ಸಂಟ್ಯಾರ್; ಶಾಲಾ ಪ್ರಾರಂಭೋತ್ಸವ

0

ಪುತ್ತೂರು; ಸರಕಾರಿ ಹಿಪ್ರಾ ಶಾಲೆ ಸಂಟ್ಯಾರ್ ಇದರ ಶಾಲಾ ಪ್ರಾರಂಭೋತ್ಸವ ಅದ್ದೂರಿಯಾಗಿ ನಡೆಯಿತು. ವಿದ್ಯಾರ್ಥಿಗಳನ್ನು   ಚಂಡೆ, ವಾದ್ಯಗಳ ಮೂಲಕ ಸ್ವಾಗತಿಸಿ ತರಗತಿಗೆ ಕರೆತರಲಾಯಿತು. ಶಾಲಾ ಎಸ್‌ಡಿಎಂಸಿ ಅಧ್ಯಕ್ಷರಾದ ಬಾಬು ಮರಿಕೆ ನೇತೃತ್ವದಲ್ಲಿ ಪ್ರಾರಂಭೋತ್ಸವ ಕಾರ್ಯಕ್ರಮ ನಡೆಯಿತು. ಉಪಾಧ್ಯಕ್ಷೆ ಸಂಧ್ಯಾ ಮರಿಕೆ, ಸದಸ್ಯರಾದ ಸುಮಿತ್ರ, ರಮೇಶ್, ಶೋಭಾ, ಕುಸುಮ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ರಾಕೇಶ್‌ ಪಾಪೆತ್ತಡ್ಕ, ಉಪಾಧ್ಯಕ್ಷ ಮಹೇಶ್, ಕಾರ್ಯದರ್ಶಿ ಸುಹೈಲ್, ಸದಸ್ಯರಾದ ಶಶಿಕಾಯರಪ್ಪು, ಮನೋಜ್, ಪುಟ್ಟಣ್ಣ, ಪ್ರಶಾಂತ್, ಮಹೇಶ್‌ಮುಲಾರ್ ಮತ್ತಿತರರು ಉಪಸ್ತಿತರಿದ್ದರು.


ಯತೀಶ್‌ದೇವರವರು ವಿದ್ಯಾರ್ಥಿಗಳಿಗೆ ಸಿಹಿತಿಂಡಿ ವಿತರಿಸಿದರು. ಮಲಾರ್ ಕೊರಗಜ್ಜ ಸಾನಿಧ್ಯದ ಮೊಕ್ತೇಸರರಾದ ಚೆನ್ನಪ್ಪರಿಂದ ಮಕ್ಕಳಿಗೆ ಮಧ್ಯಾಹ್ನದ ಭೋಜನ ವ್ಯವಸ್ಥೆಯನ್ನು ಮಾಡಲಾಗಿತ್ತು.ಶಾಲಾ ಮುಖ್ಯಗುರುಗಳು, ಶಿಕ್ಷಕ ವೃಂದದವರು ಸಹಕರಿಸಿದರು.

LEAVE A REPLY

Please enter your comment!
Please enter your name here