ಮಾಡನ್ನೂರು ನೂರುಲ್ ಇಸ್ಲಾಂ ಸೆಕೆಂಡರಿ ಮದ್ರಸದ ನವೀಕೃತ ಕಾರ್ಯಾಲಯ ಉದ್ಘಾಟನೆ

0

  • ಡಾ.ಇಸ್ಮಾಯಿಲ್ ಅಸ್ಸಾಂರವರಿಂದ ಮದ್ರಸಕ್ಕೆ ಕಂಪ್ಯೂಟರ್, ಮುದ್ರಣಯಂತ್ರ ಕೊಡುಗೆ

ಪುತ್ತೂರು: ನೂರುಲ್ ಇಸ್ಲಾಂ ಸೆಕೆಂಡರಿ ಮದ್ರಸ ಇದರ ನವೀಕೃತಗೊಂಡ ಕಾರ್ಯಾಲಯ ಉದ್ಘಾಟನೆ ಜೂ.17ರಂದು ನಡೆಯಿತು. ಮಾಡನ್ನೂರು ಜುಮಾ ಮಸೀದಿಯ ಖತೀಬ್ ಸಿರಾಜುದ್ದೀನ್ ಫೈಝಿ ಉದ್ಘಾಟಿಸಿ ಶುಭ ಹಾರೈಸಿದರು. ಜಮಾಅತ್ ಅಧ್ಯಕ್ಷ ಕೆ.ಕೆ ಇಬ್ರಾಹಿಂ ಹಾಜಿ ಅಧ್ಯಕ್ಷತೆ ವಹಿಸಿದ್ದರು. ನೂರುಲ್ ಹುದಾ ಇಸ್ಲಾಮಿಕ್ ಅಕಾಡಮಿಯ ಅಧ್ಯಕ್ಷ ಬುಶ್ರಾ ಅಬ್ದುಲ್ ಅಝೀಝ್‌ರವರು ಕಛೇರಿಯಲ್ಲಿ ಹೊಸದಾಗಿ ವ್ಯವಸ್ಥೆಗೊಳಿಸಿದ ಕಂಪ್ಯೂಟರ್‌ಗೆ ಚಾಲನೆ ನೀಡಿದರು.
ಕೆ.ಕೆ ಕೊಚ್ಚಿ ಮನೆತನದ ಸದಸ್ಯ ಪ್ರಸ್ತುತ ಅಸ್ಸಾಂನಲ್ಲಿ ನೆಲೆಸಿರುವ ಡಾ.ಇಸ್ಮಾಯಿಲ್‌ರವರು ಮದ್ರಸಕ್ಕೆ ಕಂಪ್ಯೂಟರ್ ಹಾಗೂ ಮುದ್ರಣ ಯಂತ್ರವನ್ನು ಕೊಡುಗೆಯಾಗಿ ನೀಡಿದರು. ಕಛೇರಿಗೆ ಅಗತ್ಯವಿರುವ ಕಂಪ್ಯೂಟರ್ ಟೇಬಲ್ ಮೊದಲಾದ ಪರಿಕರಗಳನ್ನು ಕೆ.ಕೆ.ಕೊಚ್ಚಿ ಕುಟುಂಬದ ಸದಸ್ಯರಾದ ಕೆ.ಕೆ ನದೀಂ ಮೊಯಿದು ಹಾಜಿ, ಅಬ್ದುಲ್ ನಾಸಿರ್, ಬಾತಿಶಾ ನೀಡಿ ಸಹಕರಿಸಿದರು.

ಕೊಡುಗೆಗಳನ್ನು ಸ್ಮರಿಸಿ ಸಿರಾಜುದ್ದೀನ್ ಫೈಝಿ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ನಡೆಸಿ ಕೃತಜ್ಞತೆ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಜಮಾತ್ ಕಾರ್ಯದರ್ಶಿ ಅಬ್ದುಲ್ ಖಾದರ್ ಮುಸ್ಲಿಯಾರ್, ಜಮಾಅತ್ ಕೋಶಾಧಿಕಾರಿ ಅರೆಯಲಾಡಿ ಯೂಸುಫ್ ಹಾಜಿ, ನೂರುಲ್ ಹುದಾ ಇಸ್ಲಾಮಿಕ್ ಅಕಾಡೆಮಿ ಕೋಶಾಧಿಕಾರಿ ನೆಕ್ಕರೆ ಇಸ್ಮಾಯಿಲ್ ಹಾಜಿ, ಶಂಸುಲ್ ಉಲಮಾ ಕಲ್ಚರಲ್ ಸೆಂಟರ್‌ನ ಸದಸ್ಯರು, ಖುವ್ವತುಲ್ ಇಸ್ಲಾಂ ಯಂಗ್‌ಮೆನ್ಸ್‌ನ ಪದಾಧಿಕಾರಿಗಳು, ಕಾವು, ಅರೆಯಲಡಿ ಜಮಾಅತ್ ಪ್ರಮುಖರು, ಹಾಗೂ ಜಮಾತಿನ ಎಲ್ಲಾ ಪದಾಧಿಕಾರಿಗಳು, ಜಮಾಅತ್ ಬಾಂಧವರು ಉಪಸ್ಥಿತರಿದ್ದರು. ಮಾಡನ್ನೂರು ಮದ್ರಸ ಮುಖ್ಯೋಪಾಧ್ಯಾಯರಾದ ಅಮೀರ್ ಅರ್ಶದಿ ವಂದಿಸಿದರು.

LEAVE A REPLY

Please enter your comment!
Please enter your name here