ಬಿಜೆಪಿ ಸುಳ್ಯ ಮಂಡಲ ಮಹಿಳಾ ಮೋರ್ಚಾದಿಂದ ಯೋಗ ದಿನಾಚರಣೆ

0

 

ನೆಲ್ಯಾಡಿ: ಭಾರತೀಯ ಜನತಾ ಪಾರ್ಟಿ ಸುಳ್ಯ ಮಂಡಲ ಮಹಿಳಾ ಮೋರ್ಚಾ ವತಿಯಿಂದ ಹಳೆನೇರೆಂಕಿ ಶ್ರೀ ಸಿದ್ಧವಿನಾಯಕ ಭಜನಾಮಂದಿರದಲ್ಲಿ ಯೋಗ ದಿನಾಚರಣೆ ನಡೆಯಿತು.

ಯೋಗ ಶಿಕ್ಷಕಿ ಶಾಂತ ಮಹಾಲಿಂಗೇಶ್ವರ ಭಟ್ ಪರಕ್ಕಾಲು ಅವರು ಯೋಗಾಭ್ಯಾಸ ನಡೆಸಿಕೊಟ್ಟರು. ನಂತರ ಮಹಿಳಾ ಮೋರ್ಚಾದ ವತಿಯಿಂದ ಯೋಗ ಶಿಕ್ಷಕಿ ಶಾಂತ ಮಹಾಲಿಂಗೇಶ್ವರ ಭಟ್ ಅವರನ್ನು ಗೌರವಿಸಲಾಯಿತು. ಬಿಜೆಪಿ ಸುಳ್ಯ ಮಂಡಲ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿ ತೇಜಸ್ವಿನಿಶೇಖರ ಗೌಡ ಕಟ್ಟಪುಣಿ, ಗೋಳಿತ್ತೊಟ್ಟು ಗ್ರಾ.ಪಂ.ಉಪಾಧ್ಯಕ್ಷೆ ಶೋಭಾಲತಾ, ಸದಸ್ಯರಾದ ಸವಿತಾ ಆಲಂತಾಯ, ಹಳೆನೇರೆಂಕಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ ಪುಷ್ಪಾವತಿ ಬರೆಂಬೆಟ್ಟು, ಕಾರ್ಯದರ್ಶಿ ಶೀಲಾವತಿ, ಹಾಲು ಪರೀಕ್ಷಕಿ ಯೋಗಿನಿ, ಗೀತಾ ಮರಂಕಾಡಿ, ಹರಿಣಾಕ್ಷಿ ಬರೆಂಬೆಟ್ಟು, ಪ್ರುಪುಲ್ಲಾ ಬರೆಂಬೆಟ್ಟು, ಕುಸುಮಾವತಿ, ಸುಮಿತ್ರಾ ಪಾಲೆತ್ತಡ್ಡ, ಶಶಿಕಲಾ ಎರಟಾಡಿ, ಶ್ರಮಾ ಬರೆಂಬೆಟ್ಟು ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here