಿ ಕ್ಲಬಿನ ಸದಸ್ಯರು ಭೇಟಿ ಮಾಡಿ ಅರಂತೋಡು ಅರ್ಟ್ಸ್ ಎಂಡ್ ಸ್ಪೊರ್ಟ್ಸ್ ನೊಂದಣಿಗೊಳ್ಳುತ್ತಿದ್ದು ಹಲವಾರು ಸಾಮಾಜಿಕ ಕಾರ್ಯಕ್ರಮವನ್ನು ಹಮ್ಮಿಕೊಂಡು ಬರುತ್ತಿದ್ದು ಮುಂದಿನ ದಿನಗಳಲ್ಲಿ ಹಲವಾರು ಸಮಾಜ ಮುಖಿ ಕಾರ್ಯಕ್ರಮ ವನ್ನು ಅಯೋಜಿಸುವ ಯೋಜನೆಯನ್ನು ಇಟ್ಟುಕೊಂಡಿದ್ದೇವೆ.ಎಂದು ಕ್ಲಬಿನ ಸದಸ್ಯರು ವಿವರಿಸಿದಾಗ ನಂದಕುಮಾರ್ ರವರು ತನ್ನಿಂದ ಆಗುವ ಸಹಾಯವನ್ನು ನೀಡುವ ಭರವಸೆಯನ್ನು ನೀಡಿ ನೊಂದಣಿಗೆ ಆಗುವ ವೆಚ್ಚವನ್ನು ನೀಡಿ ತೆರಳಿದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಮಾಜಿ ಕಾರ್ಯದರ್ಶಿ ಟಿ.ಎಮ್ ಶಹೀದ್ ತೆಕ್ಕಿಲ್,ಸುಳ್ಯ ಬ್ಲಾಕ್ ಕಾಂಗ್ರೆಸ್ ಸದಸ್ಯ ತಾಜುದ್ದೀನ್ ಅರಂತೋಡು ಅರಂತೋಡು ಅರ್ಟ್ಸ್ ಎಂಡ್ ಸ್ಪೊರ್ಟ್ಸ್ ಕ್ಲಬ್‌ ಕಾರ್ಯದರ್ಶಿ ಫಯಾಜ್ ಪಟೇಲ್,ಸದಸ್ಯ ರಾದ ಶರಪುದ್ದೀನ್ , ಸುಳ್ಯ ವಿಧಾನ ಸಭಾ ಕ್ಷೇತ್ರ ಎನ್ಎಸ್ ಯು ಐ ಮಾಜಿ ಉಪಾಧ್ಯಕ್ಷ ಅಶೀಕ್ ಕುಕ್ಕುಂಬಳ, ಜುಬೈರ್,ಮುಹ್ಸೀನ್, ನೌಫಲ್ ಕುನ್ನಿಲ್ ,ಲತೀಫ್ ಮೊಟ್ಟಂಗಾರ್ ,ಅಮೀರ್ ಗೂನಡ್ಕ, ಮುಂತಾದವರು ಇದ್ದರು.

LEAVE A REPLY

Please enter your comment!
Please enter your name here