ಜ್ಞಾನ ರೈಗೆ ಕರುನಾಡ ತಾರೆ ರಾಜ್ಯ ಪ್ರಶಸ್ತಿ ಪ್ರದಾನ

0

ಪುತ್ತೂರು: ಪುತ್ತೂರಿನ ಬಹುಮುಖ ಪ್ರತಿಭೆ ಜ್ಞಾನ ರೈಯವರಿಗೆ ಬೆಂಗಳೂರಿನ ಸದಾಶಿವನಗರದ ಅಖಿಲ ಭಾರತ ವೀರಶೈವ ಮಹಾಸಭಾ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕರುನಾಡ ತಾರೆ ರಾಜ್ಯ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.
ಬೆಂಗಳೂರಿನ‌ ಸಂಯೋಗ ಕಲಾಶಾಲೆ ವತಿಯಿಂದ ನಡೆದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಜ್ಞಾನ ರೈಯವರಿಗೆ ಕರ್ನಾಟಕ ರಾಜ್ಯ ಕಲಾವಿದರ ಕಲ್ಯಾಣ ವೇದಿಕೆಯ ರಾಜ್ಯಾಧ್ಯಕ್ಷ, ರಂಗಕರ್ಮಿ ಕೆಂಚನೂರು ಶಂಕರ್, ಅಂತರ್ರಾಷ್ಟ್ರೀಯ ಚಿತ್ರ ಕಲಾವಿದೆ ಡಾ. ಮೀರಾ ಕುಮಾರ್, ಕರ್ನಾಟಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಚಾರಿಟೇಬಲ್ ಟ್ರಸ್ಟ್ ನ ಸಂಸ್ಥಾಪಕ ರಾಜ್ಯಾಧ್ಯಕ್ಷೆ ಡಾ. ಪದ್ಮ ಪ್ರಕಾಶ್, ಜನಪದ ವಿದ್ವಾಂಸರಾದ ತುಮಕೂರು ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಡಾ. ಪಿ .ಎಂ. ಗಂಗಾಧರಯ್ಯ, ಸಿರಿ ವಾಹಿನಿಯ ಸಂಪಾದಕೀಯ ಮುಖ್ಯಸ್ಥ ಸುರೇಶ್ ಚಿಕ್ಕಣ್ಣ, ಚಲನಚಿತ್ರ ನಿರ್ಮಾಪಕ, ನಟ ಮಹೇಂದ್ರ ಮನೋತ್ ಜೈನ್, ಸಂಯೋಗ ಕಲಾಶಾಲೆಯ ಜ್ಯೋತಿ ಬಿಡೆರವರು ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು.
ಸಿದ್ದಗಂಗಾಶ್ರೀ ಸದ್ಭಾವನ ರಾಷ್ಟ್ರೀಯ ಪ್ರಶಸ್ತಿ, ಸಮಾಜ ಸೇವಾ ರತ್ನ ರಾಜ್ಯಪ್ರಶಸ್ತಿ, ಆದಿಗ್ರಾಮೋತ್ಸವ ಪ್ರತಿಭಾ ಸಿರಿ ಗೌರವ ಪ್ರಶಸ್ತಿ, ಸುದ್ದಿ ಬಿಡುಗಡೆಯ ಪ್ರತಿಭಾ ದೀಪ ಪ್ರಶಸ್ತಿ ಪುರಸ್ಕೃತೆಯಾಗಿರುವ ಜ್ಞಾನ ರೈ ಈಗಾಗಲೇ ಹಲವಾರು ಕಿರುಚಿತ್ರ ಹಾಗೂ ಆಲ್ಬಂ ಸಾಂಗ್ ಗಳಲ್ಲಿ ನಟಿಸುವ ಮೂಲಕ ಗಮನ ಸೆಳೆದಿದ್ದಾರೆ. ನೃತ್ಯ, ಅಭಿನಯ ಮಾತ್ರವಲ್ಲದೆ ರಾಜ್ಯ ಮಟ್ಟದ ಭಾಷಣ ಸ್ಪರ್ಧೆಯಲ್ಲೂ ಪ್ರಶಸ್ತಿ ಪಡೆದಿದ್ದಾರೆ. ಹಲವಾರು ಫೋಟೋ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಪಡೆದಿರುವ ಇವರು ಜಾಹೀರಾತಿನಲ್ಲೂ ನಟಿಸುತ್ತಿದ್ದಾರೆ. ಧಾರ್ಮಿಕ ಶಿಕ್ಷಣದತ್ತ ಒಲವು ತೋರಿರುವ ಇವರು ಕೂಡ್ಲಿಗಿಯ ಗುರುದೇವ ಗುರುಕುಲದ ಶಶಿಧರ್ ಗುರೂಜಿಯವರಿಂದ ಭಗವದ್ಗೀತೆ ಪಠಣ, ನಿತ್ಯ ಶ್ಲೋಕಗಳು, ಅಬಾಕಸ್, ಗಾಂಧಾರಿ ವಿದ್ಯೆ ಕಲಿತಿದ್ದಾರೆ.
ಪ್ರಸ್ತುತ ಭರತನಾಟ್ಯ, ಸಂಗೀತ, ಯಕ್ಷಗಾನ, ಕರಾಟೆ, ಯೋಗ
ಅಭ್ಯಾಸದಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ಹನ್ನೊಂದರ ಹರೆಯದ ಜ್ಞಾನ ರೈಯವರು ನರಿಮೊಗರು ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಯ 5ನೇ ತರಗತಿಯ ಪ್ರತಿಭಾನ್ವಿತ ವಿದ್ಯಾರ್ಥಿನಿ. ಕುರಿಯ ಅಡ್ಯೆತ್ತಿಮಾರು ನಿವಾಸಿ ಉದ್ಯಮಿ ಜಯರಾಮ ರೈ ಹಾಗೂ ಪತ್ರಕರ್ತೆ ಹೇಮಾ ಜಯರಾಮ್ ರೈಯವರ ಪುತ್ರಿ.

LEAVE A REPLY

Please enter your comment!
Please enter your name here