ಪತ್ರಿಕಾ ವಿತರಕರೊಂದಿಗೆ ಜನ್ಮದಿನವನ್ನಾಚರಿಸಿದ ರಾಜ್ಯ ಸಮಾಜ ಕಲ್ಯಾಣ ಮಂಡಳಿ ಮಾಜಿ ಅಧ್ಯಕ್ಷೆ ದಿವ್ಯಾಪ್ರಭಾ ಚಿಲ್ತಡ್ಕ

0

ಪ್ರಪಂಚದ ಸುದ್ದಿಯನ್ನು ಮನೆ ಮನೆ ಮುಟ್ಟಿಸುವ ಕಾಯಕ ಮೆಚ್ಚುವಂತಹದ್ದು

ಪುತ್ತೂರು: ಪ್ರಪಂಚದಲ್ಲಿ ಏನೆನು ಆಗ್ತಾ ಇದೆ ಎಂಬ ವಿಚಾರವನ್ನು ಮನೆ ಮನೆ ಮುಟ್ಟಿಸುವ ನಿಮ್ಮ ಕಾಯಕ ಮೆಚ್ಚುವಂತಹದ್ದು, ನಿಮ್ಮ ಸೇವೆಯಿಂದ ಸಮಾಜದ ವಿಚಾರ ಸಿಗುತ್ತದೆ ಎಂದು ರಾಜ್ಯ ಸಮಾಜ ಕಲ್ಯಾಣ ಮಂಡಳಿ ಮಾಜಿ ಅಧ್ಯಕ್ಷೆಯಾಗಿರುವ ಸುಳ್ಯ ಪ್ರಿಯದರ್ಶಿನಿ ಮಹಿಳಾ ಸಹಕಾರಿ ಸಂಘದ ಅಧ್ಯಕ್ಷೆ ದಿವ್ಯಾಪ್ರಭಾ ಚಿಲ್ತಡ್ಕ ಅವರು ಪತ್ರಿಕಾ ವಿತಕರ ಸೇವೆಯನ್ನು ಗುಣಗಾನ ಮಾಡಿದರು.


ಅವರು ತನ್ನ ಜನ್ಮದಿನವನ್ನು ಮೇ 31ರಂದು ನಸುಕಿನ ಜಾವ ಬಸ್‌ನಿಲ್ದಾಣದ ಬಳಿಯಲ್ಲಿ ಪತ್ರಿಕಾ ವಿತರಕರ ಜೊತೆ ಆಚರಿಸಿದರು. ಪತ್ರಿಕಾ ವಿತರಕರಿಗೆ ರೈನ್ ಕೋಟ್ ಕೊಡುಗೆಯಾಗಿ ನೀಡಿದರು. ಜನ್ಮ ದಿನಾಚರಣೆಯನ್ನು ಮನೆಯಲ್ಲಿ ಅಥವಾ ಬೇರೆಲ್ಲೋ ಆಡಂಬರದಲ್ಲಿ ಮಾಡಬಹುದು. ಆದರೆ ನನಗೆ ಸಮಾಜದ ಜನರ ಮಧ್ಯೆ ಆಚರಿಸಬೇಕೆಂಬ ಆಸೆ . ಈ ನಿಟ್ಟಿನಲ್ಲಿ ಸಮಾಜದ ಜನರಿಗೆ ಪ್ರಪಂಚದ ವಿಚಾರವನ್ನು ಮುಟ್ಟಿಸುವ ಪತ್ರಿಕಾ ವಿತಕರೊಂದಿಗೆ ಆಚರಿಸುವುದು ನನಗೆ ನೆಮ್ಮದಿ ಸಂತೋಷ ನೀಡಿದೆ ಎಂದರು. ಪತ್ರಿಕಾ ವಿತರಕರು ರೈನ್ ಕೋಟ್ ನೀಡಿದ ದಿವ್ಯಾಪ್ರಭಾ ಚಿಲ್ತಡ್ಕ ಅವರಿಗೆ ಕೃತಜ್ಞತೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಬೆಳ್ಳಾರೆ ಕಾಮಧೇನು ಗ್ರೂಪ್ಸ್ ನ ಮಾಲಕ ಮಾಧವ ಗೌಡ ಬೆಳ್ಳಾರೆ ಉಪಸ್ಥಿತರಿದ್ದರು. ಪತ್ರಿಕಾ ವಿತಕರಾದ ಜಯರಾಮ, ಅಮಿತ್, ಗಣೇಶ್, ವೆಂಕಟೇಶ್ ಹೆಗ್ಡೆ, ಗಣೇಶ್, ವಿಜಯ, ವಿಕ್ರಂ, ರಾಮಚಂದ್ರ, ಜಗದೀಶ್ ಸೇರಿದಂತೆ ಹಲವಾರು ಮಂದಿ ರೈನ್ ಕೋಟ್‌ಗಳನ್ನು ಪಡೆದು ಕೃತಜ್ಞತೆ ಸಲ್ಲಿಸಿದರು.

LEAVE A REPLY

Please enter your comment!
Please enter your name here