ಅರಿಯಡ್ಕ : ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಪಾಪೆಮಜಲು ಸರಕಾರಿ ಪ್ರೌಢಶಾಲೆ ಶೇ.91.89 ಪಡೆದುಕೊಂಡಿದೆ. ಪರೀಕ್ಷೆಗೆ ಹಾಜರಾದ ಒಟ್ಟು 37 ವಿದ್ಯಾರ್ಥಿಗಳಲ್ಲಿ 9 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ, 24 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಹಾಗೂ ಓರ್ವ ವಿದ್ಯಾರ್ಥಿ ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.
ವಿದ್ಯಾರ್ಥಿಗಳಾದ ತನ್ವಿ ಕೆ.(610), ಅನನ್ಯ ಜಿ.(534), ಅನುಷ್ ಕೆ.ಡಿ.(596), ಅನಿಲ್ ಕುಮಾರ್ ಜಿ.(571), ಅರ್ಪಿತಾ ಎಂ.ಬಿ.(591), ಪವಿತ್ರಾ ಕೆ.(594), ಪ್ರೀತಿಕಾ ಸಿ.ಎಚ್.(539), ಶ್ರುತಿ(553), ಯಕ್ಷಿತಾ ಬಿ.(544)ರವರು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದಾರೆ ಎಂದು ಮುಖ್ಯಗುರು ಮೋನಪ್ಪ ಬಿ. ಪೂಜಾರಿ ತಿಳಿಸಿದ್ದಾರೆ.