ವಕೀಲರ ಸಂಘ, ಸರಸ್ವತಿ ಚಾರಿಟೇಬಲ್ ಟ್ರಸ್ಟ್, ದ್ವಾರಕ ಪ್ರತಿಷ್ಠಾನದ ಸಹಯೋಗ – ಪುತ್ತೂರು ಜಾತ್ರೆ ಗದ್ದೆಯಲ್ಲಿ ಕುಡಿಯುವ ನೀರಿನ ಸೌಲಭ್ಯ ಉದ್ಘಾಟನೆ

0

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಬ್ರಹ್ಮರಥೋತ್ಸವದ ದಿನದಂದು ಪುತ್ತೂರು ವಕೀಲರ ಸಂಘ, ಸರಸ್ವತಿ ಚಾರಿಟೇಬಲ್ ಟ್ರಸ್ಟ್ ಹಾಗು ದ್ವಾರಕಾ ಪ್ರತಿಷ್ಠಾನದ ವತಿಯಿಂದ ದೇವಳದ ಎದುರು ಗದ್ದೆಯಲ್ಲಿ 4ನೇ ವರ್ಷದ ಉಚಿತ ಶುದ್ಧ ಕುಡಿಯುವ ನೀರು ವಿತರಣೆ ಸೌಲಭ್ಯ ಎ.17ರಂದು ಉದ್ಘಾಟನೆಗೊಂಡಿದೆ.

ಪುತ್ತೂರಿನಲ್ಲಿ ಈ ಹಿಂದೆ ನ್ಯಾಯಾಧೀಶರಾಗಿದ್ದು ಕೋಲಾರದ ಮಾಲೂರು ನ್ಯಾಯಾಲಯದಲ್ಲಿ ನ್ಯಾಯಾಧೀಶೆಯಾಗಿರುವ ಲತಾದೇವಿ ಅವರು ಉಚಿತ ನೀರು ವಿತರಣೆ ಸೌಲಭ್ಯ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸಹಾಯಕ ಸರಕಾರಿ ಅಭಿಯೋಜಕಿ ಕವಿತಾ, ಸರಸ್ವತಿ ಚಾರಿಟೇಬಲ್ ಟ್ರಸ್ಟ್‌ನ ಟ್ರಸ್ಟಿ ದೇವಿಪ್ರಸಾದ್ ಕೆ ಶುಭ ಹಾರೈಸಿದರು. ವಕೀಲರ ಸಂಘದ ಮಾಜಿ ಅಧ್ಯಕ್ಷ ಭಾಸ್ಕರ್ ಕೋಡಿಂಬಾಳ ಪ್ರಾಸ್ತಾವಿಕವಾಗಿ ಮಾತನಾಡಿದರು. ದ್ವಾರಕಾ ಪ್ರತಿಷ್ಠಾನದ ಅಧ್ಯಕ್ಷ ಗೋಪಾಲಕೃಷ್ಣ, ಸರಸ್ವತಿ ಕ್ರೆಡಿಟ್ ಕೋ ಓಪರೇಟಿವ್ ಸೊಸೈಟಿಯ ಪುತ್ತೂರು ನಗರ ಶಾಖೆಯ ಪ್ರಧಾನ ವ್ಯವಸ್ಥಾಪಕ ವಸಂತ್ ಎ, ವಕೀಲರ ಸಂಘದ ಉಪಾಧ್ಯಕ್ಷ ಕೃಷ್ಣಪ್ಪ ಕಕ್ವೆ, ಮಾಜಿ ಉಪಾಧ್ಯಕ್ಷ ಸುರೇಶ್ ರೈ ಪಡ್ಡಂಬೈಲು, ಕೋಶಾಧಿಕಾರಿ ಶ್ಯಾಮ್‌ಪ್ರಸಾದ್, ವಕೀಲರಾದ ರಾಜೇಶ್ವರಿ, ಹರಿಣಾಕ್ಷಿ ಜೆ ಶೆಟ್ಟಿ, ಮಾದವ ಪೂಜಾರಿ, ಜಯರಾಮ ರೈ, ಕುಮಾರನಾಥ್ ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು. ವಕೀಲರಾದ ದೀಪಕ್ ಬೊಳುವಾರು ಸ್ವಾಗತಿಸಿ, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಚಿನ್ಮಯ್ ರೈ ವಂದಿಸಿದರು.

 

LEAVE A REPLY

Please enter your comment!
Please enter your name here