ಚೆನ್ನಾವರ : ನಿವೃತ ಮುಖ್ಯಶಿಕ್ಷಕಿ ಶಾಂತಾ ಕುಮಾರಿ ಅವರಿಗೆ ಬೀಳ್ಕೊಡುಗೆ:  ಚೆಂಡೆವಾದನದೊಂದಿಗೆ ಮೆರವಣಿಗೆ ಮೂಲಕ ಪುಷ್ಪವೃಷ್ಟಿ ಸುರಿಸಿ ಅದ್ದೂರಿ ಸ್ವಾಗತ

0

 

ಸವಣೂರು : ಪಾಲ್ತಾಡಿ ಗ್ರಾಮದ ಚೆನ್ನಾವರ ಸ.ಕಿ.ಪ್ರಾ.ಶಾಲೆಯಲ್ಲಿ ಕಳೆದ 19ವರ್ಷಗಳಿಂದ ಸೇವೆ ಸಲ್ಲಿಸಿ ನಿವೃತ್ತಿಹೊಂದಿದ ಜಿಲ್ಲಾ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ಪುರಸ್ಕೃತ ಶಾಂತಾ ಕುಮಾರಿ ಅವರಿಗೆ ಬೀಳ್ಕೊಡುಗೆ ಕಾರ್ಯಕ್ರಮ ಚೆನ್ನಾವರ ಶಾಲೆಯಲ್ಲಿ ನಡೆಯಿತು. ಕಾರ್ಯಕ್ರಮವನ್ನು ಪ್ರಗತಿಪರ ಕೃಷಿಕ ಬಾಲಕೃಷ್ಣ ರೈ ಚೆನ್ನಾವರ ಅವರು ಉದ್ಘಾಟಿಸಿ ಮಾತನಾಡಿ,ಶಾಂತಾ ಕುಮಾರಿ ಅವರು ಮಕ್ಕಳ ಹಾಗೂ ಊರಿನ ಜನತೆಯ ಮೇಲೆ ವಿಶೇಷ ಪ್ರೀತಿಹೊಂದಿದ್ದು, ನಿತ್ಯ ಶಾಲೆ ಹಾಗೂ ಮಕ್ಕಳ ಕುರಿತಾಗಿಯೇ ಕಾಳಜಿಹೊಂದಿದ್ದರು ಎಂದರು.

ಅಧ್ಯಕ್ಷತೆ ವಹಿಸಿದ್ದ ಸವಣೂರು ಗ್ರಾ.ಪಂ.ಅಧ್ಯಕ್ಷೆ ರಾಜೀವಿ ವಿ.ಶೆಟ್ಟಿ ಮಾತನಾಡಿ, ಶಾಲಾ ಶಿಕ್ಷಕಿಯೊಬ್ಬರ ಬೀಳ್ಕೊಡುವ ಕಾರ್ಯಕ್ರಮವನ್ನು ಅದ್ದೂರಿ ಹಾಗೂ ಅರ್ಥಪೂರ್ಣವಾಗಿ ಮಾಡುವ ಮೂಲಕ ಶಿಕ್ಷಕರನ್ನು ಗೌರವ ಪೂರಕವಾಗಿ ಗೌರವಿಸಿದ್ದು,ಶಿಕ್ಷಕಿ ಶಾಂತಾ ಕುಮಾರಿಯವರ ಕರ್ತವ್ಯನಿಷ್ಟೆಗೆ ಸಂದ ಗೌರವ ಎಂದರು.

ಕಾರ್ಯಕ್ರಮದಲ್ಲಿ ಸವಣೂರು ಗ್ರಾ.ಪಂ.ಸದಸ್ಯೆ ವಿನೋದಾ ಸಿ.ರೈ, ಕ್ಷೇತ್ರ ಸಂಪನ್ಮೂಲ ಕೇಂದ್ರ ಬಿಐಇಆರ್‌ಟಿ ತನುಜಾ ,ಕೆಯ್ಯೂರು ಸಿಆರ್‌ಪಿ ನಿರಂಜನ್ ಎಂ.ಜಿ., ಚೆನ್ನಾವರಗುತ್ತಿನ ಪದ್ಮನಾಭ ಶೆಟ್ಟಿ , ಉಳ್ಳಾಕುಲು ದೈವಸ್ಥಾನದ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಸುಬ್ರಾಯ ಗೌಡ ಬಿ, ಉದ್ಯಮಿ ಸಿ.ಪಿ.ಅಬ್ದುಲ್ಲಾ, ಚೆನ್ನಾವರ ಮುಹಿಯ್ಯುದ್ದಿನ್ ಜುಮ್ಮಾ ಮಸೀದಿಯ ಅಧ್ಯಕ್ಷ ಮಹಮ್ಮದ್ ಶಾಫಿ, ಅಭ್ಯುದಯ ಯುವಕ ಮಂಡಲದ ಸ್ಥಾಪಕಾಧ್ಯಕ್ಷ ಸುಬ್ಬಣ್ಣ ದಾಸ್, ನಾರಾಯಣ ರೈ ಚೆನ್ನಾವರಪಟ್ಟೆ, ಚೆನ್ನಾವರ ಅಂಗನವಾಡಿಯ ಕಾರ್ಯಕರ್ತೆ ನಳಿನಿ ರೈ, ಸವಣೂರು ಗ್ರಾ.ಪಂ.ಮಾಜಿ ಅ‘ಕ್ಷೆ ಇಂದಿರಾ ಬಿ.ಕೆ, ಶಾಲಾಭಿವೃದ್ದಿ ಸಮಿತಿಯ ಉಪಾಧ್ಯಕ್ಷೆ ಜಯಂತಿ ರೈ ದೇರ್ನಡ್ಕ, ಶಾಲಾ ನಾಯಕಿ ಯಶ್ವಿತಾ ಅವರು ಉಪಸ್ಥಿತರಿದ್ದರು. ಶಾಲಾ ಮುಖ್ಯಶಿಕ್ಷಕಿ ಶ್ವೇತಾ ಅವರು ಸಮ್ಮಾನ ಪತ್ರ ವಾಚಿಸಿ, ಅಭಿನಂದನಾ ಭಾಷಣ ಮಾಡಿದರು.

ಪುಸ್ತಕ ಬಿಡುಗಡೆ
ಇದೇ ಸಂದರ್ಭದಲ್ಲಿ ನಿವೃತ ಶಿಕ್ಷಕಿ ಶಾಂತಾ ಕುಮಾರಿ ಅವರ ಕನಸು-ನನಸು ಕವನ ಸಂಕಲನವನ್ನು ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಉಮೇಶ್ ನಾಯಕ್ ಅವರು ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಬಳಿಕ ಶಾಂತಾ ಕುಮಾರಿ ಅವರನ್ನು ಕನ್ನಡದ ಶಾಲು ಹಾಕಿ ಕನ್ನಡ ಸಾಹಿತ್ಯ ಪರಿಷತ್‌ಗೆ ಬರಮಾಡಿಕೊಂಡರು. ಚಿಣ್ಣರ ಚಿಗುರು ಶಾಲಾ ವಾರ್ಷಿಕ ಸಂಚಿಕೆಯನ್ನು ಕೆಯ್ಯೂರು ಸಿಆರ್‌ಪಿ ನಿರಂಜನ್ ಎಂ.ಜಿ. ಅವರು ಬಿಡುಗಡಗೊಳಿಸಿದರು.

ಅದ್ದೂರಿ ಮೆರವಣಿಗೆ
ಕಾರ್ಯಕ್ರಮಕ್ಕೂ ಮುನ್ನ ಮುಖ್ಯರಸ್ತೆಯಿಂದ ಚೆನ್ನಾವರ ಶಾಲೆಯವರೆಗೆ ನಿವೃತ ಶಿಕ್ಷಕಿ ಶಾಂತಾ ಕುಮಾರಿ ಅವರನ್ನು ಚೆಂಡೆವಾದನದ ಮೂಲಕ ಮೆರವಣಿಗೆ ಮೂಲಕ ಬರಮಾಡಿಕೊಂಡು ಪುಷ್ಪವೃಷ್ಟಿ ಸುರಿಸಿ ವೇದಿಕೆಗೆ ಅದ್ದೂರಿಯಾಗಿ ಸ್ವಾಗತಿಸಲಾಯಿತು.

ಗೌರವಾರ್ಪಣೆ
ಕಾರ್ಯಕ್ರಮದಲ್ಲಿ ಶಾಲಾಭಿವೃದ್ದಿ ಸಮಿತಿ,ಹಳೆ ವಿದ್ಯಾರ್ಥಿ ಸಂಘ,ಅಭಿನಂದನಾ ಸಮಿತಿ ಹಾಗೂ ವಿದ್ಯಾಭಿಮಾನಿಗಳ ವತಿಯಿಂದ ಶಾಂತಾ ಕುಮಾರಿ-ಡಾ.ವೆಂಕಟರಮಣ ಮೊಳೆಯಾರ ದಂಪತಿಯನ್ನು ಗೌರವಿಸಿ ಫಲಪುಷ್ಪ ಹಾಗೂ ಚಿನ್ನದ ಉಡುಗೊರೆ ನೀಡಿ ಅಭಿನಂದಿಸಲಾಯಿತು.ಮಕ್ಕಳಾದ ವರ್ಷಾ ಮೊಳೆಯಾರ,ದುರ್ಗಾರ್ಚನಾ ಮೊಳೆಯಾರ ಉಪಸ್ಥಿತರಿದ್ದರು.

ಚೆನ್ನಾವರ ಅಂಗನವಾಡಿ ಕೇಂದ್ರದ ವತಿಯಿಂದ ಕಾರ್ಯಕರ್ತೆ ನಳಿನಿ ರೈ, ಸಹಾಯಕಿ ಕಮಲಾಕ್ಷಿ ರೈ ಹಾಗೂ ಪೋಷಕರು, ಕೆಯ್ಯೂರು ಕ್ಲಸ್ಟರ್ ವತಿಯಿಂದ ಕೆಪಿಎಸ್ ಕೆಯ್ಯೂರಿನ ಪ್ರಾಥಮಿಕ ಶಾಲಾ ವಿಭಾಗದ ಮುಖ್ಯಸ್ಥ ಬಾಬು,ಸರ್ವೆ ಶಾಲೆಯ ನವೀನ್ ,ಕಡಬ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಕೆ, ರಾಜ್ಯ ಸಮಿತಿ ಸದಸ್ಯೆ ಹೇಮಲತಾ, ನಿಂಗರಾಜು ಅವರು ವಿದ್ಯಾರ್ಥಿಗಳ ಪೋಷಕರು ಹಾಗೂ ವಿವಿಧ ಶಾಲೆಗಳ ಶಿಕ್ಷಕರು ಗೌರವಿಸಿದರು. ಇದೇ ಸಂದರ್ಭ ಶಾಲಾಭಿವೃದ್ದಿ ಸಮಿತಿ ಮಾಜಿ ಅಧ್ಯಕ್ಷ ಹನೀಫ್ ಇಂದ್ರಾಜೆ, ಇಬ್ರಾಹಿಂ, ಗೌರವ ಶಿಕ್ಷಕಿ ರಂಝೀನಾ, ಅಕ್ಷರ ದಾಸೋಹದ ನಿವೃತ ಸಿಬಂದಿ ಪದ್ಮಾವತಿ, ಪವಿತ್ರವೇಣೆ ಅವರನ್ನು ಗೌರವಿಸಲಾಯಿತು.

ಸಾಂಸ್ಕೃತಿಕ ಕಾರ್ಯಕ್ರಮ
ಸಭಾ ಕಾರ್ಯಕ್ರಮಕ್ಕೂ ಮುನ್ನ ಶಾಲಾ ವಿದ್ಯಾರ್ಥಿಗಳಿಂದ ಹಿರಿಯ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಪುರಂದರ ನಾಯ್ಕ ಸ್ವಾಗತಿಸಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರವೀಣ್ ಚೆನ್ನಾವರ ಪ್ರಸ್ತಾವನೆಗೈದರು. ಶಿಕ್ಷಕ ಗಂಗಾಧರ ಅವರು ವಂದಿಸಿದರು. ಶಿಕ್ಷಕ ಶಶಿ ಕುಮಾರ್ ಬಿ.ಎನ್ ಅವರು ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here