ಶಾಂತಿಗೋಡು ಪಂಜಿಗದಲ್ಲಿ ಶ್ರೀವಿಷ್ಣು ಒಕ್ಕಲಿಗ ಸ್ವಸಹಾಯ ಸಂಘ ರಚನೆ

0

ಪುತ್ತೂರು: ಶಾಂತಿಗೋಡು ಗ್ರಾಮದ ಪಂಜಿಗ ಎಂಬಲ್ಲಿ ಶ್ರೀವಿಷ್ಣು ಒಕ್ಕಲಿಗ ಸ್ವಸಹಾಯ ಸಂಘ ರಚಿಸಲಾಯಿತು. ಹಿರಿಯರಾದ ಬಾಲಣ್ಣ ಗೌಡ ಪಂಜಿಗರವರು ದೀಪ ಬೆಳಗಿಸಿ ಸಂಘ ಉದ್ಘಾಟಸಿ ಶುಭಹಾರೈಸಿದರು. ಒಕ್ಕಲಿಗ ಸ್ವಸಹಾಯ ಟ್ರಸ್ಟ್ ಮೇಲ್ವಿಚಾರಕ ವಿಜಯ್ ಕುಮಾರ್‌ರವರು ಸದಸ್ಯರಿಗೆ ಮಾಹಿತಿ ನೀಡಿದರು. ರಮೇಶ್ ಕೆಮ್ಮಯಿರವರು ಸಂಘದ ಸಭಾನಡವಳಿಯನ್ನು ಹಸ್ತಾಂತರಿಸಿದರು. ಸಂಘದ ಪ್ರಬಂಧಕರಾಗಿ ವಸಂತ ಗೌಡ ಪಂಜಿಗ, ಸಂಯೋಜಕರಾಗಿ ಲತಾ ಪಿ. ಮತ್ತು ಸದಸ್ಯರಾಗಿ ರೂಪಲತಾ, ಮೀನಾಕ್ಷಿ, ಯಶೋಧಾ, ಜಯಂತಿ, ಹರೀಶ್ ಪಿ. ಗೌಡ, ಸುಂದರ ಪಿ. ಗೌಡ, ಅಶೋಕ್ ಪಿ. ಗೌಡ, ಶೋಭ, ರಾಜೀವಿರವರು ಸೇರ್ಪಡೆಯಾಗಿದ್ದಾರೆ. ಪ್ರೇರಕ ಉದಯ ಕುದ್ಮಾರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here