ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ಸ್ವರ್ಣ ಪ್ರಶ್ನೆ 

0

 ಪುತ್ತೂರು: ಕೇರಳದ ಪ್ರಸಿದ್ಧ ಜ್ಯೋತಿಷ್ಯರಾದ ಶಶಿಧರ ಮಾಂಗಾಡ್ ಮತ್ತು ತಂಡದವರಿಂದ ಫೆಬ್ರವರಿ 13ರಂದು ದೇಯಿ ಬೈದೆತಿ, ಕೋಟಿ ಚೆನ್ನಯರ ಮೂಲಸ್ಥಾನವಾದ ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ಸ್ಥಳ ಸ್ವರ್ಣ ಪ್ರಶ್ನೆ ಜರಗಿತು.


ಮಾರ್ಚ್ 3ರಿಂದ 7ರವರೆಗೆ ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ನಡೆಯುವ ವಾರ್ಷಿಕ ಜಾತ್ರೆ ಆಚರಣೆಯ ಪ್ರಯುಕ್ತ ಪ್ರಶ್ನಾ ಚಿಂತನೆ ನಡೆಸಿ ಮಾಹಿತಿ ಪಡೆದುಕೊಳ್ಳಲಾಯಿತು. ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಪೀತಾಂಬರ ಹೆರಾಜೆ, ಜಾತ್ರೋತ್ಸವ ಸಮಿತಿ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ, ಜಾತ್ರೋತ್ಸವ ಸಮಿತಿಯ ಗೌರವಾಧ್ಯಕ್ಷ ಚಿತ್ತರಂಜನ್ ಕಂಕನಾಡಿ, ಕ್ಷೇತ್ರದ ಅನುವಂಶಿಕ ಮೊಕ್ತೇಸರ ಶ್ರೀಧರ ಪೂಜಾರಿ, ಕ್ಷೇತ್ರದ ತಂತ್ರಿಗಳಾದ ಶಿವಾನಂದ ಶಾಂತಿ, ಪ್ರವೀಣ್ ಮಚ್ಚೇಂದ್ರನಾಥ್ ಬಾಬಾ, ಜಾನಪದ ವಿದ್ವಾಂಸರಾದ ದಾಮೋದರ ಕಲ್ಮಾಡಿ ಮತ್ತು ಚೆಲುವರಾಜ್ ಪೆರಂಪಳ್ಳಿ, ಕ್ಷೇತ್ರಾಡಳಿತ ಸಮಿತಿ ಉಪಾಧ್ಯಕ್ಷ ರವಿ ಪೂಜಾರಿ ಚಿಲಿಂಬಿ, ಪ್ರಧಾನ ಕಾರ್ಯದರ್ಶಿ ಉಲ್ಲಾಸ್ ಕೋಟ್ಯಾನ್, ಕೋಶಾಧಿಕಾರಿ ದೀಪಕ್ ಕೋಟ್ಯಾನ್, ಜೊತೆ ಕಾರ್ಯದರ್ಶಿ ಮೋಹನ್ ದಾಸ್ ವಾಮಂಜೂರು, ದಿನೇಶ್ ಅಮೀನ್ ಕುಂದಾಪುರ, ಶೈಲೇಂದ್ರ ಸುವರ್ಣ, ನವೀನ್ ಸುವರ್ಣ, ಶೇಖರ ಬಂಗೇರ, ಜನಾರ್ದನ ಪೂಜಾರಿ ಪಡುಮಲೆ, ರಾಜೇಂದ್ರ ಚಿಲಿಂಬಿ, ಪ್ರವೀಣ್ ನೆಟ್ಟಾರ್, ನಾಗೇಶ್ ಬೈಕಂಪಾಡಿ, ನಾರಾಯಣ ಮಚ್ಚಿನ ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here