ದೋಳ್ಪಾಡಿ ಕೂರೇಲು ಕುಟುಂಬದ ಶ್ರೀ ಧರ್ಮದೈವ, ಪರಿವಾರ ದೈವಗಳ ನೇಮೋತ್ಸವ

0


ಕಾಣಿಯೂರು: ದೋಳ್ಪಾಡಿ ಗ್ರಾಮದ ಕೂರೇಲು ಕುಟುಂಬದ ತರವಾಡು ಮನೆಯಲ್ಲಿ ಶ್ರೀ ಧರ್ಮದೈವ ಮತ್ತು ಪರಿವಾರ ದೈವಗಳ ನೇಮೋತ್ಸವವು ಮಾ 29 ಮತ್ತು ಮಾ 30 ರಂದು ನಡೆಯಿತು. ಮಾ 29 ರಂದು ಬೆಳಿಗ್ಗೆ ಗಣಹೋಮ, ನಾಗತಂಬಿಲ, ಶ್ರೀ ವೆಂಕಟ್ರಮಣ ದೇವರ ಹರಿಸೇವೆ, ಮಧ್ಯಾಹ್ನ ಅನ್ನಸಂತರ್ಪಣೆ ನಡೆದು, ಸಂಜೆ ಮರಕ್ಕಡ ತರವಾಡಿನಿಂದ ಶಿರಾಡಿ ದೈವದ ಭಂಡಾರ ತರುವುದು, ರಾತ್ರಿ ಧರ್ಮದೈವ ಮತ್ತು ಪರಿವಾರ ದೈವಗಳ ಭಂಡಾರ ತೆಗೆಯುವುದು, ಬಳಿಕ ಅನ್ನಸಂತರ್ಪಣೆ, ಸತ್ಯದೇವತೆ, ಪಾಷಾಣಮೂರ್ತಿ ಕುಪ್ಪೆ ಪಂಜುರ್ಲಿ, ವರ್ಣರ ಪಂಜುರ್ಲಿ, ರಕ್ತೇಶ್ವರಿಭವನ ದೈವಗಳ ನೇಮೋತ್ಸವ ನಡೆಯಿತು.

ಮಾ 30 ರಂದು ಬೆಳಿಗ್ಗೆ ಧರ್ಮದೈವ, ರುದ್ರಚಾಮುಂಡಿ ಮತ್ತು ಶಿರಾಡಿ ದೈವದ ನೇಮೋತ್ಸವ, ಗುಳಿಗ ದೈವದ ನೇಮ, ಮಧ್ಯಾಹ್ನ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ನೇಮೋತ್ಸವ ಕಾರ್ಯಕ್ರಮದಲ್ಲಿ ದೇವಸ್ಥಾನಗಳ ಸಮಿತಿ ಅಧ್ಯಕ್ಷರು, ಸದಸ್ಯರು, ವಿವಿಧ ಜನಪ್ರತಿನಿಧಿಗಳು, ದೈವಸ್ಥಾನಗಳ ಆಡಳಿತದಾರರು, ಊರಿನ ಗಣ್ಯರು ಸೇರಿದಂತೆ ಹಲವಾರು ಮಂದಿ ಭಾಗವಹಿಸಿದ್ದರು. ಕೂರೇಲು ಕುಟುಂಬಸ್ಥರಾದ ತರವಾಡು ಮನೆಯ ದೊಡ್ಡಮನೆ ಕುಶಾಲಪ್ಪ ಗೌಡ ಕೂರೇಲು, ಕುಟುಂಬದ ಹಿರಿಯರಾದ ಕಟ್ಟ ಶಿವಪ್ಪ ಗೌಡ, ಪಟೇಲ್ ಗೋಪಾಲಕೃಷ್ಣ ಗೌಡ ಚಾರ್ವಾಕ, ಅಚ್ಯುತ ಗೌಡ ಕೂರೇಲು, ಕೆ.ಪಿ. ಜಿನ್ನಪ್ಪ ಗೌಡ, ಕೆ.ಪಿ. ಹೊನ್ನಪ್ಪ ಗೌಡ, ಕೆ.ಪಿ. ಧರ್ಮಪಾಲ ಗೌಡ, ಕೆ.ಪಿ. ಲಿಂಗಪ್ಪ ಗೌಡ, ವೆಂಕಟ್ರಮಣ ಗೌಡ ಬನೇರಿ, ಲಿಂಗಪ್ಪ ಗೌಡ ಬನೇರಿ, ಸುರೇಶ ಗೌಡ ಬನೇರಿ, ಆನಂದ ಗೌಡ ಬನೇರಿ, ಅಕ್ಕಮ್ಮ ಕಟ್ಟ, ಸುಂದರ ಗೌಡ ಬೋಳ, ಕೆ.ಸಿ.ಹೊನ್ನಪ್ಪ ಗೌಡ ಕಟ್ಟ, ವಿಶ್ವನಾಥ ಗೌಡ ಕಟ್ಟ, ನೋಣಪ್ಪ ಗೌಡ ಕೂರೇಲು, ತಿಮ್ಮಪ್ಪ ಗೌಡ ಕೂರೇಲು, ಸೇಸಮ್ಮ ಕೂರೇಲು, ಸ್ಮಿತಾ ರಮೇಶ ಗೌಡ, ಕೆ.ಟಿ. ಧರ್ಮಪಾಲ ಗೌಡ, ಕುಸುಮಾವತಿ ಕೀಲೆ, ಲಕ್ಷ್ಮಣ ಗೌಡ ಕೀಲೆ, ಸುಂದರ ಗೌಡ ಕೀಲೆ, ಸೋಮಪ್ಪ ಗೌಡ ಕೀಲೆ, ವಸಂತ ಗೌಡ ಕೀಲೆ, ಜಾನಕಿ ಬಾಲಕೃಷ್ಣ ಗೌಡ, ವಿನಯ ಸುರೇಶ್ ಗೌಡ, ಮೇದಪ್ಪ ಗೌಡ ಕೂರೇಲು, ಜತ್ತಪ್ಪ ಗೌಡ ಕೂರೇಲು, ತ್ರಿವೇಣಿ, ರಾಜೇಶ್ವರಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here