ಜಿಲ್ಲಾ ಜೆಡಿಎಸ್ ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷರಾಗಿ ಪ್ರಭಾಕರ ಸಾಲಿಯಾನ್ ನೇಮಕ

0

ಪುತ್ತೂರು: ಜಾತ್ಯಾತೀತ ಜನತಾದಳದ ದಕ್ಷಿಣ ಕನ್ನಡ ಜಿಲ್ಲಾ ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷರಾಗಿ ಪ್ರಭಾಕರ ಸಾಲಿಯಾನ್ ನೇಮಕಗೊಂಡಿದ್ದಾರೆ. ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂರವರ ಆದೇಶದ ಮೇರೆಗೆ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಜಾಕೆ ಮಾಧವ ಗೌಡ ಈ ನೇಮಕ ಮಾಡಿದ್ದಾರೆ.


ಪ್ರಸ್ತುತ ಕೋಡಿಂಬಾಡಿಯ ಕೈಪದಲ್ಲಿ ವಾಸವಿರುವ ಪ್ರಭಾಕರ ಸಾಲಿಯಾನ್ ಅವರು ಪುತ್ತೂರು ಯುವವಾಹಿನಿ ಘಟಕದ ಅಧ್ಯಕ್ಷರಾಗಿ, ಪುತ್ತೂರು ಗ್ರಾಮಾಂತರ ಬಿಲ್ಲವ ಸಂಘದ ಸಂಚಾಲಕರಾಗಿ, ನರಿಮೊಗರು ಕರೆಮನೆ ಕಟ್ಟೆಯ ನಿತ್ಯೋದಯ ಯುವಕ‌ ಮಂಡಲದ ಸ್ಥಾಪಾಕಾಧ್ಯಕ್ಷರಾಗಿ, ತಾಲೂಕು ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ, ವೀರಮಂಗಲ ಹಿ.ಪ್ರಾ.ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ, ಯುವವಾಹಿನಿ ಕೇಂದ್ರ ಸಮಿತಿಯ ನಿರ್ದೇಶಕರಾಗಿ, ಜೆಡಿಎಸ್ ಪುತ್ತೂರು ನಗರಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು.

LEAVE A REPLY

Please enter your comment!
Please enter your name here