`ಸರಕಾರಿ ಕಚೇರಿಗಳಲ್ಲಿ ಪ್ರಿಪೇಯ್ಡ್ ವಿದ್ಯುತ್ ಮೀಟರ್’-ಬಿಲ್ ಬಾಕಿ ವಿಚಾರ-ಗ್ರಾಹಕರಿಗೂ, ಇಲಾಖೆಗೂ ಒಂದೇ ನ್ಯಾಯ

0

ಬೆಂಗಳೂರು:`ಸರ್ಕಾರಿ ಕಚೇರಿಗಳು ವಿದ್ಯುತ್ ಬಿಲ್ ಬಾಕಿ ಇಟ್ಟುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಪ್ರಿಪೇಡ್ ವಿದ್ಯುತ್ ಮೀಟರ್ ಅಳವಡಿಸುವ ಚಿಂತನೆ ನಡೆದಿದೆ’ ಎಂದು ಇಂಧನ ಸಚಿವ ಸುನೀಲ್ ಕುಮಾರ್ ಹೇಳಿದರು.

`ಯಾವ್ಯಾವ ಸರ್ಕಾರಿ ಇಲಾಖೆಯಲ್ಲಿ ವಿದ್ಯುತ್ ಬಿಲ್ ಬಾಕಿಯಿದೆ ಎಂದು ಪರಿಶೀಲಿಸಿ, ಅದನ್ನು ಪಾವತಿಸುವಂತೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತಿದ್ದೇವೆ. ಬಿಲ್ ಪಾವತಿಸದ ದೊಡ್ಡ ನೀರಾವರಿ ಇಲಾಖೆ, ಬಿಬಿಎಂಪಿ ಹಾಗೂ ಗ್ರಾಮ ಪಂಚಾಯ್ತಿಗಳಿಗೆ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಲಾಗಿತ್ತು.ಇದರಿಂದ ಕೆಲವು ಗ್ರಾಮ ಪಂಚಾಯ್ತಿಗಳು ವಾರದವರೆಗೆ ಸಮಸ್ಯೆ ಅನುಭವಿಸಿವೆ. ಗ್ರಾಹಕರಿಗೂ ಸರ್ಕಾರಿ ಇಲಾಖೆಗೂ ಒಂದೇ ನ್ಯಾಯ’ ಎಂದು ಸಚಿವರು ಹೇಳಿದರು.

ಮತ್ತಷ್ಟು ಉಪಕೇಂದ್ರ ಸ್ಥಾಪಿಸಲು ಹೆಸ್ಕಾಂ ವ್ಯಾಪ್ತಿಯಲ್ಲಿ ಬೇಡಿಕೆಗಳು ಬರುತ್ತಿವೆ. ಅವುಗಳನ್ನು ಸಹ ಪ್ರಸ್ತುತ ಬಜೆಟ್‌ನಲ್ಲಿ ತೆಗೆದುಕೊಳ್ಳುವ ಆಲೋಚನೆಯಿದೆ’ ಎಂದು ಹೇಳಿದರು. `ಕರ್ನಾಟಕದಲ್ಲಿ ಸೋಲಾರ್ ರೂಫ್’ಟಾಪ್ ಯೋಜನೆಗೆ ಬೆಸ್ಕಾಂ ಅನ್ನು ನೋಡಲ್ ಅಧಿಕಾರಿಯನ್ನಾಗಿ ಮಾಡಲಾಗಿದೆ. ಅದು ರಾಜ್ಯದಲ್ಲಿ ಎಷ್ಟು ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಬಹುದು ಎಂದು ಸಮೀಕ್ಷೆ ನಡೆಸುತ್ತಿದೆ. ಅದಕ್ಕೆ ಪೂರಕವಾಗಿ 1,108ಕಡೆಗಳಲ್ಲಿ ಇವಿ ಸ್ಟೇಷನ್ ಸ್ಥಾಪಿಸಲು ಯೋಚಿಸಿದ್ದೇವೆ. ಆ ಕುರಿತು ಅಭಿಯಾನ ಸಹ ನಡೆಯುತ್ತಿದೆ’ ಎಂದರು.`ಪೂರ್ವ ನಿಶ್ಚಿತವಾಗಿ ವಿದ್ಯುತ್ ಸ್ಥಗಿತಗೊಳಿಸುವುದಾದರೆ ಸಾರ್ವಜನಿಕರಿಗೆ ಮುಂಚಿತವಾಗಿ ತಿಳಿಸಬೇಕು. ಆ ಕುರಿತು ಎಲ್ಲಿಯಾದರೂ ಲೋಪದೋಷಗಳಾದರೆ.ಯಾವುದೇ ಕಾರಣಕ್ಕೂ ಗ್ರಾಹಕರಿಗೆ ಮತ್ತು ರೈತರಿಗೆ ವಿದ್ಯುತ್ ಪೂರೈಕೆಯಲ್ಲಿ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.

LEAVE A REPLY

Please enter your comment!
Please enter your name here