ವಿಟ್ಲ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಯಾಗಿ ರಮೇಶ್ ಹೆಚ್.  ಆರ್. ಅಧಿಕಾರ ಸ್ವೀಕಾರ

0

ವಿಟ್ಲ: ವಿಟ್ಲ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಯಾಗಿ ರಮೇಶ್ ಹೆಚ್.  ಆರ್.ರವರು ಅಧಿಕಾರ ಸ್ವೀಕರಿಸಿದ್ದಾರೆ. ವಿಟ್ಲ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಯಾಗಿದ್ದ ಮಾಲಿನಿಯವರನ್ನು ಕೋಟೆಕಾರು ಪಟ್ಟಣ ಪಂಚಾಯತ್ ಗೆ ವರ್ಗಾವಣೆಗೊಳಿಸಿರುವ ಹಿನ್ನೆಲೆಯಲ್ಲಿ ತೆರವಾದ ಸ್ಥಾನಕ್ಕೆ ರಮೇಶ್ ಹೆಚ್.ಆರ್.ರವರನ್ನು ನೇಮಕಗೊಳಿಸಲಾಗಿದೆ.

ರಮೇಶ್ ರವರು ಹುಣಸೂರು ನಗರಸಭೆಯಲ್ಲಿ ಕಮೀಶನರ್ ಆಗಿ ಕರ್ತವ್ಯಸಲ್ಲಿಸುತ್ತಿದ್ದರು. 1997ರಲ್ಲಿ ಸಕ್ಲೇಶ್ ಪುರದಲ್ಲಿ ಕ್ಲರ್ಕ್ ಆಗಿ ಕರ್ತವ್ಯ ಆರಂಭಿಸಿದ ಅವರು ಆ‌ ಬಳಿಕ ಅರಕಲಗೋಡು, ಮಡಿಕೇರಿ, ಸೋಮವಾರಪೇಟೆ, ಹುಣಸೂರು, ಬೆಂಗಳೂರು ಮೊದಲಾದೆಡೆಯಲ್ಲಿ ಕರ್ತವ್ಯ ನಿರ್ವಹಿಸಿದ್ದರು.

LEAVE A REPLY

Please enter your comment!
Please enter your name here