ನಿವೃತ್ತ ಮುಖ್ಯ ಶಿಕ್ಷಕ ವಾಸಪ್ಪ ಗೌಡ ಕುದ್ಕುಳಿ ನಿಧನ

0

 

ಸುಳ್ಯ ತಾಲೂಕು ಆಲೆಟ್ಟಿ ಗ್ರಾಮದ ಬಡ್ಡಡ್ಕ ನಿವಾಸಿ ಕುದ್ಕುಳಿ ಕುಟುಂಬದ ಹಿರಿಯರಾದ ವಾಸಪ್ಪ ಮಾಸ್ತರ್ ಕುದ್ಕುಳಿ (95ವರ್ಷ) ಅಕ್ಟೋಬರ್ 3 ರಂದು ವಯೋ ಸಹಜ ಅಲ್ಪಕಾಲದ ಅಸೌಖ್ಯದಿಂದ ನಿಧನ ಹೊಂದಿದರು.

ಶ್ರೀ ರಾಮಕೃಷ್ಣ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಬಡ್ಡಡ್ಕ ಇದರ ಸ್ಥಾಪನೆಯಲ್ಲಿ ಸ್ಥಾಪಕರಾಗಿದ್ದ ಬಡ್ಡಡ್ಕ ಅಪ್ಪಯ್ಯ ಗೌಡರೊಂದಿಗೆ ಶಾಲೆಗೆ ಆರಂಭಿಕ ಬುನಾದಿ ಹಾಕುವಲ್ಲಿ ಶ್ರಮಿಸಿ ಈ ಶಾಲೆಯಲ್ಲಿ ಸ್ಥಾಪಕ ಮುಖ್ಯ ಗುರುಗಳಾಗಿ 1954-1983ರ ತನಕ ಸುಧೀರ್ಘ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದರು.

ತಮ್ಮ ಸೇವಾ ಅವಧಿಯಲ್ಲಿ ಸಂಸ್ಥೆ ಮತ್ತು ವಿದ್ಯಾರ್ಥಿಗಳ ಏಳಿಗೆಗಾಗಿ ಶ್ರಮಿಸಿದವರು.

ಶಿಸ್ತು ಬದ್ಧ ಜೀವನ ಶೈಲಿ, ಕರ್ತವ್ಯ ನಿಷ್ಠೆ, ಕರ್ಮಯೋಗಿಯಾಗಿ, ಮಿತ ಭಾಷಿಯಾಗಿ, ಕೊಡುಗೈ ದಾನಿಯಾಗಿ,ಸರಳ ಸಾತ್ವಿಕ ಜೀವನದಿಂದ ಹೆಸರುವಾಸಿಯಾಗಿದ್ದರು.

ಮೃತರು ಪತ್ನಿ ಶ್ರೀಮತಿ ಪಾರ್ವತಿ, ಪುತ್ರರಾದ ಮೈಸೂರಿನ ಮಹಾರಾಣಿ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ಪ್ರಭಾಕರ ಕೆ.ವಿ., ಉದ್ಯಮಿ, ಕೆ.ವಿ ಟ್ರೇಡರ್ಸ್ ನ ಮಾಲಕ ಪ್ರಕಾಶ್ ಕೆ.ವಿ., ಪುತ್ರಿ ಪ್ರೇಮ, ಅಳಿಯ ಶೇಷಪ್ಪ ಮಾಸ್ತರ್ ಕಳಗಿ, ಸೊಸೆಯಂದಿರು,ಮೊಮ್ಮಕ್ಕಳು,ಸಹೋದರರಾದ ಮುಕುಂದ ಗೌಡ ಕುದ್ಕುಳಿ, ಬಾಲಚಂದ್ರ ಕುದ್ಕುಳಿ, ಸಹೋದರಿಯರಾದ ತೇಜಾವತಿ ಕುಶಾಲಪ್ಪ ಪಟೇಲ್ ಕೇವಳ, ಪದ್ಮಾವತಿ ಅಣ್ಣಪ್ಪ ಗೌಡ ಕೊಳಕ್ಕೆ, ಸಾವಿತ್ರಿ ಪೂವಪ್ಪ ಗೌಡ ಎರಬೈಲು, ಭಾಗೀರಥಿ ಬೆಳ್ಯಪ್ಪ ಮಾಸ್ತರ್ ಪೂಜಾರಿಮನೆ, ಹಾಗೂ ಕುಟುಂಬಸ್ಥರು ಅಪಾರ ಬಂಧು ಮಿತ್ರರು, ಸಾವಿರಾರು ಶಿಷ್ಯ ವೃಂದವನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here