ಪುತ್ತೂರು ಜಾತ್ರೆಗೆ 4ನೇ ದಿನದ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ – ಧಾರ್ಮಿಕ ಉಪನ್ಯಾಸ

0

  • ಕಲಿಯುಗದಲ್ಲಿ ಜಾತ್ರಾ ಸಂದರ್ಭದಲ್ಲಾದರೂ ಭಗವಂತನ ಸ್ಮರಣೆಯಿಂದ ನೆಮ್ಮದಿ – ವಿದ್ವಾನ್ ರಘುಪತಿ ಭಟ್
ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೆಗೆ ಸಂಬಂಧಿಸಿ ದೇವಳದ ಎದುರು ಗದ್ದೆಯಲ್ಲಿರುವ ಶ್ರೀ ಪಾರ್ವತಿ ಸಾಂಸ್ಕೃತಿಕ ಕಲಾ ವೇದಿಕೆಯಲ್ಲಿ ಪ್ರತಿ ನಿತ್ಯ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತಿದ್ದು, ಎ.13ರಂದು ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಧಾರ್ಮಿಕ ಉಪನ್ಯಾಸ ಕಾರ್ಯಕ್ರಮ ನಡೆಯಿತು.ವಿದ್ವಾನ್ ರಘುಪತಿ ಭಟ್ ಅವರು ೪ ನೇ ದಿನದ ಕಾರ್ಯಕ್ರಮ ಉದ್ಘಾಟಿಸಿದರು.  ಓಂಕಾರ ಮತ್ತು ಶಂಖನಾದದ ಮೂಲಕ ಸಭಾ ಕಾರ್ಯಕ್ರಮ ಆರಂಭಗೊಂಡಿತು.
ಕಲಿಯುಗದಲ್ಲಿ ಜಾತ್ರಾ ಸಂದರ್ಭದಲ್ಲಾದರೂ ಭಗವಂತನ ಸ್ಮರಣೆಯಿಂದ ನೆಮ್ಮದಿ:
ಧಾರ್ಮಿಕ ಉಪನ್ಯಾಸ ನೀಡಿದ ವಿದ್ವಾನ್ ರಘುಪತಿ ಭಟ್ ಅವರು ಮಾತನಾಡಿದರು. ಭಗವಂತನನ್ನು ನಮ್ಮೊಳಗೆ ಕಂಡಾಗ ನಮ್ಮ ಹಿರಿಯರು‌ ಮಾಡಿದ ಧಾರ್ಮಿಕ ಕಾರ್ಯ ಸಾರ್ಥಕ ಪಡೆಯುತ್ತದೆ. ಆದರೆ ಚೈತನ್ಯ ಕಾಣಬೇಕಾದರೆ ತಪಸ್ಸು ಮಾಡಬೇಕು. ಆದರೆ ಕಲಿಯುಗದಲ್ಲಿ ತಪಸ್ಸು ಮಾಡಲಾಗದಿದ್ದರೂ ಭಗವಂತನನ್ನು ಜಾತ್ರಾ ಸಂದರ್ಭದಲ್ಲಿ ಯಾದರೂ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಗವಂತನ ಲೀಲೆ ತೋರಿಸುವ ನೃತ್ಯ ರೂಪಕವನ್ನು ನೋಡಿಯಾದರೂ ಭಗವಂತನನ್ನು ಹೃದಯದಲ್ಲಿ ಇಟ್ಟುಕೊಳ್ಳುವ ಕೆಲಸ ಮಾಡಿ ನೆಮ್ಮದಿ ಪಡೆದು ಕೊಳ್ಳಿ ಎಂದರು. ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ, ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯ ಬಿ ಐತ್ತಪ್ಪ ನಾಯ್ಕ್, ರಾಜೇಶ್ ಬನ್ನೂರು ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯೆ ಡಾ.ಸುಧಾ ಎಸ್ ರಾವ್ ಧಾರ್ಮಿಕ ಪ್ರಾಸ್ತಾವಿಕವಾಗಿ ಮಾತನಾಡಿದರು.ಸಾನ್ವಿ ಕಜೆ ಪ್ರಾರ್ಥಿಸಿದರು. ಸಾಂಸ್ಕೃತಿಕ ಕಾರ್ಯಕ್ರಮ ಉಪಸಮಿತಿ ಸದಸ್ಯರಾದ ಡಾ| ರಾಜೇಶ್ ಬೆಜ್ಜಂಗಳ, ನಿವೃತ ಪ್ರಾಂಶುಪಾಲ ಸುರೇಶ್ ಶೆಟ್ಟಿ ಮತ್ತು ವಿಜಯಾ ಸರಸ್ವತಿ ಕಾರ್ಯಕ್ರಮ ನಿರೂಪಿಸಿದರು. 

LEAVE A REPLY

Please enter your comment!
Please enter your name here