ಒಡಿಯೂರು ಶ್ರೀ ಗುರುದೇವಾ ಸೇವಾ ಬಳಗ, ವಜ್ರಮಾತಾ, ಗ್ರಾಮವಿಕಾಸದ ವಾರ್ಷಿಕೋತ್ಸವ- ಸತ್ಯದತ್ತ ವ್ರತ ಪೂಜೆ

0

  • ಗ್ರಾಮ ವಿಕಾಸದಿಂದ ರಾಷ್ಟ್ರದ ವಿಕಾಸ – ಒಡಿಯೂರು ಶ್ರೀ
  • ಪರೋಪಕಾರದಿಂದ ವ್ಯಕ್ತಿತ್ವ ರೂಪುಗೊಳ್ಳುತ್ತದೆ – ಸಾಧ್ವಿ ಮಾತಾನಂದಾಮಯಿ
  • ಶಾಸಕರ ಅನುದಾನದಿಂದ ವಿಕಲಚೇತನರಿಗೆ ರೂ. 5ಲಕ್ಷ ಅನುದಾನ-ಸಂಜೀವ ಮಠಂದೂರು
  • ಭಾವನೆಗಳ ಸಂತೋಷ ಅಗತ್ಯ – ಕೇಶವಪ್ರಸಾದ್ ಮುಳಿಯ
  • ಒಡಿಯೂರು ಬಳಗದಿಂದ ಸಮಾಜ ಕಲ್ಯಾಣ – ಮೂಡಂಬೈಲು ರವಿ ಶೆಟ್ಟಿ
  • ಧರ್ಮದ ನೆಲೆ ಉಳಿಸುವಲ್ಲಿ ಕ್ಷೇತ್ರ ನಮಗೆ ಮಾರ್ಗದರ್ಶನ – ಸೀತಾರಾಮ ರೈ
  • ಆಧ್ಯಾತ್ಮದ ಜೊತೆ ಸಮಾಜ ಸೇವೆ – ಕೃಷ್ಣಾ ಎಂ
  • ವಿಕಲಚೇತನ ಗೌರವ ಅವರ ಕೆಲಸಕ್ಕೆ ಉತ್ತೇಜನವಾಗಿದೆ – ಅನಿತಾ ಹೇಮನಾಥ ಶೆಟ್ಟಿ

 

ಪುತ್ತೂರು: ಜಾತಿ, ಮತ, ಧರ್ಮ ಬಿಟ್ಟು ಮಾನವ ಧರ್ಮದ ಬಗ್ಗೆ ಒತ್ತು ಕೊಡಬೇಕು. ಸೇವೆಯೇ ಸಾಧನವಾಗಬೇಕು. ಗ್ರಾಮ ವಿಕಾಸದಿಂದ ರಾಷ್ಟ್ರದ ವಿಕಾಸ ಎಂಬ ಚಿಂತನೆ ನಮಗೆ ಬರಬೇಕೆಂದು ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಅವರು ಹೇಳಿದರು.

ಒಡಿಯೂರು ಶ್ರೀ ಗುರುದೇವಾ ಸೇವಾ ಬಳಗ, ಒಡಿಯೂರು ಶ್ರೀ ವಜ್ರಮಾತಾ ಮಹಿಳಾ ಮಂಡಳಿ, ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆಯ ವಾರ್ಷಿಕೋತ್ಸವ ಪ್ರಯುಕ್ತ ಇಲ್ಲಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ನಡೆದ ಸತ್ಯದತ್ತ ವ್ರತ ಪೂಜೆಯ ಧರ್ಮ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು. ಸಮಾಜದಲ್ಲಿ ಆದರ್ಶವಾಗಿ ಬದುಕದಿದ್ದರೆ ಅದು ಅವಮಾನ. ಆದರ್ಶದ ಬದುಕಿಗೆ ನಿರಂತರ ಚಟುವಟಿಕೆ ಬೇಕು. ನಿಂತಿರುವ ಗಂಟೆಯಾಗದೆ ಚಲಿಸುವ ಗಂಟೆಯಾಗಬೇಕು. ಆ ಮೂಲಕ ಎಲ್ಲರು ಕ್ರೀಯಾಶೀಲರಾಗಬೇಕು. ಪುತ್ತೂರಿನಲ್ಲಿ ಯಾವ ಕಾರ್ಯಕ್ರಮ ಮಾಡುವುದಾದರೂ ಉತ್ತಮ ಮನಸ್ಸಿನ ಜನರು ನಮ್ಮೊಂದಿಗಿದ್ದಾರೆ. ಈ ನಿಟ್ಟಿನಲ್ಲಿ ಕಾರ್ಯಕ್ರಮ ಸಣ್ಣದು ದೊಡ್ಡದು ಮುಖ್ಯವಲ್ಲ. ಸೇವೆ ಮುಖ್ಯ ಎಂದ ಅವರು ಗ್ರಾಮ ವಿಕಾಸದಿಂದ ರಾಷ್ಟ್ರದ ವಿಕಾಸ ಎಂಬ ಚಿಂತನೆ ನಮ್ಮಲ್ಲಿ ಬರಬೇಕೆಂದರು.

ಪರೋಪಕಾರದಿಂದ ವ್ಯಕ್ತಿತ್ವ ರೂಪುಗೊಳ್ಳುತ್ತದೆ:
ಒಡಿಯೂರು ಶ್ರೀ ಗುರುದೇವ ಸಂಸ್ಥಾನದ ಸಾಧ್ವಿ ಶ್ರೀ ಮಾತಾನಂದಮಯಿ ಅವರು ಆರ್ಶೀವಚನ ನೀಡಿ ಪರೋಪಕಾರರ್ತದ ಜೀವನ ಮಾಡಲು ನಮಗೆ ಪ್ರಕೃತಿಯೆ ದಾರಿ ತೋರಿಸುತ್ತದೆ. ಇದರಿಂದ ನಮ್ಮ ವ್ಯಕ್ತಿತ್ವ ಉತ್ತಮವಾಗಿ ನಡೆಯಲಿದೆ. ಸಮಾಜ ಸೆವೆಗೆ ನಮ್ಮಿಂದಾಗುವ ಅವಕಾಶವನ್ನು ಗುರುಗಳು ಕೊಟ್ಟಿದ್ದಾರೆ. ನಿಸ್ವರ್ಥ ಸೇವೆಯಿಂದ ಆತ್ಮಶುದ್ದಿ ಮಾಡೋಣ ಎಂದರು.

 


ಶಾಸಕರ ಅನುದಾನದಿಂದ ವಿಕಲಚೇತನರಿಗೆ ರೂ. 5ಲಕ್ಷ ಅನುದಾನ:
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಸಂಜೀವ ಮಠಂದೂರು ಅವರು ಮಾತನಾಡಿ ಜೀವನ ಪರ್ಯಾಂತ ಕಷ್ಟ ಪಡುವವರ ಪರವಾಗಿ ಸರಕಾರ, ಮಠ ಇದೆ ಎಂದು ತೋರಿಸಿಕೊಡುವ ಕೆಲಸ ಆಗಿದೆ. ಸ್ವಾಮೀಜಿಯವರು ಮತ್ತುಗುರುದೇವ ಬಳಗ, ವಜ್ರಮಾತಾ ಬಳಗವನ್ನು ಅಭಿನಂದಿಸಬೇಕು ಎಂದ ಅವರು ಮಠ ಮಂದಿರಗಳಿಂದ ಧಾರ್ಮಿಕತೆಯ ಪ್ರಜ್ಞೆ ಮೂಡಿಸುವ ಜೊತೆಯಲ್ಲಿ ಸಮಾಜದಲ್ಲಿ ಪರಿವರ್ತನೆ ತರುವ ಕೆಲಸ ಆಗಿದೆ. ಶಾಸಕರ ಅನುದಾನದಲ್ಲಿ ರೂ. ೫ಲಕ್ಷ ವನ್ನು ವಿಕಲಚೇತನರಿಗೆ ಮೀಸಲಿಟ್ಟಿದ್ದೇನೆ. ಈ ಭಾರಿ ೨೩ ಮಂದಿ ಜನರಿಗೆ ದ್ವಿಚಕ್ರ ವಾಹನ, ನಾಲ್ಕು ಮಂದಿಗೆ ಶ್ರವಣ ಸಾಧನ, ಮೂರು ಮಂದಿಗೆ ಕೃತಕ ಕಾಲು, ಇಬ್ಬರಿಗೆ ಕೃತಕ ಕೈ, ಸುಮಾರು ರೂ. ೨.೫ಲಕ್ಷದ ತನಕ ಸಾಧನಗಳನ್ನು ಬೇರೆ ಬೇರೆ ನಿಧಿಯಿಂದ ಕೊಡಲಾಗಿದೆ ಎಂದರು.

ಭಾವನೆಗಳ ಸಂತೋಷ ಅಗತ್ಯ:
ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ಅವರು ಮಾತನಾಡಿ ಶಾಂತಯುಕ್ತರಾಗಿದ್ದಾಗ ಸಂತೋಷ ಸಾಧ್ಯ. ಒಡಿಯೂರು ಸಂಸ್ಥಾನ ಮೂಲಕ ಈ ರೀತಿಯ ಕಾರ್ಯಕ್ರಮ ನಡೆಯುತ್ತಿದೆ. ಭಾವನೆಗಳಿಂದ ಬರುವ ಸಂತೋಷಕ್ಕಿಂತ ಬೇರೊಂದು ಸಂತೋಷವಿಲ್ಲ ಎಂದರು.

ಒಡಿಯೂರು ಬಳಗದಿಂದ ಸಮಾಜ ಕಲ್ಯಾಣ:
ಉದ್ಯಮಿ ಮೂಡಂಬೈಲು ರವಿ ಶೆಟ್ಟಿ ಡೊನಿಂಜೆಗುತ್ತುರವರು ಮಾತನಾಡಿ ದೇವಾಲಯ ಮತ್ತು ವಿದ್ಯಾಲಯ ಸಮಾಜದ ಎರಡು ಕಣ್ಣುಗಳಿದ್ದಂತೆ. ಇದನ್ನು ಸಂರಕ್ಷಿಸುವುದು ನಮ್ಮೆಲ್ಲರ ಕರ್ತವ್ಯ. ಇವತ್ತು ಒಡಿಯೂರು ಸೇವಾ ಬಳಗ ಸೇರಿದಂತೆ ಹಲವು ವಿಭಾಗಗಳು ಬೇರೆ ಬೇರೆ ಸೇವೆಯ ಮೂಲಕ ಸಮಾಜದ ಕಲ್ಯಾಣ ಮಾಡುತ್ತಿದ್ದಾರೆ ಎಂದರು.

ಧರ್ಮದ ನೆಲೆ ಉಳಿಸುವಲ್ಲಿ ಕ್ಷೇತ್ರ ನಮಗೆ ಮಾರ್ಗದರ್ಶನ:
ಪದ್ಮಶ್ರೀ ಸೋಲಾರ್‍ಸ್ ಸಿಸ್ಟಮ್ಸ್‌ನ ಕೆದಂಬಾಡಿಗುತ್ತು ಸೀತಾರಾಮ ರೈ ಅವರು ಮಾತನಾಡಿ ಧರ್ಮದ ನೆಲೆ ಉಳಿಸಲು ಒಡಿಯೂರು ಶ್ರೀಗಳು ಹಾಕಿಕೊಂಡ ಕಾರ್ಯಕ್ರಮ ನಮಗೆಲ್ಲ ಉತ್ತಮ ಮಾರ್ಗದರ್ಶನ ನೀಡುತ್ತದೆ ಎಂದರು.

ಆಧ್ಯಾತ್ಮದ ಜೊತೆ ಸಮಾಜ ಸೇವೆ:
ಪದ್ಮಶ್ರೀ ಎಸೋಸಿಯೇಟ್ಸ್‌ನ ಕೃಷ್ಣ ಕುಲಾಲ್ ಎಮ್ ಅವರು ಮಾತನಾಡಿ ಆಧ್ಯಾತ್ಮದ ಜೊತೆಗೆ ಸಮಾಜ ಸೇವೆ ಒಡಿಯೂರು ಸೇವಾ ಬಳಗ, ವಜ್ರಮಾತದ ಮೂಲಕ ಆಗುವ ಉತ್ತಮ ಕೆಲಸ. ಇದು ಜನರಲ್ಲಿ ಧಾರ್ಮಿಕತೆಯ ಜೊತೆಗೆ ಇನ್ನೊಬ್ಬರ ಕಣ್ಣೀರು ಒರೆಸುವುದನ್ನು ಹೇಳಿಕೊಡುತ್ತದೆ ಎಂದರು.

ವಿಕಲಚೇತನ ಗೌರವ ಅವರ ಕೆಲಸಕ್ಕೆ ಉತ್ತೇಜನವಾಗಿದೆ:
ಜಿ.ಪಂ ಮಾಜಿ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿಯವರು ಮಾತನಾಡಿ ಮಾನಸಿಕವಾಗಿ ನೊಂದಿರುವ ವಿಕಲಚೇತನರನ್ನು ಗೌರವಿಸುವ ಮೂಲಕ ಅವರು ಬೇರೆ ಬೇರೆ ರೀತಿಯಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುವುದಕ್ಕೆ ಉತ್ತೇಜನ ನೀಡಿದಂತಾಗಿದೆ. ಅವರಿಗೆ ಇನ್ನಷ್ಟು ಸೇವೆ ನಮ್ಮ ಕಡೆಯಿಂದ ಸಿಗಬೇಕು. ವಿಕಲಚೇತನರ ಬೇಡಿಕೆಯನ್ನು ಈಡೇರಿಸುವಲ್ಲಿ ಉತ್ತಮ ಪ್ರಯತ್ನ ಮಾಡುವುದು ಶಾಸಕರು ಮತ್ತು ಜನಪ್ರತಿನಿಧಿಗಳ ಜವಾಬ್ದಾರಿ ಎಂದರು.

ಪುನರ್ವಸತಿ ಕಾರ್ಯಕರ್ತರಿಗೆ ಗೌರವ:
ಗ್ರಾ.ಪಂ ವ್ಯಾಪ್ತಿಯ ವಿಕಲ ಚೇತನ ಗ್ರಾಮೀಣ ಪುನರ್ವಸತಿಯ ಪುತ್ತೂರು ಮತ್ತು ಕಡಬ ತಾಲೂಕಿನ ೪೦ ಮಂದಿ ಕಾರ್ಯಕರ್ತರಿಗೆ ಗೌರವಾರ್ಪಣೆ ಕಾರ್ಯಕ್ರಮ ನಡೆಯಿತು. ಒಡಿಯೂರು ಶ್ರೀಗಳು ಕಾರ್ಯಕರ್ತರನ್ನು ಗೌರವಿಸಿ ಆಶೀರ್ವದಿಸಿದರು. ತೆರೆಯ ಮೇಲೆ ಕಾರ್ಯ ನಿರ್ವಹಿಸುತ್ತಿರುವ ನಿವೃತ ಸಿಡಿಪಿಒ ಶಾಂತಿ ಹೆಗ್ಡೆ, ಕಾವು ದಿವ್ಯನಾಥ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.ಪೆರಾಬೆ ಗ್ರಾಮದ ಪುನರ್ವಸತಿ ಕಾರ್ಯಕರ್ತ ಮುತ್ತಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು. ಒಡಿಯೂರು ವಜ್ರಮಾತಾ ಮಹಿಳಾ ಮಂಡಳಿಯ ಅಧ್ಯಕ್ಷೆ ನಯನಾ ರೈ ಗೌರವ ಸನ್ಮಾನ ಕಾರ್ಯಕ್ರಮ ನಿರ್ವಹಿಸಿದರು.

ನೂತನ ಪದಾಧಿಕಾರಿಗಳಿಗೆ ಗೌರವ:
ಒಡಿಯೂರು ಶ್ರೀ ಗುರುದೇವಾ ಸೇವಾ ಬಳಗದ ನೂತನ ಪದಾಧಿಕಾರಿಗಳಾದ ದೇವಪ್ಪ ನೊಂಡಾ, ಹರಿಣಾಕ್ಷಿ ಜೆ ಶೆಟ್ಟಿ, ಭವಾನಿ ಶಂಕರ್, ಹೆಚ್ ಉದಯ, ಅರವಿಂದ ಪೆರಿಗೇರಿ ಅವರಿಗೆ ಶ್ರೀಗಳು ಪ್ರಸಾದ ನೀಡಿ ಗೌರವಿಸಿದರು.

ಹಾರ್ಮೋನಿಯಮ್ ಕೊಡುಗೆ:
ಒಡಿಯೂರು ಶ್ರೀ ವಜ್ರಮಾತಾ ಭಜನಾ ಮಂಡಳಿಗೆ ಉದ್ಯಮಿ ಮೂಡಂಬೈಲು ರವಿ ಶೆಟ್ಟಿಯವರು ಹಾರ್ಮೋನಿಯಂ ಅನ್ನು ಕೊಡುಗೆಯಾಗಿ ನೀಡಿದ್ದು, ಶ್ರೀಗಳು ಹಾರ್ಮೋನಿಯಮ್ ಮೂಲಕ ಸಂಗೀತ ನುಡಿಸುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮೂಡಬೈಲು ರವಿ ಶೆಟ್ಟಿ, ಕೊಳಲು ವಾದಕ ಲಿಂಗಪ್ಪ ಗೌಡ ಉಪಸ್ಥಿತರಿದ್ದರು. ಒಡಿಯೂರು ವಜ್ರಮಾತಾ ಮಹಿಳಾ ಭಜನಾ ಮಂಡಳಿ ಘಟಕದ ಪ್ರಧಾನ ಕಾರ್ಯದರ್ಶಿ ಶಾರದಾ ಕೇಶವ್ ಅವರು ವಾರ್ಷಿಕ ವರದಿ ಮಂಡಿಸಿದರು. ವೇದಿಕೆಯಲ್ಲಿ ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಕೆ.ಸೀತಾರಾಮ ರೈ ಸವಣೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಒಡಿಯೂರು ಗುರು ಸೇವಾ ಬಳಗ, ವಜ್ರಮಾತ ಮಹಿಳಾ ಘಟಕ ಮತ್ತು ಯುವ ಬಂಟರ ಸಂಘದವತಿಯಿಂದ ಶ್ರೀಗಳನ್ನು ತುಳಸಿ ಹಾರದೊಂದಿಗೆ ಗೌರವಿಸಲಾಯಿತು. ಗಣ್ಯರಿಗೆ ಶ್ರೀಗಳು ಪುಸ್ತಕ, ಶಾಲು ಹಾಕಿ ಗೌರವಿಸಿದರು. ಶ್ರೀ ಗುರುದೇವಾ ಸೇವಾ ಬಳಗದ ಅಧ್ಯಕ್ಷ ನಿತ್ಯಾನಂದ ಶೆಟ್ಟಿ ಮನವಳಿಕೆ ಸ್ವಾಗತಿಸಿದರು. ಒಡಿಯೂರು ಗುರುದೇವಾ ಸೇವಾ ಬಳಗದ ನೂತನ ಪ್ರಧಾನ ಕಾರ್ಯದರ್ಶಿ ಹರಿಣಾಕ್ಷಿ ಜೆ ಶೆಟ್ಟಿ ವಂದಿಸಿದರು. ಮಾಜಿ ಪುರಸಭಾಧ್ಯಕ್ಷ ರಾಜೇಶ್ ಬನ್ನೂರು ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಆರಂಭದಲ್ಲಿ ಬೆಳಿಗ್ಗಿನಿಂದ ಮಧ್ಯಾಹ್ನದ ತನಕ ಭಜನಾ ಕಾರ್ಯಕ್ರಮ, ಮಹಾಪೂಜೆ ಬಳಿಕ, ಧಾರ್ಮಿಕ ಸಭೆ ನಡೆಯಿತು. ಸಭೆಯ ಬಳಿಕ ಪ್ರಸಾದ ವಿತರಣೆ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.

LEAVE A REPLY

Please enter your comment!
Please enter your name here