ಹಿಂದೂ ಮುಖಂಡ ಅಕ್ಷಯ್‌ ರಜಪೂತ್‌ ಗಡಿಪಾರಿಗೆ ತಡೆ

0

ಪುತ್ತೂರು: ಹಿಂದೂ ಜಾಗರಣ ವೇದಿಕೆ ವಿಟ್ಲ ತಾಲೂಕು ಸಮಿತಿ ಸದಸ್ಯ ಅಕ್ಷಯ್ ರಜಪೂತ್ ಗಡಿಪಾರಿಗೆ ಹೈಕೋರ್ಟ್ ತಡೆ ನೀಡಿ ಆದೇಶಿಸಿದೆ.ಚುನಾವಣೆಯ ಒಂದು ದಿನ ಮುಂಚಿತವಾಗಿ ನಡುರಾತ್ರಿ ಅಕ್ಷಯ್‌ ರಜಪೂತ್‌ ಅವರ ಮನೆಗೆ ವಿಟ್ಲ ಪೋಲಿಸರು ಧಾವಿಸಿ ಬಂಧಿಸಿ ಹಾವೇರಿ ಜಿಲ್ಲೆಗೆ ಗಡಿಪಾರು ಮಾಡಿದ್ದರು.

ಆದರೆ‌ ಅದನ್ನು ಪ್ರಶ್ನಿಸಿ ಹೈಕೋರ್ಟ್‌ ಮೊರೆ ಹೋಗಲಾಗಿ ಗಡಿಪಾರಿಗೆ ತಡೆ ತರಲಾಗಿದೆ. ಈ ಪ್ರಕರಣದಲ್ಲಿ ಅಕ್ಷಯ್‌ ರಜಪೂತರ ಪರವಾಗಿ ಹಿರಿಯ ವಕೀಲ ಅರುಣ್ ಶ್ಯಾಮ್ ಹೈಕೋರ್ಟ್ ನಿಂದ ತಡೆ ತರುವಲ್ಲಿ ಯಶಸ್ವಿಯಾಗಿದ್ದಾರೆ.ವಕೀಲರಾದ ಪ್ರಾಂತ ನ್ಯಾಯ ಜಾಗರಣ ಕಿಶೋರ್ ಕುಮಾರ್ ಮಂಗಳೂರು, ಜಿಲ್ಲಾ ನ್ಯಾಯ ಜಾಗರಣದ ರಾಜೇಶ್ ಬೊಲ್ಲುಕಲ್ಲು ಸಹಕರಿಸಿದ್ದಾರೆ.

LEAVE A REPLY

Please enter your comment!
Please enter your name here