ವಳತ್ತಡ್ಕದಲ್ಲಿ ಪೋಸ್ಟರ್ ಅಂಟಿಸಿ ಪಕ್ಷದ ತೇಜೋವಧೆಗೆ ಯತ್ನ- ಬಿಜೆಪಿ ಬೂತ್ ಸಮಿತಿಯಿಂದ ಸಂಪ್ಯ ಠಾಣೆಗೆ ದೂರು

0

ಪುತ್ತೂರು: ಆರ್ಯಾಪು ಗ್ರಾಮ ಪಂಚಾಯತ್ ವ್ಯಾಪ್ತಿಯ ವಳತ್ತಡ್ಕ ಪರಿಸರದಲ್ಲಿ ಅಲ್ಲಲ್ಲಿ ಪೋಸ್ಟರ್ ಅಂಟಿಸಿ, ಜನರಲ್ಲಿ ತಪ್ಪು ಭಾವನೆ ಮೂಡುವಂತೆ ಮಾಡಿ, ಪಕ್ಷವನ್ನು ತೇಜೋವಧೆ ಮಾಡುತ್ತಿದ್ದಾರೆ ಎಂದು ಬಿಜೆಪಿ ಕುಂಜೂರುಪಂಜ, ವಳತ್ತಡ್ಕ 110 ಬೂತ್ ಸಮಿತಿಯಿಂದ ಸಂಪ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಪಕ್ಷದ ವತಿಯಿಂದ ಯಾವುದೇ ರೀತಿಯ ಪೋಸ್ಟರ್ ಗಳನ್ನು ಅಂಟಿಸಿರುವುದಿಲ್ಲ. ಆದರೂ ಭಾರತೀಯ ಜನತಾ ಪಕ್ಷದ ತೇಜೋವಧೆ ಮಾಡುವ ಉದ್ದೇಶದಿಂದ ಜನರಲ್ಲಿ ತಪ್ಪು ಭಾವನೆ ಮೂಡುವಂತೆ ಹಾಗೂ ಪಕ್ಷವು ಮುಜುಗರಕ್ಕೊಳಪಡುವಂತೆ ಮಾಡುವ ಉದ್ದೇಶದಿಂದ ಅಲ್ಲಲ್ಲಿ ಪೋಸ್ಟರ್ ಗಳನ್ನು ಅಂಟಿಸಿರುತ್ತಾರೆ. ಆದುದರಿಂದ ಈ ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸುವಂತೆ ಪುತ್ತೂರು ಗ್ರಾಮಾಂತರ ಪೋಲೀಸ್ ಠಾಣೆ ಯ ಎಸ್. ಐ ಉದಯರವಿಯವರಿಗೆ ದೂರು ನೀಡಿದ್ದಾರೆ. ಬೂತ್ ಅಧ್ಯಕ್ಷ ಜಗನ್ನಾಥ, ಕಾರ್ಯದರ್ಶಿ ರಾಮ್ ಪ್ರಸಾದ್, ಆರ್ಯಾಪು ಗ್ರಾ.ಪ. ಸದಸ್ಯರಾದ ವಸಂತ ಶ್ರೀದುರ್ಗಾ ಹಾಗೂ ಶ್ರೀನಿವಾಸ ರೈ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here