ತೆಕ್ಕಾರು: ಕಾರು-ಆಟೋ ರಿಕ್ಷಾ ಡಿಕ್ಕಿ- ರಿಕ್ಷಾ ಪ್ರಯಾಣಿಕರಿಗೆ ಗಾಯ

0

ಪುತ್ತೂರು: ಕಾರು ಹಾಗೂ ಆಟೋ ರಿಕ್ಷಾ ನಡುವೆ ಡಿಕ್ಕಿ ಸಂಭವಿಸಿ ರಿಕ್ಷಾದಲ್ಲಿದ್ದ ಪ್ರಯಾಣಿಕರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಉಪ್ಪಿನಂಗಡಿ-ಅಜಿಲಮೊಗರು ರಸ್ತೆಯ ತೆಕ್ಕಾರು ಗ್ರಾಮದ ಕುಟ್ಟಿಕಳ ಎಂಬಲ್ಲಿ ಮೇ.4ರಂದು ಸಂಜೆ ನಡೆದಿದೆ.


ಉಪ್ಪಿನಂಗಡಿಯಿಂದ ಅಜಿಲಮೊಗರು ಕಡೆಗೆ ಬರುತ್ತಿದ್ದ ಕಾರು(ಕೆಎ 20, ಎಂಎ 6709) ಹಾಗೂ ಅಜಿಲಮೊಗರು ಕಡೆಯಿಂದ ಹೊಸಮೊಗರು ಕಡೆಗೆ ಹೋಗುತ್ತಿದ್ದ ಆಟೋ ರಿಕ್ಷಾ (ಕೆಎ 70, 3516) ನಡುವೆ ತೆಕ್ಕಾರು ಗ್ರಾಮದ ಕುಟ್ಟಿಕ್ಕಳ ಎಂಬಲ್ಲಿ ಡಿಕ್ಕಿ ಸಂಭವಿಸಿದೆ. ಘಟನೆಯಲ್ಲಿ ರಿಕ್ಷಾದಲ್ಲಿದ್ದ ತೆಕ್ಕಾರು ಹೊಸಮೊಗರು ನಿವಾಸಿ ಗೀತಾ, ಅವರ ಮಕ್ಕಳಾದ ಸವಿತಾ, ಯಸ್ಮಿತಾ ಹಾಗೂ ಗೀತಾ ಅವರ ಅಕ್ಕನ ಮಗ, ರಿಕ್ಷಾ ಚಾಲಕ ನಿತೀನ್‌ರವರು ಗಾಯಗೊಂಡಿದ್ದಾರೆ. ಗಾಯಾಳುಗಳು ಉಪ್ಪಿನಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಫಾದರ್ ಮುಲ್ಲರ‍್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಪಘಾತದಿಂದ ಎರಡೂ ವಾಹನಗಳು ಜಖಂಗೊಂಡಿವೆ. ಘಟನೆ ಬಗ್ಗೆ ಗಾಯಾಳು ಗೀತಾ ಅವರು ನೀಡಿದ ದೂರಿನಂತೆ ಪುತ್ತೂರು ಸಂಚಾರ ಠಾಣೆಯಲ್ಲಿ ಕೇಸು ದಾಖಲಾಗಿದೆ.

LEAVE A REPLY

Please enter your comment!
Please enter your name here