ಉಪ್ಪಿನಂಗಡಿ: ಜೇಸಿಐ ಕೆಸರ್‌ದ ಪರ್ಬ-ಉಪ್ಪಿನಂಗಡಿ ಘಟಕಕ್ಕೆ ಸಮಗ್ರ ಪ್ರಶಸ್ತಿ

0

ಪುತ್ತೂರು : ಜೇಸಿಐ ವಲಯ 15ರ ಕೆಸರ್‌ದ ಪರ್ಬ ಕಾರ್ಯಕ್ರಮ ಬೆಳ್ಳಾರೆ ಜೇಸಿ ಘಟಕದ ನೇತೃತ್ವದಲ್ಲಿ ನಡೆಯಿತು. ವಲಯ 15ರ ಅಧ್ಯಕ್ಷ ಜೇಸಿ ಸೇನೆಟರ್ ರೋಯನ್ ಉದಯ ಕ್ರಾಸ್ತಾ ಕಾರ್ಯಕ್ರಮ ಉದ್ಘಾಟಿಸಿದರು. ತುಳು ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್‌ಸಾರ್ ದಿಕ್ಸೂಚಿ ಭಾಷಣ ಮಾಡಿದರು. ವಲಯ ಕ್ರೀಡಾ ಸಂಯೋಜಕ ಜೇಸಿ ಸಂತೋಷ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ವಲಯ ಉಪಾಧ್ಯಕ್ಷ ಜೇಸಿ ಪ್ರಶಾಂತ್, ಬೆಳ್ಳಾರೆ ಘಟಕದ ಅಧ್ಯಕ್ಷೆ ಜೇಸಿ ನಿರ್ಮಲಾ ಜಯಾರಾಮ್, ಕಾರ್ಯಕ್ರಮದ ರಾಯಭಾರಿ ಜೇಸಿ ಅಕ್ಷತಾ ಗಿರೀಶ್ ಹಾಗೂ ವಲಯ ಮತ್ತು ಬೆಳ್ಳಾರೆಯ ಇತರ ಪ್ರಮುಖರು ವೇದಿಕೆಯಲ್ಲಿ ಉಪಸ್ಥಿತರಿದ್ದರು.


ವಿವಿಧ ಜಾನಪದ ಕ್ರೀಡಾಕೂಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಈ ಸ್ಪರ್ಧೆಗಳಲ್ಲಿ ಸಮಗ್ರ ಪ್ರಶಸ್ತಿ ಉಪ್ಪಿನಂಗಡಿ ಘಟಕ ಒಂದು ಮುಡಿ ಅಕ್ಕಿಯೊಂದಿಗೆ ಪಡೆಯಿತು. 400ರಷ್ಟು ವಲಯದ ವಿವಿಧ ಘಟಕಗಳಿಂದ ಜೇಸಿ ಸದಸ್ಯರು ನೋಂದಾಯಿಸಿ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. ಉಪ್ಪಿನಂಗಡಿ ಘಟಕ ಅಧ್ಯಕ್ಷ ಜೇಸಿ ಮೋಹನ್ ಚಂದ್ರ ತೋಟದಮನೆ ನೇತೃತ್ವವನ್ನು ವಹಿಸಿದ್ದರು. ಪೂರ್ವಾಧ್ಯಕ್ಷ ಜೇಸಿ ಮೋನಪ್ಪ ಪಮ್ಮನ ಮಜಲು ಮತ್ತು ಜೇಸಿ ಶಶಿಧರ್ ನೆಕ್ಕಿಲಾಡಿ ಮಾರ್ಗದರ್ಶನ ಮಾಡಿದರು. ಜೇಸಿ ದಿವಾಕರ ಶಾಂತಿನಗರ, ಜೇಸಿ ಮಹೇಶ್ ಖಂಡಿಗ, ಜೆಜೆಸಿ ಮನೀಶ್, ಜೆಜೆಸಿ ಪವನ್, ಜೆಜೆಸಿ ಭರತ್, ಜೆಜೆಸಿ ವೀಕ್ಷಿತಾ, ಜೆಜೆಸಿ ಪವಿತ್ರ ಮತ್ತು ಇತರ ಜೇಸಿಐ ಸದಸ್ಯರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here