ಪುತ್ತೂರು; ಸುಳ್ಯ ತಾಲೂಕಿನ ಬೆಳ್ಳಾರೆಯ ಅಕ್ಷಯ ಚಿಕನ್ ಸೆಂಟರ್ ಮುಂಭಾಗದಲ್ಲಿ ಜುಲೈ 26ರಂದು ರಾತ್ರಿ 8.30ರ ವೇಳೆಗೆ ಬಿಜೆಪಿ ಯುವ ನಾಯಕ ಪ್ರವೀಣ್ ನೆಟ್ಟಾರುರವರನ್ನು ಕೊಲೆ ಮಾಡಿರುವ ಹಂತಕರ ಶೋಧ ಕಾರ್ಯಾಚರಣೆ ಮುಂದುವರಿದಿದೆ. ಹಂತಕರಿಗೆ ಸಹಕಾರ ನೀಡಿರುವ ಆರೋಪದಡಿ ಬಂಧಿತರಾಗಿರುವ ಬೆಳ್ಳಾರೆಯ ಶಫೀಕ್ ಮತ್ತು ಸವಣೂರಿನ ಝಾಕಿರ್ರವರನ್ನು ವೈದ್ಯಕೀಯ ಪರೀಕ್ಷೆ ನಡೆಸಿ ಇದೀಗ ಸುಳ್ಯದಿಂದ ಕರೆ ತರಲಾಗುತ್ತಿದ್ದು ಕೆಲವೇ ಕ್ಷಣದಲ್ಲಿ ಪುತ್ತೂರು ನ್ಯಾಯಾಲಯಕ್ಕೆ ಹಾಜರು ಪಡಿಸುವ ಪ್ರಕ್ರಿಯೆ ನಡೆಯಲಿದೆ. ಪ್ರವೀಣ್ ನೆಟ್ಟಾರುರವರನ್ನು ಕತ್ತಿಯಿಂದ ಕಡಿದು ಭೀಕರವಾಗಿ ಕೊಲೆ ಮಾಡಿದ ಪಾತಕಿಗಳಿಗೆ ಪ್ರವೀಣ್ರವರ ಗುರುತು ಪರಿಚಯ ತಿಳಿಸಿದ ಮತ್ತು ಹಂತಕರು ಕೇರಳಕ್ಕೆ ಪರಾರಿಯಾಗಲು ಸಹಕಾರ ನೀಡಿದ ಆರೋಪದಡಿ ಶಫೀಖ್ ಮತ್ತು ಝಾಕೀರ್ರವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಹೇಳಲಾಗುತ್ತಿದ್ದು ಇನ್ನೂ ಅವರ ಮೇಲೆ ಯಾವ ಆರೋಪ ಇದೆ, ಅವರ ವಿರುದ್ಧ ಯಾವ ಸೆಕ್ಷನ್ನಡಿ ಕೇಸು ದಾಖಲು ಮಾಡಿಕೊಳ್ಳಲಾಗಿದೆ ಎಂಬ ಮಾಹಿತಿ ಲಭ್ಯವಾಗಿಲ್ಲ. ನಿಜವಾದ ಹಂತಕರು ಕೇರಳಕ್ಕೆ ಪರಾರಿಯಾಗಿದ್ದಾರೆ ಎಂದು ಹೇಳಲಾಗುತ್ತಿದ್ದು ಅವರಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಹಂತಕರಿಗೂ ಇದೀಗ ಬಂಧಿತರಾಗಿರುವವರಿಗೂ ನೇರ ಗುರುತು ಪರಿಚಯ ಇಲ್ಲ ಎಂದು ಹೇಳಲಾಗುತ್ತಿದೆ. ಹೆಚ್ಚಿನ ತನಿಖೆಗಾಗಿ ಶಫೀಕ್ ಮತ್ತು ಝಾಕಿರ್ರವರನ್ನು ಪೊಲೀಸ್ ಕಸ್ಟಡಿಗೆ ಪಡೆಯುವ ಸಾಧ್ಯತೆಗಳಿದೆ.
About The Author
Related posts
Leave a Reply
Cancel Reply
Leave a Reply
This site uses Akismet to reduce spam. Learn how your comment data is processed.