ಆಲಂತಾಯ ಗ್ರಾಮ ಸಹಾಯಕ ಹುದ್ದೆಗೆ ಅರ್ಜಿ ಅಹ್ವಾನ -ಮಾ.18 ಕಡೆಯ ದಿನ

0

ಕಡಬ: ಕಡಬ ತಾಲೂಕು, ಕಡಬ ಹೋಬಳಿಯ ಆಲಂತಾಯ ಗ್ರಾಮ ಸಹಾಯಕ ಹುದ್ದೆ ಖಾಲಿ ಇದ್ದು ಈ ಹುದ್ದೆಗೆ ನೇಮಕಾತಿ ಮಾಡಿಕೊಳ್ಳುವ ಬಗ್ಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಅಹ್ವಾನಿಸಲಾಗಿದೆ. ಮಾ.18ರಂದು ಕಡೆಯ ದಿನವಾಗಿದೆ.

ನೇಮಕಾತಿ ಕೋರಿ ಬಯಸುವ ಅರ್ಜಿದಾರರು ಕಡಬ ಹೋಬಳಿ ಕಡಬ ತಾಲೂಕು ಕಛೇರಿಯಲ್ಲಿ ಅರ್ಜಿಯನ್ನು ಭಾವಚಿತ್ರ, ವ್ಯಾಸಂಗದ ವಿವರ, ವಾಸಸ್ಥಳದ ವಿವರ ಮುಂತಾದ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ ಎಂದು ಕಡಬ ತಾಲೂಕು ಕಛೇರಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಷರತ್ತುಗಳು:
ಅರ್ಜಿದಾರರ ವಯಸ್ಸು ಕನಿಷ್ಠ 18 ವರ್ಷ ವಯೋಮಿತಿ ಹೊಂದಿದವರಾಗಿರಬೇಕು. ಮೇಲಾಧಿಕಾರಿಗಳು ಸೂಚಿಸಿದ ಎಲ್ಲಾ ಕೆಲಸಗಳನ್ನು ಸಕಾಲದಲ್ಲಿ ನಿರ್ವಹಿಸತಕ್ಕದ್ದು, ಅರ್ಜಿದಾರರ ವಿದ್ಯಾರ್ಹತೆ ಕನಿಷ್ಠ 7ನೇ ತರಗತಿ ಉತ್ತೀರ್ಣರಾಗಿರಬೇಕು, ಅರ್ಜಿದಾರರು ಸಚ್ಚಾರಿತ್ರ್ಯ ಉಳ್ಳವರಾಗಿದ್ದು. ಯಾವುದೇ ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿರಬಾರದು, ಅರ್ಜಿದಾರರು ಚುನಾವಣೆ, ಪ್ರಕೃತಿ ವಿಕೋಪ, ರಾತ್ರಿ ಪಾಳಯದಲ್ಲಿ ಕಾವಲುಗಾರನಾಗಿ ಕರ್ತವ್ಯ ನಿರ್ವಹಿಸಬೇಕು, ಸದ್ರಿ ಹುದ್ದೆಯು ತಾತ್ಕಾಲಿಕ ಹುದ್ದೆಯಾಗಿದ್ದು, ಅರ್ಜಿದಾರರು ಸುಳ್ಳು ಮಾಹಿತಿ ನೀಡಿ ಅರ್ಜಿ ಸಲ್ಲಿಸಿರುವುದನ್ನು ದೃಡಪಟ್ಟಿಲ್ಲಿ ಯಾವುದೇ ಮುನ್ಸೂಚನೆ ನೀಡದೆ ಅರ್ಜಿಯನ್ನು ರದ್ದು ಪಡೆಸಲಾಗುವುದು.

LEAVE A REPLY

Please enter your comment!
Please enter your name here