ಆತೂರು: ಹಲ್ಲೆ ಪ್ರಕರಣ ಓರ್ವನ ಬಂಧನ

0

ಕಡಬ: ಇತ್ತಂಡಗಳ ನಡುವೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ. ನೌಫಲ್(29) ಬಂಧಿತ ಆರೋಪಿ. ಮೊಹಮ್ಮದ್ ನವಾಜ್ ಎಂಬಾತ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದ್ದು, ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ.

ಆ.15 ರಂದು ಸಂಜೆ ವೇಳೆ ಮೊಬೈಲ್ ರಿಚಾರ್ಜ್ ಖಾಲಿಯಾಗಿದ್ದರಿಂದ ಮನೆಯ ಪಕ್ಕದಲ್ಲಿದ್ದ ನೌಫಲ್ ಎಂಬಾತನ ಅಂಗಡಿಗೆ ಹೋಗಿ ಫೋನ್ ಫೇ ಮೂಲಕ 50 ರೂ. ರಿಚಾರ್ಜ್ ಮಾಡಲು ಹೇಳಿದ್ದು, ಅಂಗಡಿಯಲ್ಲಿದ್ದ ನೌಫಲ್ ಅಂಗಡಿಯಲ್ಲಿ ಕೆಲಸ ಮಾಡುವ ಹಿಂದಿ ಮಾತನಾಡುವ ಕೆಲಸಗಾರರು ಫೋನ್ ಫೇ ಇಲ್ಲ ಎಂದು ತಿಳಿಸಿದ್ದು, ಬಳಿಕ ಆತೂರು ಮಸೀದಿ ಬಳಿಯ ಶಾಪ್ ನಲ್ಲಿ ರಿಚಾರ್ಜ್ ಮಾಡಿಸಿದ್ದು, ನಂತರ ಸಂಜೆ ನವಾಜ್ ನ ಸಹೋದರ ಕರೆ ನೀನು ಯಾಕೇ ನೌಫಲ್ ನ ಅಂಗಡಿಗೆ ರಿಚಾರ್ಜ್ ಮಾಡಲು ಹೋಗಿದ್ದು, ಆತ ನನಗೆ ಕರೆ ಮಾಡಿ ಅವಾಚ್ಯವಾಗಿ ಬೈಯುತ್ತಿದ್ದಾನೆ ಎಂದು ಹೇಳಿದ್ದು, ಈ ವೇಳೆ ನವಾಜ್ ನೌಫಲ್ ಗೆ ಕರೆ ಮಾಡಿ ನೀನು ಯಾಕೇ ಸಹೋದರನಿಗೆ ಬೈದದ್ದು ಎಂದು ಕೇಳಿದಾಗ ನೀನು ಅಂಗಡಿ ಹತ್ತಿರ ಬಾ ಮಾತನಾಡಲು ಇದೆ ಎಂದು ಹೇಳಿ ಕರೆಸಿಕೊಂಡಿದ್ದು, 6 ತಿಂಗಳ ಹಿಂದೆ ಉಪ್ಪಿನಂಗಡಿಯಲ್ಲಿ ಮೀನು ವ್ಯಾಪಾರಕ್ಕೆ ಸಂಬಂದಿಸಿದ ಗಲಾಟೆಗೆ ಸಂಬಂದಿಸಿದಂತೆ ನನ್ನ ತಮ್ಮ ಸಿನಾನ್ ಬಗ್ಗೆ ನೀನು ಯಾಕೇ ಉಪ್ಪಿನಂಗಡಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಎಂದು ಹೇಳಿ ಅವಾಚ್ಯ ಶಬ್ಧಗಳಿಂದ ಬೈದಿದ್ದು, ಶರ್ಟ್ ಕಾಲರ್ ಹಿಡಿದು ಗಲಾಟೆ ಮಾಡಿ ನಂತರ ಅಂಗಡಿಯಲ್ಲಿಯೇ ಇದ್ದ ಚಾಕುವಿನಿಂದ ಹೊಟ್ಟೆಗೆ ಚುಚ್ಚಿದ್ದಾಗಿ ದೂರಿನಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಅಕ್ರ ನಂಬ್ರ: 69/2022 ಕಲಂ : 504,323,326,506 ಐಪಿಸಿಯಂತೆ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ.

ಆತೂರು: ಕ್ಷುಲಕ ವಿಚಾರಕ್ಕೆ ಹಲ್ಲೆ : ಇಬ್ಬರು ಪುತ್ತೂರು ಆಸ್ಪತ್ರೆಗೆ ದಾಖಲು

LEAVE A REPLY

Please enter your comment!
Please enter your name here