ವಿಟ್ಲ: ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಲಾರಿ ಪಲ್ಟಿ

0

ವಿಟ್ಲ: ರಸ್ತೆ ಬದಿ ನಿಲ್ಲಿಸಿದ್ದ ಕಲ್ಲು ಸಾಗಾಟ ಲಾರಿಯೊಂದು ಮಗುಚಿ ಬಿದ್ದ ಘಟನೆ ವಿಟ್ಲ – ಕಾಸರಗೋಡು ರಸ್ತೆಯ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಬಳಿ ನಡೆದಿದೆ.

ಕಲ್ಲು ತುಂಬಿದ್ದ ಲಾರಿಯನ್ನು ರಸ್ತೆಯ ಬದಿ ನಿಲ್ಲಿಸಿ ಚಾಲಕ ಚಹಾ ಕುಡಿಯಲು ತೆರಳಿದ ವೇಳೆ ಈ ಘಟನೆ ನಡೆದಿದೆ. ಅಪಘಾತದಿಂದಾಗಿ ಯಾವುದೇ ಅಪಾಯ ಸಂಭವಿಸಿಲ್ಲ ಮಳೆಗಾಲವಾದ ಹಿನ್ನೆಲೆಯಲ್ಲಿ ರಸ್ತೆಬದಿಯ ಮಣ್ಣು ಸಡಿಲಗೊಂಡಿದ್ದು, ಇದೇ ಜಾಗದಲ್ಲಿ ಕಲ್ಲು ತುಂಬಿದ ಲಾರಿ ನಿಂತ ಹಿನ್ನೆಲೆಯಲ್ಲಿ ಮಣ್ಣು ಕುಸಿದಿದ್ದು, ಲಾರಿ ಮಗುಚಿ ಬಿದ್ದಿದೆ ಎನ್ನಲಾಗಿದೆ‌.

LEAVE A REPLY

Please enter your comment!
Please enter your name here