ಕಡಬ:ಆಕಸ್ಮಿಕ ಬೆಂಕಿ ಬಿದ್ದು ಧಗ ಧಗನೆ ಹೊತ್ತಿ ಉರಿದ ಗುಡ್ಡ 

0

 

  • ತುರ್ತು ಸಂದರ್ಭದಲ್ಲಿ ಸಂಪರ್ಕಕ್ಕೆ ಸಿಗದ 112 ಸಹಾಯವಾಣಿ
  • ಪೊಲೀಸ್, ಸ್ಥಳೀಯರಿಂದ ಬೆಂಕಿ ನಂದಿಸಲು ಹರಸಾಹಸ!

 

ಕಡಬ: ಇಲ್ಲಿನ ಕಳಾರ ವಾಹನ ಶೋರೂಂ ಒಂದರ ಸಮೀಪ ಆಕಸ್ಮಿಕವಾಗಿ ಬೆಂಕಿ ಬಿದ್ದು ಗಾಳಿಯ ರಭಸಕ್ಕೆ ಗುಡ್ಡ ಪ್ರದೇಶ ಧಗಧಗನೆ ಹೊತ್ತಿ ಉರಿದ ಘಟನೆ ಇಂದು ಮಧ್ಯಾಹ್ನ ನಡೆದಿದೆ.
ಟ್ರಾನ್ಸ್ ಫಾರ್ಮರಿನಿಂದ ಆಕಸ್ಮಿಕವಾಗಿ ಬೆಂಕಿ ಬಿದ್ದು ಸುತ್ತ ಮುತ್ತಲಿನ ಹುಲ್ಲು ತುಂಬಿದ ಪ್ರದೇಶಕ್ಕೆ ಬೆಂಕಿ ಹಬ್ಬಿ ಗುಡ್ಡಕ್ಕೆ ಆವರಿಸಿಕೊಂಡಿದೆ. ಸ್ಥಳೀಯರು ಕೂಡಲೇ ಠಾಣೆಗೆ ಮಾಹಿತಿ ನೀಡಿದ್ದು ಪೊಲೀಸರು ಕೂಡಲೇ ಸ್ಥಳಕ್ಕೆ ತೆರಳಿ ಸ್ಥಳೀಯರೊಂದಿಗೆ ಸೇರಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸಂಪರ್ಕಕ್ಕೆ ಸಿಗದ 112 ಸಹಾಯವಾಣಿ: ಗುಡ್ಡಕ್ಕೆ ಬೆಂಕಿ ಆವರಿಸಿ ಬೆಂಕಿ ಕೆನ್ನಾಲೆ ಹೆಬ್ಬಿದ ಹಿನ್ನೆಲೆಯಲ್ಲಿ ಪೊಲೀಸರು ಸಹಿತ ಸ್ಥಳದಲ್ಲಿದ್ದವರು ತುರ್ತು ಸಂದರ್ಭದಲ್ಲಿ 112 ಸಹಾಯವಾಣಿಗೆ ಕರೆ ಮಾಡಿದರೂ ಕರೆ ಸ್ವೀಕಾರವಾಗಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.


ವಿದ್ಯುತ್ ಟ್ರಾನ್ಸ್ ಫಾರ್ಮರ್, ವಿದ್ಯುತ್ ಕಂಬಗಳ ಸುತ್ತ ಹುಲ್ಲುಗಾವಲು ಆವರಿಸಿದ್ದು ಇದನ್ನು ತೆರವು ಮಾಡದಿರುವುದೇ ಬೆಂಕಿ ಹಬ್ಬಲು ಕಾರಣವಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಕಡಬ ಠಾಣೆಯ ಬೀಟ್ ಪೊಲೀಸ್ ಹರೀಶ್,ಮೆಸ್ಕಾಂ ಇಲಾಖೆಯ ಲೈನ್ ಮ್ಯಾನ್ ಸಿದ್ದರಾಮ ,ಸ್ಥಳೀಯರಾದ ಸಂಗೀತಾ, ಅನಿಲ್ ವರ್ಗೀಸ್, ರಾಘವ ಕಳಾರ ,ಜೆಬಿನ್, ಸಜು, ಜಗನ್ನಾಥ, ಗಣೇಶ್ ಹಳ್ಳಿಮನೆ ಸೇರಿ ಬೆಂಕಿ ನಂದಿಸುವಲ್ಲಿ ಸಫಲರಾಗಿದ್ದಾರೆ.

LEAVE A REPLY

Please enter your comment!
Please enter your name here