ಫಿಲೋಮಿನಾ ಗಣೇಶೋತ್ಸವಕ್ಕೆ 40 ರ ಸಂಭ್ರಮ

0

  • 2 ದಿನಗಳ ಕಾಲ ವಿಜ್ರಂಭಣೆಯಿಂದ ಆಚರಿಸಲು ನಿರ್ಧಾರ

ಪುತ್ತೂರು: ಸಂತ ಫಿಲೋಮಿನಾ ಕಾಲೇಜು ಹಿರಿಯ ವಿದ್ಯಾರ್ಥಿ ಶ್ರೀ ಗಣೇಶೋತ್ಸವ ಸೇವಾ ಟ್ರಸ್ಟ್ ಹಾಗೂ ಸಂತ ಫಿಲೋಮಿನಾ ವಿದ್ಯಾರ್ಥಿ ಗಣೇಶೋತ್ಸವ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ನಡೆಯುವ ೪೦ನೇ ವರ್ಷದ ಗಣೇಶೋತ್ಸವದ ಪೂರ್ವಭಾವಿ ಸಭೆಯು ಏ.17 ರಂದು ಬೆಳಿಗ್ಗೆ ದರ್ಬೆ ವಿನಾಯಕ ನಗರದಲ್ಲಿ ಜರಗಿತು.

 


ಸಂತ ಫಿಲೋಮಿನಾ ಕಾಲೇಜು ಹಿರಿಯ ವಿದ್ಯಾರ್ಥಿ ಶ್ರೀ ಗಣೇಶೋತ್ಸವ ಸೇವಾ ಟ್ರಸ್ಟ್ ಅಧ್ಯಕ್ಷರಾದ ಪ್ರಕಾಶ್ ಮುಕ್ರಂಪಾಡಿರವರ ಅಧ್ಯಕ್ಷತೆಯಲ್ಲಿ ನಡೆದ ಸಭೆ ನಡೆಯಿತು. ಕಳೆದ ಎರಡು ವರ್ಷ ಕೊರೋನಾದ ತೊಂದರೆಯಿಂದಾಗಿ ಕೇವಲ ಧಾರ್ಮಿಕ ಕಾರ್ಯಕ್ರಮಕ್ಕೆ ಸೀಮಿತವಾದ ಗಣೇಶೋತ್ಸವ ಈ ಬಾರಿ ದರ್ಬೆ ವಿನಾಯಕ ನಗರದಲ್ಲಿ ಎರಡು ದಿನಗಳ ಕಾಲ ವಿಜ್ರಂಭಣೆಯಿಂದ ನಡೆಸುವ ಕುರಿತು ಸಭೆಯಲ್ಲಿ ಒಕ್ಕೊರಳದಿಂದ ನಿರ್ಧರಿಸಲಾಯಿತು. ಆಗಸ್ಟ್ ೩೧ ಹಾಗೂ ಸೆಪ್ಟೆಂಬರ್ ೧ ರಂದು ಎರಡು ದಿನಗಳ ಕಾಲ ವಿನಾಯಕ ನಗರದ ವಿನಾಯಕ ಮಂಟಪದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮದೊಂದಿಗೆ ಫಿಲೋಮಿನಾ ವಿದ್ಯಾಸಂಸ್ಥೆಯ ರ‍್ಯಾಂಕ್ ವಿಜೇತ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭ, ಮಂಗಳೂರು ವಿವಿ ಮಟ್ಟದ ಪ್ರತಿಭಾನ್ವಿತ ಕ್ರೀಡಾಪಟುಗಳಿಗೆ ಅಭಿನಂದಿಸುವ ಕಾರ್ಯಕ್ರಮ ವೇದಿಕೆಯಲ್ಲಿ ನಡೆಯಲಿದೆ. ಅಲ್ಲದೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ಎಂದಿನಂತೆ ಸಾರ್ವಜನಿಕ ಅನ್ನಸಂತರ್ಪಣೆ ಕಾರ್ಯಕ್ರಮವೂ ಜರಗಲಿದೆ. ರೆಡ್‌ಕ್ರಾಸ್ ಸಂಸ್ಥೆ ಹಾಗೂ ಫಿಲೋಮಿನಾ ಕಾಲೇಜು ಗಣೇಶೋತ್ಸವ ಸಮಿತಿಯಿಂದ ರಕ್ತದಾನ ಶಿಬಿರ ಜರಗಲಿದೆ ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು.

ಎರಡು ದಿನಗಳ ಕಾಲ ನಡೆಯುವ ಈ ಉತ್ಸವ ಕಾರ್ಯಮಕ್ಕೆ ಪುತ್ತೂರಿನ ಸಮಸ್ತ ನಾಗರಿಕರ ಸಹಕಾರವನ್ನು ಈ ಸಂದರ್ಭದಲ್ಲಿ ಕೋರಲಾಯಿತು ಅಲ್ಲದೆ ಕಳೆದ ಎರಡು ವರ್ಷದ ಲೆಕ್ಕಪತ್ರಕ್ಕೆ ಸಮಿತಿಯ ಅನುಮೋದನೆ ಪಡೆಯಲಾಯಿತು. ಫಿಲೋಮಿನಾ ಕಾಲೇಜು ಹಿರಿಯ ವಿದ್ಯಾರ್ಥಿ ಶ್ರೀ ಗಣೇಶೋತ್ಸವ ಸೇವಾ ಟ್ರಸ್ಟ್‌ನ ಸದಸ್ಯರಾದ ಮಂಜುನಾಥ್, ಅನಂತಕುಮಾರ್, ನಾಗಾರಾಜ್, ದುರ್ಗಾಪ್ರಸಾದ್, ಹರಿಣಿ ಪುತ್ತೂರಾಯ, ವೇಣುಗೋಪಾಲ್, ಡಾ.ಅಶೋಕ್ ಕುಮಾರ್ ರೈ, ದೇಲಂತಿಮಾರ್ ನಿತ್ಯಾನಂದ ಶೆಟ್ಟಿ, ನಾಗೇಶ್ ಪೈ, ಕೆ.ವಿಶ್ವಾಸ್ ಶೆಣೈ, ದಿನೇಶ್ ಪ್ರಸನ್ನ, ಶಿವಪ್ರಸಾದ್, ಪಾಂಗಾಳಾಯಿ ಸುಕುಮಾರ್, ಆಶ್ಲೇಷ, ಅಖಿಲ್, ಕೀರ್ತೇಶ್, ಚರಣ್, ನಿತೀಶ್, ನಂದನ್, ಶರದ್, ವಿದ್ಯಾರ್ಥಿಗಳಾದ ಪ್ರಜ್ವಲ್, ಆದೇಶ್, ಚಂದನ್, ಪ್ರಖ್ಯಾತ್ ಮತ್ತೀತರರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here