ಪುತ್ತೂರು : ಪ್ರಗತಿ ಪಾರಾ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು ಮಂಗಳೂರು ದೇರಳಕಟ್ಟೆಯಲ್ಲಿರುವ ಕಣಚೂರ್ ಮೆಡಿಕಲ್ ಕಾಲೇಜಿನ ಹಿಸ್ಟೋಪತೋಲಜಿ ಪ್ರಯೋಗಾಲಯಕ್ಕೆ ಜೂನ್ 23ರಂದು ಭೇಟಿ ನೀಡಿದರು. ಪ್ರಯೋಗಾಲಯದ ಕಾರ್ಯಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆದರು. ಈ ಸಂದರ್ಭದಲ್ಲಿ ಪ್ರಗತಿ ಪಾರಾ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲೆ ಪ್ರೀತಾ ಹೆಗ್ಡೆ ಹಾಗೂ ಉಪನ್ಯಾಸಕಿ ರೇಶ್ಮಾ ಉಪಸ್ಥಿತರಿದ್ದರು.