ಸರ್ವೆ ಷಣ್ಮುಖ ಯುವಕ ಮಂಡಲ, ಗೌರಿ ಮಹಿಳಾ ಮಂಡಲದಿಂದ 21ನೇ ವರ್ಷದ ಮೊಸರು ಕುಡಿಕೆ ಉತ್ಸವ-ಸ್ಪರ್ಧಾ ಕಾರ್ಯಕ್ರಮ

0

ಧಾರ್ಮಿಕ ಹಬ್ಬಗಳ ಪೈಕಿ ಶ್ರೀಕೃಷ್ಣ ಜನ್ಮಾಷ್ಠಮಿ ಉನ್ನತ ಸ್ಥಾನ ಹೊಂದಿದೆ-ಪುಷ್ಪಾ ಎನ್

[box type=”info” bg=”#” color=”#” border=”#” radius=”13″]ಜಾನಪದ ಕಲಾವೈಭವ-ಶ್ರೀಕೃಷ್ಣ ಸಂಧಾನ: ರಮೇಶ್ ಮೆಟ್ಟಿನಡ್ಕ ಸುಳ್ಯ ನಿರ್ದೇಶನದಲ್ಲಿ ಶ್ರೀನಂದನ ಕಲಾ ಕುಟುಂಬ ಮೆಟ್ಟಿನಡ್ಕ ಸುಳ್ಯ ಪ್ರಸ್ತುತಪಡಿಸಿದ ‘ಜಾನಪದ ಕಲಾ ವೈಭವ’ ನಡೆಯಿತು. ನಂತರ ತಾರನಾಥ ಸವಣೂರು ಸಂಯೋಜನೆಯಲ್ಲಿ ಶ್ರವಣರಂಗ ಪ್ರತಿಷ್ಠಾನ ಸವಣೂರು ಸಾದರಪಡಿಸಿದ ಯಕ್ಷಗಾನ ತಾಳಮದ್ದಳೆ ‘ಶ್ರೀಕೃಷ್ಣ ಸಂಧಾನ’ ನಡೆಯಿತು.[/box]

ಪುತ್ತೂರು: ಶ್ರೀಕೃಷ್ಣ ಜನ್ಮಾಷ್ಠಮಿಯು ಧಾರ್ಮಿಕ ಹಬ್ಬಗಳ ಪೈಕಿ ಉನ್ನತ ಶ್ರೇಣಿಯನ್ನು ಹೊಂದಿದ್ದು ಶ್ರೀಕೃಷ್ಣ ಜನ್ಮಾಷ್ಠಮಿ ಆಚರಣೆ ಮೂಲಕ ಶ್ರೀ ಕೃಷ್ಣನ ಮಹಿಮೆಯನ್ನು ಇಡೀ ಜಗತ್ತಿಗೆ ಸಾರುವ ಕಾರ್ಯ ಆಗುತ್ತಿದೆ. ಷಣ್ಮುಖ ಯುವಕ ಮಂಡಲ, ಗೌರಿ ಮಹಿಳಾ ಮಂಡಲ ಮೂಲಕ ಪ್ರತೀವರ್ಷ ಶ್ರೀ ಕೃಷ್ಣ ಜನ್ಮಾಷ್ಠಮಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿರುವುದು ಸಂತೋಷದ ವಿಚಾರ ಎಂದು ಮುಂಡೂರು ಗ್ರಾ.ಪಂ ಅಧ್ಯಕ್ಷೆ ಪುಷ್ಪಾ ಎನ್ ಹೇಳಿದರು.

ರಾಜ್ಯಪ್ರಶಸ್ತಿ ಪುರಸ್ಕೃತ ಶ್ರೀ ಷಣ್ಮುಖ ಯುವಕ ಮಂಡಲ ಸರ್ವೆ, ಶ್ರೀ ಗೌರಿ ಮಹಿಳಾ ಮಂಡಲ ಸರ್ವೆ ಇದರ ಆಶ್ರಯದಲ್ಲಿ ಭಕ್ತಕೋಡಿ ಶ್ರೀರಾಮ ಭಜನಾ ಮಂದಿರದ ವಠಾರದಲ್ಲಿ ಆ.18ರಂದು ನಡೆದ 21ನೇ ವರ್ಷದ ಮೊಸರು ಕುಡಿಕೆ ಉತ್ಸವದ ಸಭಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕಲ್ಲಮ ಶ್ರೀ ಗುರುರಾಘವೇಂದ್ರ ಮಠದ ವ್ಯವಸ್ಥಾಪಕರಾದ ಸೀತಾರಾಮ ಭಟ್ ಕಲ್ಲಮರವರು ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆಯ ಹಿನ್ನೆಲೆ, ಇತಿಹಾಸಗಳನ್ನು ವಿವರಿಸಿ ಷಣ್ಮುಖ ಯುವಕ ಮಂಡಲವು ಈ ಭಾಗದಲ್ಲಿ ಅತ್ಯುತ್ತಮ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಸರ್ವರ ಪ್ರೀತಿ ಸಂಪಾದಿಸಿದೆ ಎಂದು ಹೇಳಿದರು.

ಸರ್ವೆ ಎಸ್‌ಜಿಎಂ ಪ್ರೌಢ ಶಾಲೆಯ ಮುಖ್ಯ ಶಿಕ್ಷಕಿ ಜಯಶ್ರೀ ಮಾತನಾಡಿ ಸಾಮರಸ್ಯದ ಜೀವನ ನಮ್ಮದಾಗಬೇಕು. ಪೋಷಕರು ತಮ್ಮ ಮಕ್ಕಳಿಗೆ ಭಗವದ್ಗೀತೆಯ ಅರ್ಥವನ್ನು ಕಲಿಸಿಕೊಡಬೇಕು ಅದರಿಂದ ಬದುಕುವ ರೀತಿ ತಿಳಿದುಕೊಳ್ಳಬಹುದು ಎಂದು ಹೇಳಿದರು.

ಭಕ್ತಕೋಡಿ ಶ್ರೀರಾಮ ಭಜನಾ ಮಂದಿರದ ಅಧ್ಯಕ್ಷ ಸುಬ್ರಹ್ಮಣ್ಯ ಕರುಂಬಾರು ಮಾತನಾಡಿ ಊರಿನ ಜನರು ಸಾಂಸ್ಕೃತಿಕ ಚಟುವಟಿಕೆಯಿಂದ ವಂಚಿತವಾಗಬಾರದು ಎನ್ನುವ ಕಾರಣಕ್ಕೆ 21ವರ್ಷದ ಮೊದಲು ಪ್ರಾರಂಭಿಸಿದ ಮೊಸರು ಕುಡಿಕೆ ಉತ್ಸವ ಎಲ್ಲರ ಸಹಕಾರದಿಂದ ಇಂದಿಗೂ ನಡೆಯುತ್ತಾ ಬಂದಿರುವುದು ನಮಗೆಲ್ಲಾ ಹೆಮ್ಮೆಯ ವಿಷಯ ಎಂದು ಹೇಳಿದರು.

ಷಣ್ಮುಖ ಯುವಕ ಮಂಡಲದ ಗೌರವ ಸಲಹೆಗಾರರಾದ ವೀರಪ್ಪ ಗೌಡ ಕರುಂಬಾರು ಮಾತನಾಡಿ ಯುವಕರು ಸೇರಿಕೊಂಡು ಒಗ್ಗಟ್ಟಾಗಿ ಉತ್ತಮ ಕಾರ್ಯಕ್ರಮ ಆಯೋಜಿಸುತ್ತಾ ಬಂದಿದ್ದು ಇದು ಮುಂದಕ್ಕೂ ಸಾಂಗವಾಗಿ ನಡೆಯುತ್ತಿರಲಿ ಎಂದು ಶುಭ ಹಾರೈಸಿದರು.

ಇನ್ನೋರ್ವ ಗೌರವ ಸಲಹೆಗಾರ ಜಿ.ಕೆ ಪ್ರಸನ್ನ ಕಲ್ಲಗುಡ್ಡೆ ಮಾತನಾಡಿ ನಿರಂತರ ಒಂದಿಲ್ಲೊಂದು ಕಾರ್ಯಕ್ರಮಗಳ ಮೂಲಕ ಗುರುತಿಸಿಕೊಂಡಿರುವ ಷಣ್ಮುಖ ಯುವಕ ಮಂಡಲವು ರಾಜ್ಯ ಪ್ರಶಸ್ತಿ ಪಡೆದಿರುವುದು ನಮಗೆ ಹೆಮ್ಮೆ ತಂದಿದೆ. ಇವರಿಗೆ ನಾವೆಲ್ಲಾ ಸಹಕಾರ ನೀಡಬೇಕು ಎಂದು ಹೇಳಿದರು.

ಇನ್ನೋರ್ವ ಗೌರವ ಸಲಹೆಗಾರ ಶ್ರೀನಿವಾಸ್ ಎಚ್.ಬಿ ಮಾತನಾಡಿ ಷಣ್ಮುಖ ಯುವಕ ಮಂಡಲವು ಗ್ರಾಮದ ರಕ್ಷಾ ಕವಚವಾಗಿ ಕೆಲಸ ಮಾಡುತ್ತಿದ್ದು ಇವರನ್ನು ನಾವು ಬೆಂಬಲಿಸಬೇಕು ಎಂದು ಹೇಳಿದರು.

ಇನ್ನೋರ್ವ ಗೌರವ ಸಲಹೆಗಾರ ಶಶಿಧರ್ ಎಸ್.ಡಿ, ಸರ್ವೆ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರಸಾದ್ ರೈ ಸೊರಕೆ, ಭಕ್ತಕೋಡಿ ಸ.ಹಿ.ಪ್ರಾ.ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ವಸಂತ ಪೂಜಾರಿ ಕೈಪಂಗಳದೋಳ, ಗೌರಿ ಮಹಿಳಾ ಮಂಡಲದ ಅಧ್ಯಕ್ಷೆ ಮೋಹಿನಿ ಭಕ್ತಕೋಡಿ ಮೊದಲಾದವರು ಮಾತನಾಡಿ ಶುಭ ಹಾರೈಸಿದರು.

ಅಧ್ಯಕ್ಷತೆ ವಹಿಸಿದ್ದ ಷಣ್ಮುಖ ಯುವಕ ಮಂಡಲದ ಗೌರವಾಧ್ಯಕ್ಷ ವಸಂತ ಎಸ್.ಡಿ ಮಾತನಾಡಿ ಶ್ರೀಕೃಷ್ಣ ಪರಮಾತ್ಮ ಜೀವನ ವಿಧಾನವನ್ನು ತೋರಿಸಿಕೊಟ್ಟಿದ್ದು ಆ ಕಾರಣಕ್ಕಾಗಿ ಹಬ್ಬಗಳ ಪೈಕಿ ಶ್ರೀಕೃಷ್ಣ ಜನ್ಮಾಷ್ಠಮಿ ಎತ್ತರದ ಸ್ಥಾನ ಪಡೆದಿದೆ. ಷಣ್ಮುಖ ಯುವಕ ಮಂಡಲವು ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕಾರ್ಯಕ್ರಮಗಳ ಮೂಲಕ ಗುರುತಿಸಿಕೊಂಡ ಕಾರಣಕ್ಕೆ ಜನರ ಮನಸ್ಸಲ್ಲಿ ಸ್ಥಿರವಾದ ಸ್ಥಾನ ಪಡೆದಿದೆ ಎಂದು ಹೇಳಿದರು.

ಗೌರಿ ಮಹಿಳಾ ಮಂಡಲದ ಗೌರವಾಧ್ಯಕ್ಷರಾದ ರತ್ನಾವತಿ ಪ್ರಾರ್ಥಿಸಿದರು. ಷಣ್ಮುಖ ಯುವಕ ಮಂಡಲದ ಅಧ್ಯಕ್ಷ ಗೌತಮ್‌ರಾಜ್ ಕರುಂಬಾರು ಸ್ವಾಗತಿಸಿದರು. ಪ್ರ.ಕಾರ್ಯದರ್ಶಿ ಮನೋಜ್ ಸುವರ್ಣ ಸೊರಕೆ ವಂದಿಸಿದರು. ಯುವಕ ಮಂಡಲದ ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಎಸ್.ಎಂ ಶರೀಫ್ ಸರ್ವೆ ಹಾಗೂ ರಾಜೇಶ್ ಎಸ್.ಡಿ ಕಾರ್ಯಕ್ರಮ ನಿರೂಪಿಸಿದರು. ಯುವಕ ಮಂಡಲದ ಕೋಶಾಧಿಕಾರಿ ಗುರುರಾಜ್ ಪಟ್ಟೆಮಜಲು, ನಿಕಟಪೂರ್ವ ಅಧ್ಯಕ್ಷ ಕಮಲೇಶ್ ಎಸ್.ವಿ ಹಾಗೂ ಸದಸ್ಯರು, ಗೌರಿ ಮಹಿಳಾ ಮಂಡಲದ ಸದಸ್ಯರು ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

ಮೆರವಣಿಗೆ:
ಭಕ್ತಕೋಡಿ ಅಂಗನವಾಡಿ ವಠಾರದಿಂದ ಭಕ್ತಕೋಡಿ ಶ್ರೀರಾಮ ಭಜನಾ ಮಂದಿರದವರೆಗೆ ಶ್ರೀಕೃಷ್ಣ ವೇಷಧಾರಿ ಪುಟಾಣಿಗಳ ಜೊತೆ ಸಾರ್ವಜನಿಕ ಭಜನಾ ಮೆರವಣಿಗೆ ನಡೆಯಿತು. ನೂರಾರು ಮಂದಿ ಪಾಲ್ಗೊಂಡಿದ್ದರು. ಸಭಾ ಕಾರ್ಯಕ್ರಮದ ಬಳಿಕ ಮಕ್ಕಳಿಗೆ, ಪುರುಷರಿಗೆ ಹಾಗೂ ಮಹಿಳೆಯರಿಗೆ ವಿವಿಧ ಸ್ಪರ್ಧಾ ಕಾರ್ಯಕ್ರಮ ನಡೆಯಿತು. ಯುವಕ ಮಂಡಲದ ಗೌರವ ಸಲಹೆಗಾರ ವೀರಪ್ಪ ಗೌಡ ಕರುಂಬಾರುರವರ ಪ್ರಾಯೋಜಕತ್ವದಲ್ಲಿ ಸಾರ್ವಜನಿಕ ಅನ್ನದಾನ ಏರ್ಪಡಿಸಲಾಗಿತ್ತು.

[box type=”note” bg=”#” color=”#” border=”#” radius=”22″]

ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ಸಕ್ರಿಯ: ಶ್ರೀ ಷಣ್ಮುಖ ಯುವಕ ಮಂಡಲವು ಸರ್ವೆ ಗ್ರಾಮದ ಸಾಮಾಜಿಕ, ಶೈಕ್ಷಣಿಕ ಕಾಳಜಿ ವಹಿಸಿ ಕೆಲಸ ಮಾಡುವ ಕ್ರಿಯಾಶೀಲ ಯುವಕರ ತಂಡವಾಗಿದ್ದು ಜಿಲ್ಲೆಯಲ್ಲಿಯೇ ಅತ್ಯುತ್ತಮ ತಂಡ ಎನ್ನುವ ಹೆಗ್ಗಳಿಕೆ ನಮ್ಮ ತಂಡಕ್ಕಿದೆ. ಕಳೆದ 21 ವರ್ಷಗಳಿಂದ ವಿವಿಧ ಕಾರ್ಯಕ್ರಮಗಳ ಮೂಲಕ ಗುರುತಿಸಿಕೊಂಡಿರುವ ಯುವಕ ಮಂಡಲವು 2007ರಲ್ಲಿ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯಿಂದ ಜಿಲ್ಲಾ ಪ್ರಶಸ್ತಿ ಪಡೆದುಕೊಂಡಿದೆ. 2018 ಹಾಗೂ 2019ರಲ್ಲಿ ಸತತವಾಗಿ ಎರಡು ಬಾರಿ ದ.ಕ ಜಿಲ್ಲೆಯಲ್ಲಿ ಪ್ರಥಮ ಹಾಗೂ ರಾಜ್ಯದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದು ಕೇಂದ್ರ ಸರಕಾರದಿಂದ ರೂ.1,20,000 ನಗದು ಪುರಸ್ಕಾರ ಪಡೆದುಕೊಂಡಿದೆ. ನಮ್ಮ ಯುವಕ ಮಂಡಲಕ್ಕೆ ಗ್ರಾಮಸ್ಥರು ಸಂಪೂರ್ಣ ಸಹಕಾರ ನೀಡುತ್ತಿದ್ದು ಮುಂದಕ್ಕೂ ಯುವಕ ಮಂಡಲದ ಮೂಲಕ ವಿವಿಧ ಕಾರ್ಯಕ್ರಮ ನಡೆಯಲಿದೆ.

 

-ಗೌತಮ್‌ರಾಜ್ ಕರುಂಬಾರು, ಅಧ್ಯಕ್ಷರು ಷಣ್ಮುಖ ಯುವಕ ಮಂಡಲ ಸರ್ವೆ[/box]

LEAVE A REPLY

Please enter your comment!
Please enter your name here