ಕೊಂಬೆಟ್ಟು ಶ್ರೀ ಮಹಾಲಿಂಗೇಶ್ವರ ಐಟಿಐಯ 20 ಮಂದಿ ತರಬೇತಿದಾರರು ಕ್ಯಾಂಪಸ್ ಆಯ್ಕೆ

0

 

ಪುತ್ತೂರು: ಕೊಂಬೆಟ್ಟು ಶ್ರೀ ಮಹಾಲಿಂಗೇಶ್ವರ ಐಟಿಐಯ 20ಮಂದಿ ತರಬೇತಿದಾರರು ವಿವಿಧ ಕಂಪೆನಿಗಳ ಸಂದರ್ಶನದಲ್ಲಿ ಆಯ್ಕೆಗೊಂಡಿದ್ದಾರೆ.
ಟೊಯೊಟೊ ಕಿರ್ಲೊಸ್ಕರ್ ಟೆಕ್ಸ್‌ಟೈಲ್ಸ್ ಮೆಷಿನರಿ ಬೆಂಗಳೂರು, ಸೆಂಟ್ರಮ್ ಪ್ರೈ.ಲಿ. ಬೆಂಗಳೂರು, ಸೆಸ್‌ಮೋಸ್ ಪ್ರೈ.ಲಿ ಬೆಂಗಳೂರು, ವಾಷ್‌ಟೆಕ್ ಪ್ರೈ.ಲಿ.ಬೆಂಗಳೂರು, ಎಂ.ಎಫ್.ಎ.ಆರ್ ಕನ್‌ಸ್ಟ್ರಕ್ಷನ್ಸ್ ಬೆಂಗಳೂರು, ಧರ್ಮರಾಜ್ ಎಸೋಸಿಯೇಟ್ಸ್ ಮಂಗಳೂರು ಅವರು ನಡೆಸಿದ ಕ್ಯಾಂಪಸ್ ಸಂದರ್ಶನದಲ್ಲಿ ಮತ್ತು ಕ್ಯಾಂಪ್ಕೋ ಪುತ್ತೂರು ಸಂದರ್ಶನದಲ್ಲಿ ಶ್ರೀ ಮಹಾಲಿಂಗೇಶ್ವರ ಕೈಗಾರಿಕಾ ತರಬೇತಿ ಸಂಸ್ಥೆಯ ಡ್ರಾಫ್ಟ್‌ಮೆನ್ ಸಿವಿಲ್ ವಿಭಾಗದ 6 ಮಂದಿ, ಇಲೆಕ್ಟ್ರಾನಿಕ್ಸ್ ಮೆಕ್ಯಾನಿಕ್ ವಿಭಾಗದಿಂದ 9 ಮಂದಿ, ಇಲೆಕ್ಟ್ರೀಷಿಯನ್ ವಿಭಾಗದಿಂದ 5 ಮಂದಿ ತರಬೇತಿದಾರು ಆಯ್ಕೆಗೊಂಡಿದ್ದಾರೆ ಎಂದು ಸಂಸ್ಥೆಯ ಸಂಚಾಲಕ ಯು.ಪಿ.ರಾಮಕೃಷ್ಣ ಹಾಗೂ ಪ್ರಾಂಶುಪಾಲ ಪ್ರಕಾಶ್ ಪೈ ತಿಳಿಸಿದ್ದಾರೆ. ಸುಲೈಮಾನ್ ಪಾರಿಸ್ ಪಿ, ಮನೋಜ್ ಕೆ, ಮಧುಶ್ರೀ ಕೆ.ಎಸ್, ಕಾರ್ತಿಕ್ ಎಸ್, ವಿನಯ ಎಸ್.ಆರ್, ಚೇತನ್ ಕುಮಾರ್ ಎನ್, ಸಂಜಯ್ ಕುಮಾರ್, ಉಮೇಶ್ ಪಿ, ದಿನೇಶ್ ಸಿ.ಜೆ, ಭವಿತ್, ಯುವರಾಜ್ ಗೌಡ, ಜಗದೀಶ್ ಕಿಶೋರ್ ಎ, ಧನುಷ್, ಗಗನ್, ವಿನಯ ಕುಮಾರ್ ಎಮ್.ಆರ್, ಸುಜಿತ್ ಎ, ಶ್ರೀಮಂಜುನಾಥ್, ಪವನ್ ಜಿ.ಎಸ್, ಜೀವಂತ್ ಅವರು ಕ್ಯಾಂಪಸ್‌ಗೆ ಆಯ್ಕೆಗೊಂಡವರು.

LEAVE A REPLY

Please enter your comment!
Please enter your name here