34-ನೆಕ್ಕಿಲಾಡಿ: ಜೀರ್ಣೋದ್ಧಾರಗೊಳ್ಳುತ್ತಿರುವ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಮಠದ ಶಿಲಾನ್ಯಾಸ ಕಾರ್ಯಕ್ರಮ

0

 

ಉಪ್ಪಿನಂಗಡಿ: ಇಲ್ಲಿಗೆ ಸಮೀಪದ 34-ನೆಕ್ಕಿಲಾಡಿಯಲ್ಲಿ ಜೀರ್ಣೋದ್ಧಾರಗೊಳ್ಳುತ್ತಿರುವ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಮಠದ ಶಿಲಾನ್ಯಾಸ ಕಾರ್ಯಕ್ರಮ ಎ. 21ರಂದು ಜರುಗಿತು.

ಉಡುಪಿ ಫಲಿಮಾರು ಮಠದ ವಿದ್ಯಾಧೀಶ ತೀರ್ಥ ಸ್ವಾಮೀಜಿ ಶಿಲಾನ್ಯಾಸ ನೆರವೇರಿಸಿ ಮಾತನಾಡಿ ನದಿ ಸಂಗಮ ಕ್ಷೇತ್ರವಾಗಿರುವ ಉಪ್ಪಿನಂಗಡಿಗೆ ಅದರದ್ದೇ ಆದ ಮಹತ್ವವಿದೆ. ರಾಷ್ಟ್ರೀಯ ಹೆದ್ದಾರಿ ಹಾದು ಹೋಗುವ ಈ ಪಾವನ ತುಂಬಿದ ನಾಡಿನಲ್ಲಿ ಶ್ರೀ ಗುರು ರಾಘವೇಂದ್ರ ಸ್ವಾಮಿಯವರಿಗೆ ಶಿಲಾಮಯವಾದ ಮಠ ನಿರ್ಮಾಣ ಆಗುತ್ತಿರುವುದು ಈ ಭಾಗದ ಭಕ್ತಾದಿಗಳ ಪಾಲಿಗೆ ಅದೊಂದು ಪ್ರಧಾನವಾಗಿದ್ದು, ಎಲ್ಲರ ಸಹಕಾರದಿಂದ ಮಠ ಶೀಘ್ರ ನಿರ್ಮಾಣ ಆಗಲಿ, ಉತ್ತರೋತ್ತರ ಅಭಿವೃದ್ಧಿ ಹೊಂದಲಿ ಎಂದರು. ಮುಖ್ಯ ಅತಿಥಿ ಪುತ್ತೂರು ಜಿ. ಎಲ್. ಆಚಾರ್ಯ ಸಂಸ್ಥೆಯ ಜಿ.ಎಲ್. ಬಲರಾಮ ಆಚಾರ್ಯ ಮಾತನಾಡಿ ಕಳೆದ ಹಲವಾರು ವರ್ಷಗಳಿಂದ ನೆಲೆನಿಂತಿರುವ ಇಲ್ಲಿನ ಮಠ ಜೀರ್ಣೋದ್ಧಾರ ಆಗುತ್ತಿರುವುದು ಹೆಮ್ಮೆಯ ವಿಚಾರ. ಶೀಘ್ರ ನಿರ್ಮಾಣವಾಗಿ ಉತ್ತರೋತ್ತರ ಅಭಿವೃದ್ಧಿ ಹೊಂದಲಿ ಎಂದರು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಹರೀಶ ಉಪಾಧ್ಯಾಯ ಮಾತನಾಡಿ ಕಳೆದ 17 ವರ್ಷಗಳಿಂದ ನೆಲೆ ನಿಂತಿರುವ ಮಠದ ಜೀರ್ಣೋದ್ಧಾರ ಕಾರ್ಯವನ್ನು ಯಶಸ್ವಿಯಾಗಿ ಪೂರೈಸಲು ಎಲ್ಲರೂ ಕೈಜೋಡಿಸಬೇಕು ಎಂದರು.

 

ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಕೆ. ರಾಧಾಕೃಷ್ಣ ನಾಯಕ್ ಮಾತನಾಡಿ ಮಠ ಎರಡೂವರೆ ಕೋಟಿ ರೂಪಾಯಿ ವೆಚ್ಚದಲ್ಲಿ ಜೀರ್ಣೋದ್ಧಾರ ಆಗಲಿದೆ. ಶೀಘ್ರವಾಗಿ ಪೂರ್ಣಗೊಳಿಸಲು ಎಲ್ಲರೂ ಕೈಜೋಡಿಸಬೇಕು ಎಂದರು. ಕಾರ್ಯಕ್ರಮದಲ್ಲಿ ಮಠ ಸಮಿತಿ ಅಧ್ಯಕ್ಷ ಕೆ. ಉದಯ ಕುಮಾರ್, ‌ಸದಸ್ಯರಾದ ಸದಾನಂದ, ಹರೀಶ್ ನಟ್ಟಿಬೈಲ್, ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕರುಣಾಕರ ಸುವರ್ಣ, ನೆಕ್ಕಿಲಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಶಾಂತ್, ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಉಷಾ ಚಂದ್ರ ಮುಳಿಯ, ಶಿಲ್ಪಿ ರಾಜೇಂದ್ರ, ಪ್ರಮುಖರಾದ ಜಯಂತ ಪೊರೋಳಿ, ಗುರುಪ್ರಸಾದ್ ರಾಮಕುಂಜ, ‌ಸುಧೀರ್, ವಸಂತ ಕುಮಾರ್ ಕಲ್ಲಳಿಕೆ, ಸುಂದರ, ರಾಮಣ್ಣ, ಸತೀಶ್, ವಿಶ್ವನಾಥ ಶೆಟ್ಟಿ ಕಂಗ್ವೆ, ಭಾಸ್ಕರ ಇಂಜಿನಿಯರ್ ಮತ್ತಿತರರು ಉಪಸ್ಥಿತರಿದ್ದರು. ಶಿವಕುಮಾರ್ ಬಾರಿತ್ತಾಯ ಸ್ವಾಗತಿಸಿ, ಮಠ ಸಮಿತಿ ಸದಸ್ಯ ಗೋಪಾಲ ಹೆಗ್ಡೆ ವಂದಿಸಿದರು.

LEAVE A REPLY

Please enter your comment!
Please enter your name here