ಕುಕ್ಕುತ್ತಡಿ ಗರಡಿಯಲ್ಲಿ ಬ್ರಹ್ಮ ಬೈದೇರುಗಳ ನೇಮೋತ್ಸವ

0

 

ಪುತ್ತೂರು: ಅರಿಯಡ್ಕ ಗ್ರಾಮದ ಕುಕ್ಕುತ್ತಡಿ ನೇತ್ರಾದಿ ಗರಡಿ ಶ್ರೀ ನಾಗಬಿರ್ಮೆರ್ ಕೋಟಿ ಚೆನ್ನಯ ಸನ್ನಿಧಾನದಲ್ಲಿ ಶ್ರೀ ಬ್ರಹ್ಮ ಬೈದೇರುಗಳ ನೇಮೋತ್ಸವ ಮಾ. 29 ರಂದು ನಡೆಯಿತು.

 

ಬೆಳಿಗ್ಗೆ ದೇವತಾ ಪ್ರಾರ್ಥನೆ, ಸ್ವಸ್ತಿ ಪುಣ್ಯಾಹವಾಚನ, ಮಹಾಗಣಪತಿ ಹೋಮ, ಕಲಶಪೂಜೆ, ಕಲಶಾಭಿಷೇಕ, ತಂಬಿಲಸೇವೆ, ಪ್ರಸಾದ‌ ವಿತರಣೆಯಾಗಿ ಅನ್ನಸಂತರ್ಪಣೆ ನಡೆಯಿತು.

ಸಂಜೆ ಕುಕ್ಕುತ್ತಡಿ ದರ್ಬೆ ಮನೆಯಿಂದ ಭಂಡಾರ ತೆಗೆದು ಅನ್ನಸಂತರ್ಪಣೆ ನಡೆದ ಬಳಿಕ ರಾತ್ರಿ ಕೋಟಿ ಚೆನ್ನಯರ ಗರಡಿ ಇಳಿಯುವುದು, ಕಿನ್ನಿದಾರು ಗರಡಿ ಇಳಿದು ರಂಗಸ್ಥಳ ಪ್ರವೇಶ, ಕೋಟಿ‌ ಚೆನ್ನಯರ ದರ್ಶನ ರಂಗಸ್ಥಳದಲ್ಲಿ ಬೈದೇರುಗಳ ಸೇಟು, ಮಾ. 30 ರಂದು ಬೈದೇರುಗಳಲ್ಲಿ ಅರಿಕೆ ಮತ್ತು ಗಂಧ ಪ್ರಸಾದ ವಿತರಣೆ ಜರಗಿತು.

 

 

ರಾತ್ರಿ ದಾಸ ಸಾಹಿತ್ಯ ಸಂಕೀರ್ತನಕಾರ ಶ್ರೀ ಮಧ್ವಾಧೀಶ ವಿಠಲದಾಸ ನಾಮಾಂಕಿತ ರಾಮಕೃಷ್ಣ ಕಾಟುಕುಕ್ಕೆಯವರ ನೇತೃತ್ವದಲ್ಲಿ ರೆಂಜ ಶ್ರೀರಾಮನಗರ ಶ್ರೀ ಶಬರಿ ಮಹಿಳಾ ಭಜನಾ ಸಂಘ ಮತ್ತು ನನ್ಯ ತುಡರ್ ಯುವಕ ಮಂಡಲದ ಅಧೀನದ ತುಡರ್ ಭಜನಾ ಸಂಘದ ವತಿಯಿಂದ ಭಜನಾ ಕಾರ್ಯಕ್ರಮ ನಡೆಯಿತು.

ದಾಸ ಸಂಕೀರ್ತನಕಾರ ರಾಮಕೃಷ್ಣ ಕಾಟುಕುಕ್ಕೆ ಹಾಗೂ ತಾ.ಪಂ. ನಿಕಟಪೂರ್ವ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ರವರನ್ನು ಇದೇ ವೇಳೆ ಸನ್ಮಾನಿಸಿ ಗೌರವಿಸಲಾಯಿತು. ಗರಡಿಯ ಧರ್ಮದರ್ಶಿ ಜಯರಾಮ ಪೂಜಾರಿ ಕುಕ್ಕುತ್ತಡಿ ಮತ್ತು ಮಾಲತಿ ಜಯರಾಮ ಪೂಜಾರಿ ದಂಪತಿ ಅತಿಥಿ ಅಭ್ಯಾಗತರನ್ನು ಗೌರವಿಸಿದರು. ಪ್ರಿಯದರ್ಶಿನಿ ಶಾಲಾ ಮುಖ್ಯಗುರು ರಾಜೇಶ್ ನೆಲ್ಲಿತ್ತಡ್ಕ ನಿರೂಪಿಸಿದರು.

LEAVE A REPLY

Please enter your comment!
Please enter your name here