ಪುತ್ತೂರು ವಿಧಾನಸಭಾ ಕ್ಷೇತ್ರದ ಆಮ್ ಆದ್ಮಿ ಅಧ್ಯಕ್ಷರಾಗಿ ಡಾ| ವಿಶು ಕುಮಾರ್, ಪ್ರಧಾನ ಕಾರ್ಯದರ್ಶಿಯಾಗಿ ಪುರುಷೋತ್ತಮ್ ಕೋಲ್ಪೆ

0

ಪುತ್ತೂರು: ಆಮ್ ಅದ್ಮಿ ಪಕ್ಷದ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿಗೆ ಪದಾಧಿಕಾರಿಗಳ ಆಯ್ಕೆ ನಡೆದಿದ್ದು ಅಧ್ಯಕ್ಷರಾಗಿ ಡಾ| ವಿಶು ಕುಮಾರ್, ಪ್ರಧಾನ ಕಾರ್ಯದರ್ಶಿಯಾಗಿ ಪುರುಷೋತ್ತಮ್ ಕೋಲ್ಪೆ ಆಯ್ಕೆಯಾಗಿದ್ದಾರೆ.


ಪುತ್ತೂರಿನ ಫಿಲೋಮಿನಾ ಕಾಲೇಜಿನಲ್ಲಿ ಪಿಯುಸಿ, ಪದವಿ ಶಿಕ್ಷಣ ಪೂರೈಸಿದ ಡಾ| ವಿಶು ಕುಮಾರ್ ರವರು ಎಂಎಸ್ಸಿ, ಪಿಎಚ್‌ಡಿ ಪದವೀಧರರಾಗಿದ್ದಾರೆ. ಕೃಷಿ ವಿಜ್ಞಾನಿಯಾಗಿ 14 ಬಗೆಯ ಪೌಷ್ಟಿಕಾಂಶಗಳನ್ನು ನೀಡಿ ಅಡಿಕೆ ಕೃಷಿಯಲ್ಲಿ ಉತ್ತಮ ಫಲ ತೆಗೆಯುವ ಬಗ್ಗೆ ಅನೇಕ ಕಾರ್ಯಗಾರ ನಡೆಸಿಕೊಟ್ಟಿದ್ದಾರೆ. ಇವರು ಮೂಲತಹ ಪಂಜ ಚೇರ್‍ಯ ನಿವಾಸಿ.

ಪುರುಷೋತ್ತಮ ಕೋಲ್ಪೆಯವರು ಕಳೆದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಇಡ್ಕಿದು ಗ್ರಾ.ಪಂ.ನಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದಿದ್ದಾರೆ. ವಿಹಿಂಪ ಸುವರ್ಣ ಮಹೋತ್ಸವ ಸಮಿತಿ ಪದಾಧಿಕಾರಿಯಾಗಿ, ಆರ್‌ಎಸ್‌ಎಸ್ ಇಡ್ಕಿದು ಮಂಡಲ ಶಾರೀರಿಕ್ ಪ್ರಮುಖ್, ಪುತ್ತೂರು ತಾಲೂಕು ಗ್ಯಾರೇಜ್ ಅಸೋಸಿಯೇಶನ್ ಕಾರ್ಯದರ್ಶಿಯಾಗಿ ಗೌಡ ಸಂಘ ಇಡ್ಕಿದು ಅಧ್ಯಕ್ಷರಾಗಿ ಸೇವೆಸಲ್ಲಿಸಿದ್ದು ಪ್ರಸ್ತುತ ರಾಜ್ಯ ಮಟ್ಟದ ಕಬಡ್ಡಿ ರೆಫ್ರಿ ಬೋರ್ಡ್ ಸದಸ್ಯರಾಗಿ ಕಾರ್ಯನಿರ್ವಹಿಸುತಿದ್ದಾರೆ. ಇಲ್ಲಿನ ಅಶ್ವಿನಿ ಹೊಟೇಲ್ ಸಭಾಂಗಣದಲ್ಲಿ ನಡೆದ ಪಕ್ಷದ ಸಭೆಯಲ್ಲಿ ಈ ಆಯ್ಕೆ ನಡೆಸಲಾಯಿತು. ಸಭೆಯಲ್ಲಿ ಪಕ್ಷದ ಪ್ರಮುಖರು, ವಿವಿಧ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here