ದ್ವಿತೀಯ ಪಿಯುಸಿ ಫಲಿತಾಂಶ; ವಾಣಿಜ್ಯ ವಿಭಾಗದಲ್ಲಿ ನರೇಂದ್ರ ಪ.ಪೂ.ಕಾಲೇಜಿನ ಮನ್ವಿತಾ ತಾಲೂಕಿಗೆ ಪ್ರಥಮ, ರಾಜ್ಯಕ್ಕೆ ನಾಲ್ಕನೇ ಸ್ಥಾನ

0

ಪುತ್ತೂರು:2021-22ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ತೆಂಕಿಲ ನರೇಂದ್ರ ಪದವಿ ಪೂರ್ವ ಕಾಲೇಜು ಶೇ.98% ಫಲಿತಾಂಶವನ್ನು ಪಡೆದಿದೆ. ಕಾಲೇಜಿನ ವಾಣಿಜ್ಯ ವಿಭಾಗದ ಮನ್ವಿತಾ ಎಸ್. 593(98.83%) ಅಂಕಗಳನ್ನು ಗಳಿಸಿ ತಾಲೂಕಿಗೆ ಪ್ರಥಮ ಹಾಗೂ ರಾಜ್ಯದಲ್ಲಿ ನಾಲ್ಕನೇ ಸ್ಥಾನ ಪಡೆದುಕೊಂಡಿದ್ದಾರೆ.

ಮನ್ವಿತಾ ಎಸ್. ಅವರು ಸಂಖ್ಯಾಶಾಸ್ತ್ರ-100, ಅರ್ಥಶಾಸ್ತ್ರ-100, ವ್ಯವಹಾರ ಅಧ್ಯಯನ-100, ಲೆಕ್ಕಶಾಸ್ತ್ರ-100, ಸಂಸ್ಕೃತ-100 ಅಂಕಗಳೊಂದಿಗೆ ಒಟ್ಟು 593 ಅಂಕಗಳನ್ನು ಗಳಿಸಿ ಅತ್ಯುತ್ತಮ ಸಾಧನೆಯನ್ನು ಮಾಡಿರುವುದರ ಜೊತೆಗೆ ರಾಜ್ಯಕ್ಕೆ ನಾಲ್ಕನೇ ಸ್ಥಾನ,ತಾಲೂಕಿಗೆ ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ. ಈಕೆ ರೋಟರಿಪುರ ನಿವಾಸಿ ಸತೀಶ್ ಸುವರ್ಣ ಮತ್ತು ರೇಖಾ ದಂಪತಿಗಳ ಪುತ್ರಿ.

ಚಾರ್ಟರ್ಡ್ ಅಕೌಂಟೆಂಟ್ ಆಗುವಾಸೆ:
ಪೋಷಕರು, ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು ಮತ್ತು ಉಪನ್ಯಾಸಕ ವರ್ಗದವರ ಬೆಂಬಲದಿಂದ ಮತ್ತು ಸತತ ಪರಿಶ್ರಮದಿಂದ ಈ ಸಾಧನೆ ಸಾಧ್ಯವಾಯಿತು. ಮುಂದೆ ಭವಿಷ್ಯದಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಆಗಬೇಕೆನ್ನುವ ಕನಸನ್ನು ಹೊಂದಿರುವುದಾಗಿ ಮನ್ವಿತಾ ತನ್ನ ಅಭಿಪ್ರಾಯವನ್ನು ಸುದ್ದಿಯೊಂದಿಗೆ ಹಂಚಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here