ಮೊಗರ್ಪಣೆ: ವಾರ್ಷಿಕ ಬದರ್ ಮೌಲೂದ್ ಹಾಗೂ ಪ್ರಾರ್ಥನಾ ಮಜ್ಲೀಸ್

0

 

ಸುಳ್ಯ ಮೊಗರ್ಪಣೆ ಅಸ್ಸಯ್ಯದ್ ಮಾಂಬಳಿ ವಲಿಯುಲ್ಲಾ ದರ್ಗಾ ಶರೀಫಿನಲ್ಲಿ ಪ್ರಥಮ ವಾರ್ಷಿಕ ಬದರ್ ಮೌಲೀದ್ ಹಾಗೂ ಪ್ರಾರ್ಥನಾ ಸಂಗಮ ಸೆಪ್ಟೆಂಬರ್ 30ರಂದು ಮೊಗರ್ಪಣೆ ಮಸೀದಿ ವಠಾರದಲ್ಲಿ ನಡೆಯಿತು.

 

 

ಕಾರ್ಯಕ್ರಮದ ನೇತೃತ್ವವನ್ನು ಸ್ಥಳೀಯ ಮಸೀದಿ ಮುದರ್ರಿಸ್ ಹಾಫಿಲ್ ಸೌಕತ್ ಅಲಿ ಸಕಾಫಿ ವಹಿಸಿದ್ದರು.
ಕಳೆದ ಒಂದು ವರ್ಷಗಳಿಂದ ಪ್ರತೀ ಶುಕ್ರವಾರ ನಡೆಸಿಬರುವ ಬದರ್ ಮೌಲೂದ್ ಒಂದು ವರ್ಷ ಪೂರ್ತಿಗೊಳಿಸಿದ ಹಿನ್ನೆಲೆಯಲ್ಲಿ ವಿಶೇಷ ಪ್ರಾಥನಾ ಕಾರ್ಯಕ್ರಮ ನಡೆಸಿ ಸರ್ವ ಮನು ಕುಲದ ಕ್ಷೇಮಾಭಿವೃದ್ಧಿಗಾಗಿ ದುವಾ ಮಜ್ಲೀಸ್ ನಡೆಯಿತು.
ದುವಾ ನೇತೃತ್ವವನ್ನು ಸಯ್ಯದ್ ಕುಂಞಿ ಕೋಯಾ ಸಅದಿ ತಂಙಳ್ ನಾವೂರು ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಸಯ್ಯದ್ ಜೈನುಲ್ ಆಬಿಧೀನ್ ತಂಙಳ್, ಸ್ಥಳೀಯ ಮದರಸ ಮುಅಲ್ಲಿಮರು, ಜಮಾಅತ್ ಕಮಿಟಿ ಪದಾಧಿಕಾರಿಗಳು, ಸದಸ್ಯರು, ನೂರಾರು ಮಂದಿ ಮುಸ್ಲಿಂ ಬಾಂಧವರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here