ಕೆವಿಜಿ ಐಪಿಎಸ್ ನಲ್ಲಿ ದಸರಾ ಹಬ್ಬ

0

 

 

ಕೆವಿಜಿ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ನಲ್ಲಿ ದಸರಾ ಹಬ್ಬವನ್ನು ಸೆ.30 ರಂದು ಆಚರಿಸಲಾಯಿತು. ಏಳನೇ ತರಗತಿಯ ವಿದ್ಯಾರ್ಥಿಗಳು ಆರಂಭದಲ್ಲಿ ಪ್ರಾರ್ಥನಾ ಗೀತೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು.


ಶಾಲಾ ಸಂಚಾಲಕರು ಡಾ. ರೇಣುಕಾ ಪ್ರಸಾದ್ ಕೆ. ವಿ. ಹಾಗು ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ. ಉಜ್ವಲ್ ಊರುಬೈಲ್ ಎಲ್ಲರಿಗೂ ಹಬ್ಬದ ಶುಭಾಶಯಗಳನ್ನು ತಿಳಿಸಿದರು.
ಭೂಮಂಡಲದಲ್ಲಿ ರಾಕ್ಷಸರ ಅಟ್ಟಹಾಸ ವು ಮಿತಿಮೀರಿ, ಅನ್ಯಾಯವೂ ಅತಿಯಾಗಿ, ಅಧರ್ಮವು ನೆಲೆನಿಂತ ಸಂದರ್ಭದಲ್ಲಿ ದುಷ್ಟ ಸಂಹಾರ ಹಾಗೂ ಶಿಷ್ಟರ ರಕ್ಷಣೆಗೆ ಬಂದಿರುವಾಕೆಯೇ ದುರ್ಗಾಮಾತೆ. ಹೀಗೆ ದುರ್ಗಾಮಾತೆಯು ದುಷ್ಟ ರಾಕ್ಷಸನ ಸಂಹಾರ ಮಾಡಿದ ಕಥೆಯನ್ನು ವಿದ್ಯಾರ್ಥಿಗಳು ನೃತ್ಯ ರೂಪದಲ್ಲಿ ಮಾಡಿ ಎಲ್ಲರನ್ನು ಮನರಂಜಿಸಿದರು. ಬಳಿಕ ಈ ದಸರಾ ಹಬ್ಬದ ಆಚರಣೆಯ ಮಹತ್ವವನ್ನು ಫಾಝ್ ಸುಲೈಮಾನ್ ಮತ್ತು ಶ್ರದ್ಧಾ ಪೈ ತಿಳಿಸಿದರು. ಕಾರ್ಯಕ್ರಮವನ್ನು ಏಳನೇ ತರಗತಿಯ ಶಿವಾನಿ ಮತ್ತು ಆಕಾಶ್ ನಿರೂಪಿಸಿದರು. ಶಿಕ್ಷಕಿಯರಾದ ಶ್ರೀಮತಿ ಚೈತ್ರಾ ಮತ್ತು ಶ್ರೀಮತಿ ಸೌಮ್ಯ ಸಹಕರಿಸಿದರು.
ಈ ಕಾರ್ಯಕ್ರಮದಲ್ಲಿ ಶಾಲಾ ಪ್ರಾಂಶುಪಾಲ ಅರುಣ್ ಕುಮಾರ್, ಉಪಪ್ರಾಂಶುಪಾಲೆ ಶಿಲ್ಪಾ ಬಿದ್ದಪ್ಪ ಮತ್ತು ಎಲ್ಲಾ ಶಿಕ್ಷಕ – ಶಿಕ್ಷಕೇತರ ವೃಂದದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here