ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಯೋಜನಾಧಿಕಾರಿಯಾಗಿ ಸವಿತಾ ಶೆಟ್ಟಿ ಭಡ್ತಿ

0


ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್‌ನಲ್ಲಿ ಕಳೆದ 12 ವರ್ಷಗಳಿಂದ ಸೇವಾನಿರತರಾಗಿ, ನಗದು ಸಹಾಯಕಿಯಾಗಿ, ಮೇಲ್ವಿಚಾರಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸವಿತಾ ಶೆಟ್ಟಿಯವರು 2022-23ನೇ ಸಾಲಿನ ಭಡ್ತಿ ಪ್ರಕ್ರಿಯೆಯಲ್ಲಿ ತಾಲೂಕು ಯೋಜನಾಧಿಕಾರಿಯಾಗಿ ಭಡ್ತಿ ಹೊಂದಿರುತ್ತಾರೆ. ಈ ಹಿಂದೆ ಪುತ್ತೂರು ತಾಲೂಕು, ಸುಳ್ಯ ತಾಲೂಕು, ವಿರಾಜಪೇಟೆ ತಾಲೂಕುಗಳಲ್ಲಿ ಸೇವಾನಿರತೆಯಾಗಿ, ಸಕಲೇಶಪುರ ತಾಲೂಕಿನಲ್ಲಿ ನಗದು ಸಹಾಯಕಿಯಾಗಿ, ಮೈಸೂರು ತಾಲೂಕಿನಲ್ಲಿ ಮೇಲ್ವಿಚಾರಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸವಿತಾ ಶೆಟ್ಟಿ ಅವರು ಇದೀಗ ಯೋಜನಾಧಿಕಾರಿಯಾಗಿ ಭಡ್ತಿ ಹೊಂದಿರುತ್ತಾರೆ. ಬೆಳ್ತಂಗಡಿ ತಾಲೂಕು ಬಡಗಕಾರಂದೂರು ಗ್ರಾಮದ ನಾರಾಯಣ ಶೆಟ್ಟಿ ಹಾಗೂ ಶಾರದಾ ದಂಪತಿಯ ೫ನೇ ಪುತ್ರಿಯಾಗಿರುವ ಇವರು ಮಂಗಳೂರು ಪಡೀಲ್ ನಿವಾಸಿ ಜಯಾನಂದರವರ ಪತ್ನಿ.

LEAVE A REPLY

Please enter your comment!
Please enter your name here