ಕೌಕ್ರಾಡಿ: ಎಸ್‌ಸಿ ಕಾಲೋನಿ ರಸ್ತೆ ಕಾಂಕ್ರಿಟೀಕರಣಕ್ಕೆ ಗುದ್ದಲಿಪೂಜೆ

0

ನೆಲ್ಯಾಡಿ: 20 ಲಕ್ಷ ರೂ.,ಅನುದಾನದಲ್ಲಿ ಕೌಕ್ರಾಡಿ ಗ್ರಾಮದ ಮಣ್ಣಗುಂಡಿ ಎಸ್‌ಸಿ ಕಾಲೋನಿ ಸಂಪರ್ಕ ರಸ್ತೆ ಕಾಂಕ್ರಿಟೀಕರಣಕ್ಕೆ ಮಾ.2ರಂದು ಗುದ್ದಲಿ ಪೂಜೆ ನೆರವೇರಿಸಲಾಯಿತು.


ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರರವರು ಗುದ್ದಲಿಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಭಾಸ್ಕರ ಎಸ್.ಗೌಡ, ಎಪಿಎಂಸಿ ಸದಸ್ಯ ಬಾಲಕೃಷ್ಣ ಬಾಣಜಾಲು, ಕೌಕ್ರಾಡಿ ಗ್ರಾ.ಪಂ.ಅಧ್ಯಕ್ಷೆ ವನಿತಾ, ಉಪಾಧ್ಯಕ್ಷೆ ಭವಾನಿ, ಸದಸ್ಯರುಗಳಾದ ಸುಧಾಕರ, ಲೋಕೇಶ್ ಬಾಣಜಾಲು, ಪ್ರಮುಖರಾದ ರಮೇಶ್ ಶೆಟ್ಟಿ ಬೀದಿ, ಅಣ್ಣಿ ಎಲ್ತಿಮಾರ್, ಹೊನ್ನಪ್ಪ ಗೌಡ, ರಘುರಾಮ ಗುತ್ತಿನಮನೆ, ದಿನೇಶ್ ಬೂತಲಡ್ಕ, ಕಿಟ್ಟು ಬೂತಲಡ್ಕ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here