ಮೇ 22ಕ್ಕೆ ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘದ ಕೌಡಿಚ್ಚಾರ್ ಶಾಖೆಯ ನವೀಕೃತ ಕಟ್ಟಡ, ಮಾರಾಟ ಮಳಿಗೆ ಉದ್ಘಾಟನಾ ಸಮಾರಂಭ

0

  • ವಿದ್ಯುತ್ ಚಾಲಿತ ಕುಂಬಾರಿಕಾ ಚಕ್ರಗಳ ವಿತರಣೆ
  • ಕುಶಲಕರ್ಮಿಗಳಿಗೆ ಪಿಂಚಣಿ ಅನುಷ್ಠಾನ ಯೋಜನೆ

ಪುತ್ತೂರು: ದ.ಕ. ಜಿಲ್ಲೆಯಲ್ಲಿ 12 ಶಾಖೆಗಳನ್ನು ಹೊಂದಿರುವ ಪುತ್ತೂರಿನಲ್ಲಿರುವ ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘದ ಕೌಡಿಚ್ಚಾರು ಶಾಖೆಯ ನವೀಕೃತ ಕಟ್ಟಡದ ಉದ್ಘಾಟನಾ ಸಮಾರಂಭವು ಮೇ 22ರಂದು ಕೌಡಿಚ್ಚಾರು ಸಹಕಾರ ಸಂಘದ ಆವರಣದಲ್ಲಿ ನಡೆಯಲಿದೆ.

ಸಮಾರಂಭದಲ್ಲಿ ಕುಶಲ ಕರ್ಮಿಗಳಿಗೆ ವಿದ್ಯುತ್ ಚಾಲಿತ ಕುಂಬಾರಿಕಾ ಚಕ್ರಗಳ ವಿತರಣೆ ಮತ್ತು 60 ವರ್ಷ ಪೂರೈಸಿದ ಕುಂಬಾರ ಕುಶಲ ಕರ್ಮಿಗಳಿಗೆ ಸಹಕಾರ ಸಂಘದಿಂದ ಕೊಡಮಾಡುವ ಪಿಂಚಣಿ ಯೋಜನೆಯ ಅನುಷ್ಠಾ ಕಾರ್ಯಕ್ರಮ ನಡೆಯಲಿದೆ.

ನವೀಕೃತ ಕಟ್ಟಡವನ್ನು ಶಾಸಕ ಸಂಜೀವ ಮಠಂದೂರು ಉದ್ಘಾಟಿಸಲಿದ್ದಾರೆ. ಕಾವು ಕೃಷಿ ಪತ್ತಿನ ಸಹಕಾರ ಸಂಘ ಅಧ್ಯಕ್ಷ ನನ್ಯ ಅಚ್ಚುತ ಮೂಡೆತ್ತಾಯ, ಸಹಕಾರ ಸಂಘಗಳ ಸಹಾಯ ನಿಬಂಧಕ ತ್ರಿವೇಣಿ ರಾವ್, ಕರಕುಶಲ ಅಭಿವೃದ್ಧಿ ಮತ್ತು ಸೇವಾ ಕೇಂದ್ರ ಮಂಗಳೂರು ಇದರ ಸಹಾಯಕ ನಿರ್ದೇಶಕ ಶಿಬಿ ಮೈಕಲ್, ಅರಿಯಡ್ಕ ಗ್ರಾ.ಪಂ ಅಧ್ಯಕ್ಷೆ ಸೌಮ್ಯ ಬಾಲಸುಬ್ರಹ್ಮಣ್ಯ, ಜಲ ಮತ್ತು ವಾಸ್ತು ತಜ್ಞರಾದ ನಾರಾಯಣ ಮೂಲ್ಯ ನನ್ಯ ಪಟ್ಟಾಜೆ, ಅತಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘದ ಅಧ್ಯಕ್ಷ ನ್ಯಾಯವಾದಿ ಭಾಸ್ಕರ್ ಎಂ ಪೆರುವಾಯಿ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ 12 ಶಾಖೆ ಹೊಂದಿರುವ ಕುಂಬಾರರ ಗುಡಿ ಕೈಗಾರಿಕೆ ಸಂಘ ಎಲ್ಲಾ 12 ಶಾಖೆಗಳಲ್ಲೂ ಕುಂಬಾರಿಕೆ ಮಾರಾಟ ಮಳಿಗೆ ಹೊಂದಿದೆ. ಕೌಡಿಚ್ಚಾರಿನಲ್ಲಿ ಕುಂಬಾರಿಕೆ ತರಬೇತಿ ಕೇಂದ್ರವನ್ನು ಹೊಂದಿದೆ. ಸಹಕಾರ ಸಂಘವು 25456 ಸದಸ್ಯರನ್ನು ಹೊಂದಿದ್ದು, ರೂ. 325.82 ಲಕ್ಷ ಪಾಲು ಬಂಟವಾಳ ಹೊಂದಿದೆ. 412 ಲಕ್ಷ ನಿಧಿಗಳನ್ನು ಹೊಂದಿದ್ದು, ರೂ. 181.51 ಲಕ್ಷ ಲಾಭವನ್ನು 2021-22ನೇ ಸಾಲಿನಲ್ಲಿ ಗಳಿಸಿರುತ್ತದೆ. ಸಹಕಾರ ಸಂಘವು ವಿಭಾಗ ಮಟ್ಟದಲ್ಲಿ ಎರಡು ಬಾರಿ ಉತ್ತಮ ಸಹಕಾರ ಸಂಘವೆಂದು ಪುರಸ್ಕೃತಗೊಂಡಿದ್ದು, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನಿಂದ ಉತ್ತಮ ಪ್ರಶಸ್ತಿ ಲಭಿಸಿದೆ.

LEAVE A REPLY

Please enter your comment!
Please enter your name here